ನವದೆಹಲಿ (ಫೆ.  02)   ಕೇಂದ್ರ ಬಜೆಟ್ ಮಂಡನೆಯಾಗಿ ದಿನ ಕಳೆದರೂ ಸೋಶಿಯಲ್ ಮೀಡಿಯಾದಲ್ಲಿ  ಚರ್ಚೆ ನಿಂತಿಲ್ಲ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದರೆ ಟ್ರೋಲಿಗೆ ಗುರಿಯಾಗಿರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಬಜೆಟ್ ಮಂಡನೆ ವೇಳೆ ರಾಹುಲ್ ಕಾಣಿಸಿಕೊಂಡ ರೀತಿ ಟ್ರೋಲ್  ಪೇಜ್ ಗಳಿಗೆ ಆಹಾರವಾಗಿದೆ.

ಬಜೆಟ್ ಸಂಪೂರ್ಣ ವಿವರ; ಯಾವುದು ಏರಿಕೆ? ಯಾವುದು ಇಳಿಕೆ? 

ನಿರ್ಮಲಾ ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ವಾಹಿನಿಗಳಮ ಕ್ಯಾಮರಾ ರಾಹುಲ್ ಮೇಲೆ ಇತ್ತು.  ಮಾಸ್ಕ್ ಧರಿಸಿದ್ದ ರಾಹುಲ್ ಬೇಸರದಿಂದಲೇ ಇದ್ದರು. 

ರಾಹುಲ್ ಹಿಂದೆ ಸಂಸತ್ ನಲ್ಲಿ ಕಣ್ಣು ಹೊಡೆದಿದ್ದ ಪೋಟೋಗಳನ್ನು ಇಟ್ಟುಕೊಂಡು ಮೆಮೆ ಕ್ರಿಯೇಟ್ ಮಾಡಲಾಗಿದೆ. ಒಂದಕ್ಕೆ ಬಯಾಲಾಜಿ ಕ್ಲಾಸ್.. ಇನ್ನೊಂದಕ್ಕೆ ಮ್ಯಾಥ್ಸ್ ಕ್ಲಾಸ್ ಎಂದು ಸೋಶಿಯಲ್ ಮೀಡಿಯಾದವರೇ ಕ್ಯಾಪ್ಶನ್ ನೀಡಿದ್ದಾರೆ. 

ಕೇಂದ್ರ  ಬಜೆಟ್ ಮತ್ತು ತೈಲ ದರ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ತೈಲದ ಮೇಲೆ ಕೃಷಿ ಸೆಸ್ ಹಾಕಿರುವುದಕ್ಕೆ ವ್ಯಾಪಕ ವಿರೋಧಗಳು  ಕೇಳಿಬಂದಿವೆ .