ತನ್ನ ಪಿಜ್ಜಾ ಡೆಲಿವರಿ ಪಡೆಯಲು ಹೊರನಡೆದ ಅಧಿಕಾರಿಯೊಬ್ಬರು, ಸ್ಫೋಟದ ನಂತರ ಸರಿಯಾಗಿ ಹಾದು ಹೋಗಿದ್ದ ಕಚೇರಿಯ ಸಮೀಪದಲ್ಲಿ ನಿಲ್ಲಿಸಿದ್ದ ಬಿಳಿ ಸ್ವಿಫ್ಟ್ ಕಾರನ್ನು ಮೊದಲು ಗುರುತಿಸಿದರು. ಪೊಲೀಸರು ಇದೀಗ ಕಾರಿನ ಹುಡುಕಾಟದಲ್ಲಿದ್ದಾರೆ.
ಮೊಹಾಲಿ(ಮೇ. 10): ಪಂಜಾಬ್ ನ (Punjab) ಮೊಹಾಲಿಯಲ್ಲಿರುವ (Mohali) ಪೊಲೀಸ್ ಇಲಾಖೆಯ (Police Department) ಗುಪ್ತಚರ ಕೇಂದ್ರ ಕಚೇರಿಯ ( intelligence headquarters) ಮೇಲೆ ರಾಕೆಟ್ ತರಹದ ದಾಳಿಯ (Rocket Like Attack) ಕುರಿತಾಗಿ ಪೊಲೀಸರಿಗೆ ಮೊದಲ ಸುಳಿವು ಸಿಕ್ಕಿದೆ. ಅದಕ್ಕೆ ಕಾರಣವಾಗಿದ್ದು ಒಂದು ಪಿಜ್ಜಾ ಆರ್ಡರ್ (Pizza Order). ಕೇಂದ್ರ ಕಚೇರಿಗೆ ಬಂದಿದ್ದ ಪಿಜ್ಜಾ ಡೆಲಿವರಿಯಿಂದಾಗಿ ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಈ ದಾಳಿಯ ರೂವಾರಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ನಿನ್ನೆ ಸಂಜೆ 7:45 ರ ಸುಮಾರಿಗೆ, ರಾಕೆಟ್ ಚಾಲಿತ ಗ್ರೆನೇಡ್ ಅಥವಾ ಆರ್‌ಪಿಜಿ (RPG), ಗುಪ್ತಚರ ಕೇಂದ್ರ ಕಚೇರಿಯ ಮೂರನೇ ಮಹಡಿಗೆ ಬಡಿದು, ಗಾಜಿನ ಕಿಟಕಿಯನ್ನು ಒಡೆದುಹಾಕಿತ್ತು ಮತ್ತು ಫಾಲ್ಸ್ ಸೀಲಿಂಗ್‌ನ ಒಂದು ಭಾಗವು ಇದರ ಪರಿಣಾಮದಿಂದ ಕುಸಿತ ಕಂಡಿದೆ. ಸ್ಫೋಟದ ಕೆಲವೇ ನಿಮಿಷಗಳ ಮೊದಲು, ಗುಪ್ತಚರ ಅಧಿಕಾರಿಯೊಬ್ಬರು ಪಿಜ್ಜಾ ಡೆಲಿವರಿ ಪಡೆಯಲು ಹೊರಟಿದ್ದರು. ಇದರಿಂದಲೇ ಈಗ ಪ್ರಕರಣಕ್ಕೆ ಮೊದಲ ಸುಳಿವು ಸಿಕ್ಕಿದೆ.
ಅಧಿಕಾರಿ ಗೇಟ್‌ನಿಂದ ಹೊರಬರುತ್ತಿದ್ದಂತೆ, ಆಫೀಸ್‌ನ ಹತ್ತಿರ ನಿಂತಿದ್ದ ಬಿಳಿ ಸ್ವಿಫ್ಟ್ ಕಾರ್ ಅನ್ನು ಅಧಿಕಾರಿ ಗಮನಿಸಿದ್ದರು. ಗುಪ್ತಚರ ಕೇಂದ್ರದ ಮುಂದೆ ದೊಡ್ಡ ಕಾರ್ ಪಾರ್ಕಿಂಗ್ ಇದೆ. ಅಧಿಕಾತಿ ಪಿಜ್ಜಾ ಪಡೆದುಕೊಂಡು ಹಿಂತಿರುಗಿದ ವೇಳೆ, ಆರ್‌ಪಿಜಿ ಹಾರಿಸಲ್ಪಟ್ಟಿತು. ಪೊಲೀಸ್ ಅಧಿಕಾರಿ ಹೊರಬರುವ ಹೊತ್ತಿಗೆ ಅಲ್ಲಿದ್ದ ಕಾರು ಹೊರಟು ಹೋಗಿತ್ತು. ಇದೇ ಕಾರಣದಿಂದಾಗಿ ಪಂಜಾಬ್ ಪೊಲೀಸ್ ಅಧಿಕಾರಿಗಳು ಈ ಬಿಳಿ ಬಣ್ಣದ ಸ್ವಿಫ್ಟ್ ಕಾರಿನ ಹಿಂದೆ ಬಿದ್ದಿದ್ದಾರೆ.
ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಮತ್ತು ಪ್ರದೇಶದಲ್ಲಿ ಸುಮಾರು 7,000 ಮೊಬೈಲ್ ಫೋನ್ ಡಂಪ್‌ಗಳನ್ನು ಪರಿಶೀಲಿಸುವುದರ ಜೊತೆಗೆ, ಸಣ್ಣ ಗಾತ್ರದ ಆರ್‌ಪಿಜಿಯನ್ನು ಇಂಟರ್ನ್ಯಾಷನಲ್ ಬೋರರ್ (ಐಬಿ) ಬಳಿಯಿಂದ ಡ್ರೋನ ಡ್ರಾಪ್ ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ "ರಿಂದಾ" ದಾಳಿಯ ಹಿಂದೆ ಇರುವ ಸಾಧ್ಯತೆಯಿದೆ ಎಂದು ಪಂಜಾಬ್ ಪೊಲೀಸ್‌ನ ಮತ್ತೊಬ್ಬ ಉನ್ನತ ಅಧಿಕಾರಿ ಹೇಳಿದ್ದಾರೆ. ಗುಪ್ತಚರ ಕೇಂದ್ರ ಕಚೇರಿ ಮೇಲಿನ ದಾಳಿಯ ಮಾದರಿಯ ಪ್ರಕಾರ, ನಿರ್ಣಾಯಕವಾಗಿ ಹೇಳಲು ಇದು ಅಕಾಲಿಕವಾಗಿದ್ದರೂ, ರಿಂದಾ ಅವರ ಕೈಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು. ತಂಡಗಳು ಈ ಬಗ್ಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಆದರೆ ಪೊಲೀಸ್ ಠಾಣೆಗಳ ಮೇಲಿನ ದಾಳಿಯ ಹಿಂದಿನ ಮಾದರಿಯನ್ನು ಅವರು ಗಡಿಯಾಚೆಯಿಂದ ಯೋಜನೆ ಮಾಡಿರಬಹುದು ಎಂದು ಹೇಳಿದ್ದಾರೆ.
ಪಂಜಾಬ್ ಪೊಲೀಸ್ ಕಚೇರಿ ಮೇಲೆ ರಾಕೆಟ್ ಗ್ರೆನೇಡ್ ದಾಳಿ
ಈ ದಾಳಿಯು ಗುಪ್ತಚರ ಕೇಂದ್ರದ ಭದ್ರತೆಯನ್ನು ಬಲಪಡಿಸುವತ್ತ ಗಮನಹರಿಸಿದೆ. ಆವರಣದ ಉತ್ತಮ ಸಿಸಿಟಿವಿ ಕವರೇಜ್, ತೀವ್ರ ತಪಾಸಣೆ ಮತ್ತು ಕ್ಯಾಂಪಸ್‌ನಲ್ಲಿ ಬ್ಯಾರಿಕೇಡಿಂಗ್. ರಿಂದಾ ಗ್ಯಾಂಗ್ ರಾಜ್ಯದಲ್ಲಿ ಹೆಚ್ಚಿನ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಬಹುದು ಎಂಬ ಹೆಚ್ಚಿನ ಮಾಹಿತಿಯೊಂದಿಗೆ, ಅಧಿಕಾರಿಗಳು ಇಲಾಖೆಯಲ್ಲಿ ಸಾಕಷ್ಟು ಅಧಿಕಾರಿಗಳಿಲ್ಲ ಮತ್ತು ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಉನ್ನತ ಅಧಿಕಾರಿಯೊಬ್ಬರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಡ್ರೋನ್ ಗಳ ಮೂಲಕ ಬರುತ್ತಿವೆ ಇದೇ ನಮಗೆ ಸವಾಲಾಗಿದೆ ಎಂದಿದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಸೂಕ್ತ ವಿಧಾನವನ್ನು ಹೊಂದುವವರೆಗೂ ಇಂಥ ದಾಳಿಯನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ದಿಲ್ಲಿ ಬಿಜೆಪಿ ನಾಯಕ ಬಗ್ಗಾ ಬಂಧನಕ್ಕೆ ಮೊಹಾಲಿ ಕೋರ್ಟ್ ಆದೇಶ!
ಇತ್ತೀಚೆಗಷ್ಟೇ ಇದೇ ರೀತಿಯ ಮೂರು ಘಟನೆಗಳು ವರದಿಯಾಗಿವೆ. ಪಂಜಾಬ್ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ, 2022ರ ಮಾರ್ಚ್ 9 ರಂದು ಮತ ಎಣಿಕೆಗೆ ಒಂದು ದಿನ ಮುನ್ನ, ರೋಪರ್‌ನ ಕಲ್ಮಾ ಮೋರ್ಹ್‌ನಲ್ಲಿರುವ ಪೊಲೀಸ್ ಪೋಸ್ಟ್ ಮೇಲೆ ದಾಳಿ ಮಾಡಲಾಗಿದ್ದು, ಅದರ ಪಕ್ಕದ ಗೋಡೆಗೆ ಹಾನಿಯಾಗಿತ್ತು. ಆದರೆ, ಇದರಲ್ಲಿ ಯಾವುದೇ ಸಾವು ನೋವು ಆಗಿರಲಿಲ್ಲ.
ನವೆಂಬರ್‌ನಲ್ಲಿ, ಪಠಾಣ್‌ಕೋಟ್‌ನ ಸೇನೆಯ ಕಂಟೋನ್ಮೆಂಟ್‌ನ ತ್ರಿವೇಣಿ ಗೇಟ್‌ನಲ್ಲಿ ಗ್ರೆನೇಡ್ ಅನ್ನು ಲಾಬ್ ಮಾಡಲಾಗಿತ್ತು. ನವಾನ್‌ಶಹರ್‌ನಲ್ಲಿರುವ ಅಪರಾಧ ತನಿಖಾ ಸಂಸ್ಥೆ ಕಚೇರಿಯ ಅಧಿಕಾರಿಯೊಬ್ಬರು ಮುಖ್ಯ ಗೇಟ್‌ಗೆ ಗ್ರೆನೇಡ್ ಎಸೆದಾಗ ಸ್ವಲ್ಪದರಲ್ಲೇ ಪಾರಾಗಿದ್ದರು. ರೋಪರ್, ಪಠಾಣ್‌ಕೋಟ್ ಮತ್ತು ನವನ್‌ಶಹರ್‌ನಲ್ಲಿ ದಾಳಿಕೋರರು ಈ ಘಟನೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
