ಮದುವೆಗೆ ಉಡುಗೊರೆ ನೀಡುವ ಬದಲು ರೈತರಿಗೆ ನೆರವು ನೀಡಿ/ ಪಂಜಾಬ್ ಕುಟುಂಬವೊಂದರ ಮದುವೆಯಲ್ಲಿ ದೇಣಿಗೆ ಬಾಕ್ಸ್/ ಕೇಂದ್ರ ತನ್ನ ನೀತಿಯಿಂದ ಹಿಂದೆ ಸರಿಯಬೇಕು/ ರೈತರ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು
ಅಮೃತಸರ (ಡಿ. 10) ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್‌ನ ಕುಟುಂಬವು ತಮ್ಮ ಸಂಬಂಧಿಕರಿಗೆ ವಿಶೇಷ ಮನವಿ ಮಾಡಿಕೊಂಡಿತ್ತು. ಮದುವೆಗೆ ಉಡುಗೊರೆ ನೀಡುವ ಬದಲು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ನೆರವು ನೀಡಿ ಎಂದು ಕೇಳಿತ್ತು.
ಇತ್ತೀಚೆಗೆ ನಡೆದ ಮಗನ ಮದುವೆಯಲ್ಲಿ ಉಡುಗೊರೆಗಳನ್ನು ನೀಡದಂತೆ ಕುಟುಂಬ ಕೇಳಿಕೊಂಡಿತ್ತು. ಬದಲಾಗಿ ಅವರು ಪ್ರತಿಭಟನಾ ನಿರತ ರೈತರಿಗೆ ಹಣ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿತ್ತು.
ಯಾರು ನಿಜವಾದ ಮಣ್ಣಿನ ಮಕ್ಕಳು.. ಸಿದ್ದರಾಮಯ್ಯ ಕೊಟ್ಟ ಉತ್ತರ
ವಿವಾಹ ನಡೆಯುತ್ತಿದ್ದ ಜಾಗದಲ್ಲಿ ದೇಣಿಗೆ ಬಾಕ್ಸ್ ಇರಿಸಲಾಗಿತ್ತು. ದೆಹಲಿ ಮತ್ತು ಸುತ್ತಮುತ್ತ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಉದಾರ ದೇಣಿಗೆ ನೀಡುವಂತೆ ಅತಿಥಿಗಳನ್ನು ಕೋರಲಾಗಿತ್ತು.
ಇದು ನಮ್ಮ ಹೋರಾಟ ಮತ್ತು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಯುವ ಪೀಳಿಗೆಗೆ ನಾವು ಒತ್ತಾಯಿಸಲು ಬಯಸುತ್ತೇನೆ ಎಂದು ವರ ಅಭಿಜಿತ್ ಸಿಂಗ್ ಹೇಳಿದ್ದಾರೆ.
ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರವಲ್ಲ ನಮ್ಮ ಕುಟುಂಬದಿಂದಲೂ ರೈತರ ಹೋರಾಟಕ್ಕೆ ಬೆಂಬಲ ಇದೆ. ಕೇಂದ್ರ ಸರ್ಕಾರ ನೀತಿ ಹಿಂದಕ್ಕೆ ಪಡೆಯಬೇಕು ಎಂದು ಕುಟುಂಬದವರು ಒತ್ತಾಯ ಮಾಡಿದ್ದಾರೆ.
