ಲೂಧಿಯಾನ (ಆ. 12)   ತಂದೆ ಸಾವಿಗೀಡಾಗಿ ಕೆಲವೇ ಗಂಟೆಗಳಲ್ಲಿ ಮಗಳು ಅಪ್ಪನ ದಾರಿ ಹಿಡಿದಿದ್ದಾಳೆ.  ಮಗಳನ್ನು ತಂದೆ ಪ್ರೀತಿಯಿಂದ 'ಮೋಟಾ ಪುಟ್' ಎಂದು ಕರೆಯುತ್ತಿದ್ದ ಕ್ಷಣಗಳು ಇನ್ನು ನೆನಪು ಮಾತ್ರ.

ಮಗಳು ಗೋಬಿ ಮಂಚೂರಿ ಆಸೆಪಟ್ಟು  ಬೇಡಿಕೆ ಇಟ್ಟಾಗ  ಒಂದೇ ಕಾರಣಕ್ಕೆ ದೂರದ ಲೂಧಿಯಾನಕ್ಕೆ ತೆರಳಿ ತಂದುಕೊಟ್ಟ ದಾಖಲೆಗಳು ಇವೆ.  ಮಗಳು 18  ವರ್ಷಗಳ ಕಾಲ  ಸಕ್ಕರೆ ಕಾಯಿಲೆಯಿಂದ ನರಳಿದಳು. ಇದೊಂದು ತಂದೆ-ಮಗಳ ಮುರಿಯದ ಬಾಂಧವ್ಯದ ಕತೆ.

ಸಕ್ಕರೆಕಾಯಿಲೆ ಮಗಳನ್ನು ಆವರಿಸಿಕೊಂಡು ಕಿಡ್ನಿಯನ್ನು ಮೊದಲು ಬಲಿ ಪಡೆದಿದೆ. ನಂತರ ಕಣ್ಣಿನ ದೃಷ್ಟಿ ಕಿತ್ತುಕೊಂಡಿದೆ. ತಂದೆ ಪಾಯಲ್ ಠಾಣೆಯ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಜಸ್ಪಾಲ್ ಸಿಂಗ್ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡಿದ್ದಾರೆ.

ಕೊರೋನಾಕ್ಕೆ ರಷ್ಯಾ ಲಸಿಕೆ; ಏನು? ಏತ್ತ?

ಇಂಥ ಜಸ್ಪಾಲ್ ಸಿಂಗ್( 49) ಕೊರೋನಾ ಸೋಂಕಿಗೆ ಗುರಿಯಾಗಿ ಸಾವನ್ನಪ್ಪುತ್ತಾರೆ. ಸೋಮವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.   ಆಘಾತಕ್ಕೆ ಒಳಗಾದ ಮಗಳು  ನವ್ ಪ್ರೀತ್ ಕೌರ್  (24)   ಕೆಲವೇ ಗಂಟೆ ನಂತರ ಮನೆಯಲ್ಲಿ ನಿಧನರಾಗುತ್ತಾರೆ. ನಿಧನವಾಗುವುದಕ್ಕೂ ಮುನ್ನ 'ಡ್ಯಾಡಿ ಜಿ, ಡ್ಯಾಡಿ ಜಿ' ಎಂದು ಕರೆಯುತ್ತಲೇ ಪ್ರಾಣ ಬಿಟ್ಟಳು ಎಂದು ಕುಟುಂಬಸ್ಥರು ಕೊನೆಯ ನೋವಿನ ಕ್ಷಣಗಳನ್ನು ವಿವರಿಸುತ್ತಾರೆ.

ಜಸ್ಪಾಲ್ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ 25 ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಿತ್ತು ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಲೂಧಿಯಾನ ಕಮಿಷನರತ್ ರಾಕೇಶ್ ಅಗರ್‌ ವಾಲ್ ತಿಳಿಸಿದ್ದಾರೆ.