ಸ್ಫೀಕರ್ ಓಂ ಬಿರ್ಲಾಗೆ ಪತ್ರ; ಮತ್ತೆ ಸಿಡಿದೆದ್ದ ರಾಹುಲ್ ಗಾಂಧಿ
ನನ್ನ ಭಾಷಣದ ಅಂಶಗಳು ತೆಗೆದು ಹಾಕಲು ನಿಮ್ಮ ಮೇಲೆ ಒತ್ತಡ ಹಾಕಲಾಗಿತ್ತೆ ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.
ನವದೆಹಲಿ:ಲೋಕಸಭಾ ಸಭಾಪತಿ ಓಂ ಬಿರ್ಲಾ (Speaker Om Birla) ಅವರಿಗೆ ಪತ್ರ ಬರೆದಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Opposition Leader Rahul Gandhi), ನನ್ನ ಭಾಷಣದ ಮಹತ್ವಪೂರ್ಣ ಅಂಶಗಳನ್ನು ಕಡಿತದಿಂದ ತೆಗೆದು ಹಾಕಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಭಾಷಣದ ಕೆಲವು ಅಂಶಗಳನ್ನು ತೆಗೆದು ಹಾಕಲಾಗಿದೆ. ಸಂಸದರ ದಾಖಲೆಗಳಿಂದ ಮಹತ್ವಪೂರ್ಣ ಮಾಹಿತಿ ತೆಗೆದು ಹಾಕಿರೋದು ಕಂಡು ಆಶ್ಚರ್ಯವಾಗುತ್ತಿದೆ. ತೆಗೆದು ಹಾಕಲಾಗಿರುವ ಪ್ರಮುಖ ಅಂಶಗಳನ್ನು ಮತ್ತೆ ದಾಖಲೆಯಲ್ಲಿ ಸೇರಿಸುವ ಬಗ್ಗೆಯೂ ರಾಹುಲ್ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ. ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಟೀಕೆಗಳನ್ನು ತೆಗೆದುಹಾಕುವುದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು ನನ್ನ ಭಾಷಣದ ಅಂಶಗಳು ತೆಗೆದು ಹಾಕಲು ನಿಮ್ಮ ಮೇಲೆ ಒತ್ತಡ ಹಾಕಲಾಗಿತ್ತೆ ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.
ಇಂದು ಸದನದಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕಡತದಿಂದ ಪದಗಳನ್ನು ತೆಗೆದು ಹಾಕುವ ಕುರಿತು ಮಾತನಾಡಿದ್ದರು. ಸತ್ಯ ಸತ್ಯವಾಗಿಯೇ ಇರುತ್ತದೆ. ಸತ್ಯವನ್ನು ಪ್ರದರ್ಶನ ಮಾಡೋಕೆ ಆಗಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ಮೋದಿಜೀ ಅವರ ಜಗತ್ತಿನಲ್ಲಿ ಸತ್ಯವನ್ನು ಪ್ರದರ್ಶನ ಮಾಡಲಾಗುತ್ತದೆ. ಆದರೆ ವಾಸ್ತವ ಜಗತ್ತಿನಲ್ಲಿ ಸತ್ಯವನ್ನು ಎಂದಿಗೂ ಪ್ರದರ್ಶಿಸಲು ಸಾಧ್ಯವಿಲ್ಲ. ನಾನು ಹೇಳಬೇಕಿತ್ತೋ ಅದನ್ನು ಸಂಸತ್ತಿನಲ್ಲಿ ಹೇಳಿದ್ದೇನೆ ಎಂದಿದ್ದರು. ಇತ್ತ ಅಖಿಲೇಶ್ ಯಾದವ್ ಕವಿತೆ ಹೇಳುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ದೇಶದಲ್ಲಿ ಪರೀಕ್ಷಾ ಮಾಫಿಯಾ
ಕೇಂದ್ರ ಸರ್ಕಾರ ಯುವ ಜನತೆಗೆ ಕೆಲಸ ಕೊಡಲು ಇಷ್ಟಪಡಲ್ಲ. ಹಾಗಾಗಿಯೇ ಪರೀಕ್ಷಾ ಪತ್ರಿಕೆಗಳನ್ನು ಲೀಕ್ ಆಗುತ್ತಿವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ, ಸಂಸದ ಅಖಿಲೇಶ್ ಯಾದವ್ ಆರೋಪಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಪ್ರಕರಣ ಕೋರ್ಟ್-ಕಚೇರಿಯತ್ತ ಹೋಗುತ್ತದೆ. ಕಳೆದ ಏಳು ವರ್ಷಗಳಿಂದ ದೇಶದಲ್ಲಿ ಪರೀಕ್ಷಾ ಮಾಫಿಯಾ ನಡೆಯುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಹುದ್ದೆಗಳ ಭರ್ತಿ ನಡೆಯುತ್ತಿಲ್ಲ ಎಂದು ಹೇಳಿದ್ದರು.
ಕಡತದಿಂದ ವಿವಾದಿತ ಅಂಶ ತೆಗೆದಿದ್ದಕ್ಕೆ ರಾಹುಲ್ ಗಾಂಧಿ ಮೊದಲ ಪ್ರತಿಕ್ರಿಯೆ
ರಾಹುಲ್ ಗಾಂಧಿ ಪರ ನಿಂತ ಶಿವಸೇನೆ
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಬಿಜೆಪಿ ಸೇರಿದಂತೆ ಎನ್‌ಡಿಎ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಶಿವಸೇನೆ ನಾಯಕ ಸಂಜಯ್ ರಾವತ್, ರಾಹುಲ್ ಗಾಂಧಿಯವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಹಿಂದೂ ಸಮಾಜವನ್ನ ಅವಹೇಳನ ಮಾಡುವ ರೀತಿಯಲ್ಲಿ ಮಾತುಗಳನ್ನಾಡಿಲ್ಲ. ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ. ಮೋದಿಜೀ ಅಂದ್ರೆ ಹಿಂದುತ್ವ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿಯ ಯೋಚನೆ ಹಾಗೂ ಚಿಂತನೆಗಳಿಗಿಂತ ಹಿಂದೂ ಸಮಾಜ ಎತ್ತರವಾಗಿದೆ. ದ್ವೇಷ ಹರಡುವಿಕೆ ಹಿಂದುತ್ವ ಅಲ್ಲ. ಕಳೆದ 10 ವರ್ಷಗಳಿಂದ ದೇಶದಲ್ಲಿ ಬಿಜೆಪಿ ದ್ವೇಷ ಬಿತ್ತುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಸಂಜಯ್ ರಾವತ್ ವಾಗ್ದಾಳಿ ನಡೆಸಿದರು.
ರಾಗಾ, ಅಖಿಲೇಶ್ ವಿರುದ್ಧ ಬಿಜೆಪಿ ವಾಗ್ದಾಳಿ
ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಭಾಷಣಕ್ಕೆ ಇಂದು ಬಿಜೆಪಿ ಸಂಸದ ಸಂತೋಷ್ ಪಾಂಡೆ ತಿರುಗೇಟು ನೀಡಿದರು. ನಿನ್ನೆ ರಾಹುಲ್ ಗಾಂಧಿ, ಇಂದು ಅಖಿಲೇಶ್ ಯಾದವ್ ಮಾತನಾಡಿದ ಶೈಲಿ ಅವರ ವ್ಯಕ್ತಿತ್ವವನ್ನು ತೋರಿಸುತ್ತಿದೆ. ಕಾರಣ ಇಬ್ಬರು ಮಾತನಾಡಿದ್ದು ಸಂಸದೀಯ ಭಾಷೆ ಅಲ್ಲ. ಸದನದಲ್ಲಿ ಈ ರೀತಿ ಮಾತನಾಡಬಾರದು ಎಂದು ಹೇಳಿದರು.
ಅಯೋಧ್ಯೆ ಗೆಲುವಿನ ಬಗ್ಗೆ ಕವಿತೆ ಹೇಳಿ ಬಿಜೆಪಿಗೆ ಟಾಂಗ್ ಕೊಟ್ಟ ಅಖಿಲೇಶ್ ಯಾದವ್