* ಮೊದಲ ಬಜೆಟ್‌ನಲ್ಲೇ ಆಪ್ ಸರ್ಕಾರ ಘೋಷಣೆ* ಜು.1ರಿಂದ ಪಂಜಾಬ್‌ನಲ್ಲಿ ಉಚಿತ ವಿದ್ಯುತ್* ತಿಂಗಳಿಗೆ 1 ಮನೆಗೆ 300 ಯುನಿಟ್‌ವರೆಗೆ ಉಚಿತ
ಚಂಡೀಗಢ(ಜೂ.28): ಪಂಜಾಬ್‌ನಲ್ಲಿ ಜು.1ರಿಂದ ಎಲ್ಲಾ ಮನೆಗಳಿಗೂ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಲಭಿಸಲಿದೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿರುವ ಆಮ್ ಆದ್ಮಿ ಸರ್ಕಾರ, ಸೋಮವಾರ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಈ ಘೋಷಣೆ ಮಾಡಿದೆ.
ಉಚಿತ ವಿದ್ಯುತ್ ಗೃಹಬಳಕೆಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ ರೈತರಿಗೆ ಈ ಮೊದಲಿನಂತೆ ಅನಿಯಮಿತ ವಿದ್ಯುತ್ ಉಚಿತವಾಗಿ ಸಿಗುವುದು ಮುಂದುವರೆಯಲಿದೆ ಎಂದು ಬಜೆಟ್ ಮಂಡಿಸಿದ ಹಣಕಾಸು ಸಚಿವ ಹರ್‌ಪಾಲ್ ಸಿಂಗ್ ಚೀಮಾ ಪ್ರಕಟಿಸಿದ್ದಾರೆ.
ಇದಲ್ಲದೆ, ದೆಹಲಿಯಲ್ಲಿ ದೊಡ್ಡ ಯಶಸ್ಸು ಕಂಡಿರುವ ಮೊಹಲ್ಲಾ ಕ್ಲಿನಿಕ್‌ಗಳನ್ನು ಪಂಜಾಬ್‌ನಲ್ಲೂ ಸ್ಥಾಪಿಸಲು ನಿರ್ಧರಿಸಲಾಗಿದೆ. 77 ಕೋಟಿ ರು. ವೆಚ್ಚದಲ್ಲಿ 117 ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. 1.55 ಲಕ್ಷ ಕೋಟಿ ರು. ಮೊತ್ತದ ಬಜೆಟ್‌ನಲ್ಲಿ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ.
16 ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವುದು, 26 ಸಾವಿರ ಸರ್ಕಾರಿ ನೌಕರರ ನೇಮಕ, 36,000 ಗುತ್ತಿಗೆ ನೌಕರರ ಕಾಯಮಾತಿ, ದೆಹಲಿ ಮಾದರಿಯಲ್ಲಿ 100 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು, 500 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್‌ರೂಂ ಆರಂಭಿಸುವುದು, ರೈತರು ಹೊಲದಲ್ಲಿ ಕೂಳೆ ಸುಡುವುದನ್ನು ತಪ್ಪಿಸಲು 200 ಕೋಟಿ ರು. ಮೊತ್ತದ ಯೋಜನೆ ಜಾರಿ, ಭ್ರಷ್ಟಾಚಾರ ನಿರ್ಮೂಲನೆಗೆ ಇನ್ನಷ್ಟುಕ್ರಮಗಳು ಹೀಗೆ ಹಲವು ಜನಸ್ನೇಹಿ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
