ಜೋಧಪುರ: ಪಾಕಿಸ್ತಾನದ ಬಾಲಾಕೋಟ್‌ನ ಜೈಷ್‌ ಉಗ್ರ ಶಿಬಿರ ಮತ್ತು ತರಬೇತಿ ನೆಲೆಗಳ ಮೇಲೆ ದಾಳಿ ನಡೆಸಿದ ಮಿರಾಜ್‌-2000 ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರೇ, ರಾಜಸ್ಥಾನದ ಕುಟುಂಬವೊಂದರಲ್ಲಿ ಹೊಸ ಮಿರಾಜ್‌ ಉದಯಿಸಿದೆ. 

ಹೌದು! ಈ ದಾಳಿ ಪಾಕ್‌ನಲ್ಲಿ ನಡೆದ ಸಂದರ್ಭದಲ್ಲಿ ಈ ಮಗು ರಾಜಸ್ಥಾನದಲ್ಲಿ ಜನಿಸಿದೆ. ಈ ಹಿನ್ನೆಲೆಯಲ್ಲಿ ಮತ್ತು ಈ ಮಗುವಿನ ಕುಟುಂಬದ ಬಹುತೇಕ ಸದಸ್ಯರು ಭಾರತೀಯ ಸೇನೆ ವಿವಿಧ ಹುದ್ದೆಗಳಲ್ಲಿ ಇರುವ ಹಿನ್ನೆಲೆಯಲ್ಲಿ ಮಗುವಿಗೆ ಮಿರಾಜ್‌ ಸಿಂಗ್‌ ರಾಥೋರ್‌ ಎಂದು ನಾಮಕರಣ ಮಾಡಿದ್ದಾರೆ. 

ಈ ಹೆಸರಿನ ಮೂಲಕ ಅದರ ಶಕ್ತಿ ಸಾಮರ್ಥ್ಯವನ್ನು ಮುಂದಿನ ಪೀಳಿಗೆ ಅರಿಯಲಿ ಎಂಬುದು ಅವರ ಸದುದ್ದೇಶ. ಅಂದಹಾಗೆ ಈ ಮಗುವಿನ ತಂದೆ ಮಹಾವೀರ ಸಿಂಗ್‌ ಶಿಕ್ಷಕರಾಗಿದ್ದರೆ, ಮಗುವಿನ ಚಿಕ್ಕಪ್ಪ ನೈನಿತಾಲ್‌ನಲ್ಲಿ ವಾಯುಸೇನೆಯ ಸಿಬ್ಬಂದಿ.