Asianet Suvarna News Asianet Suvarna News

Rajasthan cabinet ರಾಜಸ್ಥಾನ ಕಾಂಗ್ರೆಸ್‌ನಲ್ಲಿ ತಳಮಳ, ರಾಜೀನಾಮೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದೇನೆ ಎಂದ ಸಿಎಂ ಗೆಹ್ಲೋಟ್!

  • ರಾಜಸ್ಥಾನ ಸಂಪುಟ ಪುನಾರಚನೆಯಿಂದ ಬಿರುಕು
  • ಸಿಎಂ ಬದಲಾವಣೆ ಚರ್ಚಿಗೆ ಸಿಎಂ ಅಶೋಕ್ ಗೆಹ್ಲೋಟ್ ಗರಂ
  • ಸೋನಿಯಾ ಗಾಂಧಿ ಬಳಿ ಶಾಶ್ವತ ರಾಜೀನಾಮೆ ಪತ್ರ ಇದೆ
Rajasthan Cabinet Reshuffle My resignation permanently present with Sonia Gandhi says CM Ashok Gehlot ckm
Author
Bengaluru, First Published Apr 23, 2022, 9:01 PM IST

ನವದೆಹಲಿ(ಏ.23): ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಕು ಹೆಚ್ಚಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣದ ನಡುವಿನ ತಿಕ್ಕಾಟ, ಸಂಪುಟ ಪುನಾರಚನೆ ಸರ್ಕಸ್‌ನಿಂದ ರಾಜಸ್ಥಾನ ಸರ್ಕಾರದಲ್ಲಿ ತಳಮಳ ಹೆಚ್ಚಾಗಿದೆ. ಇದರ ಬೆನ್ನಲ್ಲೇ ನನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಲಾಗಿದೆ ಎಂದಿದ್ದಾರೆ. ಈ ಮೂಲಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಸೂಚನೆ ನೀಡಿದ್ದಾರೆ.

ಸಿಎಂ ಬದಲಾವಣೆ ಪ್ರಶ್ನೆ ಪದೇ ಪದೇ ಕೇಳಬೇಕಾಗಿಲ್ಲ. ಕಾರಣ ನಾನು ಈಗಾಗಲೇ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಈ ಪತ್ರ ಶಾಶ್ವತವಾಗಿ  ಇರಲಿದೆ. ಹೀಗಾಗಿ ಸಿಎಂ ಬದಲಾಯಿಸಬೇಕು ಎಂದಾಗ ನನ್ನ ರಾಜೀನಾಮೆ ಪತ್ರ ಪರಿಗಣಿಸುತ್ತಾರೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

300 ವರ್ಷ ಹಳೆಯ ಹಿಂದೂ ದೇಗುಲ ಧ್ವಂಸ, ರಾಜಸ್ಥಾನ ಸರ್ಕಾರ ವಿರುದ್ಧ ಆಕ್ರೋಶ!

ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ ಇದೀಗ ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಒಳಜಗಳ ಹಾಗೂ ಬಣ ರಾಜಕೀಯವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತ ಸಚಿನ್ ಪೈಲೆಟ್ ಬಣ ಸಿಎಂ ಸ್ಥಾನದ ಹೋರಾಟದಲ್ಲಿ ಬಹುತೇಕ ಯಶಸ್ಸು ಕಂಡಿದೆ. 

ಸೋನಿಯಾ ಗಾಂಧಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ ಸಚಿನ್ ಪೈಲೈಟ್ ರಾಜಸ್ಥಾನ ಸರ್ಕಾರದಲ್ಲಿ ಬದಲಾವಣೆ ಸೂಚನೆ ನೀಡಿದ್ದರು. ಈ ಭೇಟಿಯಿಂದ ಕೆರಳಿದ ಅಶೋಕ್ ಗೆಹ್ಲೋಟ್, ಇದೀಗ ರಾಜೀನಾಮೆ ಮಾತು ಆಡಿದ್ದಾರೆ. 

 

 

ರಾಜಸ್ಥಾನದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗಿದೆ. ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಈಗಿನಿಂದಲೇ ತಯಾರಿ ಮಾಡಬೇಕು. ಹೀಗಾದಲ್ಲಿ ಮಾತ್ರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲು ಸಾಧ್ಯ. ಇದಕ್ಕೆ ಬದಲಾವಣೆ ಅಗತ್ಯ ಎಂದು ಸಚಿನ್ ಪೈಲೈಟ್ ಮಾಧ್ಯಮದ ಜೊತೆ ಹೇಳಿದ್ದರು. 2023ರಲ್ಲಿ ರಾಜಸ್ಥಾನ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಈಗಿನಿಂದಲೇ ಬದಲಾವಣೆ ಹಾಗೂ ತಯಾರಿ ಮಾಡಬೇಕಿಗೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ. ಸಚಿನ್ ಪೈಲೆಟ್ ಹಾಗೂ ಸೋನಿಯಾ ಗಾಂಧಿ ಭೇಟಿಯಿಂದ ಆಕ್ರೋಶಗೊಂಡಿರುವ ಗೆಹ್ಲೋಟ್ ಬಣ, ಇದೀಗ ರಾಜಕೀಯ ರಣತಂತ್ರ ಹೆಣೆಯಲು ಸಜ್ಜಾಗಿದೆ.

ನಮ್ಜೊತೆ ಎಲ್ಲಿಯವರೆಗೆ ಇರುತ್ತೀರಿ? ಕಾಂಗ್ರೆಸ್ ಪ್ರಶ್ನೆಗೆ ಪ್ರಶಾಂತ್ ಕಿಶೋರ್ ಕೊಟ್ಟ ಉತ್ತರವಿದು! 

300 ವರ್ಷ ಹಳೆಯ ದೇಗುಲ ಧ್ವಂಸದಿಂದ ರಾಜಸ್ಥಾನ ಸರ್ಕಾರಕ್ಕೆ ಹಿನ್ನಡೆ
ದೇಶದ ಹಲವು ಕಡೆ ಅಕ್ರಮ ಕಟ್ಟಡಗಳು ಹಾಗೂ ಗಲಭೆಕೋರರ ಆಸ್ತಿಪಾಸ್ತಿಗೆ ಬುಲ್ಡೋಜರ್‌ ಪ್ರಯೋಗ ನಡೆದಿರುವುದು ವಿವಾದ ಸೃಷ್ಟಿಸಿರುವ ನಡುವೆಯೇ ರಾಜಸ್ಥಾನದ ಅಳ್ವರ್‌ ಜಿಲ್ಲೆಯ ರಾಜಗಢದ 300 ವರ್ಷ ಪುರಾತನ ಶಿವ ದೇಗುಲ ಸೇರಿ 3 ದೇವಾಲಯಗಳು ಹಾಗೂ 86 ಇತರ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.ಈ ಪ್ರದೇಶದ ಮುಖ್ಯರಸ್ತೆಗೆ ಸಂಪರ್ಕ ರಸ್ತೆ ಕಲ್ಪಿಸುವ ಉದ್ದೇಶದಿಂದ ರಸ್ತೆ ನಿರ್ಮಾಣ ಕಾರ‍್ಯ ಕೈಗೊಳ್ಳಲಾಗಿತ್ತು. ಈ ವೇಳೆ ದೇವಾಲಯ ಧ್ವಂಸ ನಡೆದಿದೆ. ಪ್ರಕರಣ ಸಂಬಂಧ ನಗರಾಡಳಿತ ಹಾಗೂ ರಾಜಗಢದ ಕಾಂಗ್ರೆಸ್‌ ಶಾಸಕಿ ವಿರುದ್ಧ ಹಿಂದೂಪರ ಸಂಘಟನೆಗಳು ರಾಜಗಢ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿವೆ.

ಸೋನಿಯಾ ಗಾಂಧಿ ಭೇಟಿ ಮಾಡಿದ ಸಚಿನ್ ಪೈಲೈಟ್
ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ಆಂತರಿಕ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ, ಪಕ್ಷದಲ್ಲಿ ತಮ್ಮ ಮುಂದಿನ ಪಾತ್ರದ ಬಗ್ಗೆ ಚರ್ಚಿಸುವ ಸಲುವಾಗಿ ಪಕ್ಷದ ಯುವ ನಾಯಕ ಸಚಿನ್‌ ಪೈಲಟ್‌ ಗುರುವಾರ ಇಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜಸ್ಥಾನದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅದರಲ್ಲಿ ತಮ್ಮ ಪಾತ್ರದ ಬಗ್ಗೆ ಸಚಿನ್‌ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ಸಿಎಂ ಆಗಿರುವ ಆಸೆ ಹೊಂದಿರುವ ಸಚಿನ್‌ ಪೈಲಟ್‌, ಹಾಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬಣದಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ.

Follow Us:
Download App:
  • android
  • ios