ಹಿಸುವಾ (ಅ.24): ಲಡಾಖ್‌ನಲ್ಲಿ ಚೀನಾ ಸೇನೆ ಭಾರತದ ಭೂ ಭಾಗವನ್ನು ಅತಿಕ್ರಮಿಸಿಕೊಂಡಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಚೀನಾದ ಸೇನೆಯನ್ನು ಯಾವಾಗ ಗಡಿಯಿಂದ ಆಚೆ ಹಾಕುತ್ತೇವೆ ಎಂಬುದನ್ನು ಮೋದಿ ದೇಶಕ್ಕೆ ತಿಳಿಸಬೇಕು ಎಂದು ರಾಹುಲ್‌ ಬೇಡಿಕೆ ಇಟ್ಟಿದ್ದಾರೆ.

ಬಿಹಾರದಲ್ಲಿ ಮೊದಲ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, ಚೀನಾದ ಸೇನೆ ಭಾರತದ 1200 ಕಿ.ಮೀ.ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದೆ. ಆದರೆ, ನಮ್ಮ ಪ್ರಧಾನಿಯವರು ಯಾರೂ ಗಡಿಯ ಒಳಕ್ಕೆ ಬಂದೇ ಇಲ್ಲ ಎಂದು ಹೇಳುವ ಮೂಲಕ ಯೋಧರನ್ನು ಅಪಮಾನಿಸಿದ್ದಾರೆ ಎಂದು ಹರಿಹಾಯ್ದರು.

ಇದಕ್ಕೂ ಮುನ್ನ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಮಾತನಾಡಿದ್ದ ಮೋದಿ, ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದನ್ನು ಉಲ್ಲೇಖಿಸಿ, ಬಿಹಾರದ ವೀರ ಪುತ್ರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು ಭಾರತ ಮಾತೆ ತಲೆ ತಗ್ಗಿಸಲು ಬಿಡಲಿಲ್ಲ ಎಂದು ಹೇಳಿದ್ದರು.