Asianet Suvarna News Asianet Suvarna News

ಸೋನಿಯಾ ಗಾಂಧಿ ರಾಜ್ಯಸಭೆಗೆ, ಅಮ್ಮನ ಕ್ಷೇತ್ರದಿಂದ ಮಗಳು ಪ್ರಿಯಾಂಕಾ ಲೋಕಸಭೆಗೆ ಸ್ಪರ್ಧೆ..?

1999ರಿಂದ 6 ಬಾರಿ ಲೋಕಸಭೆಗೆ ಆಯ್ಕೆಯಾಗುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಇದೇ ಮೊದಲ ಬಾರಿಗೆ ಸಂಸತ್ತಿನ ಕೆಳಮನೆಯ ಲೋಕಸಭೆ ಬಿಟ್ಟು ಮೇಲ್ಮನೆಯಾದ ರಾಜ್ಯಸಭೆ ಪ್ರವೇಶಿಸುವ ಸಾಧ್ಯತೆ ಇದೆ.

Priyanka Gandhi will contest to Lok Sabha from Rae Bareli for the first time Sonia Gandhi to Rajya Sabha
Author
First Published Feb 13, 2024, 9:03 AM IST

ನವದೆಹಲಿ: 1999ರಿಂದ 6 ಬಾರಿ ಲೋಕಸಭೆಗೆ ಆಯ್ಕೆಯಾಗುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಇದೇ ಮೊದಲ ಬಾರಿಗೆ ಸಂಸತ್ತಿನ ಕೆಳಮನೆಯ ಲೋಕಸಭೆ ಬಿಟ್ಟು ಮೇಲ್ಮನೆಯಾದ ರಾಜ್ಯಸಭೆ ಪ್ರವೇಶಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಈವರೆಗೂ ಸೋನಿಯಾ ಪ್ರತಿನಿಧಿಸುತ್ತಿದ್ದ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

1999ರಲ್ಲಿ ಮೊದಲ ಬಾರಿ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿ ಎರಡೂ ಕಡೆಯಿಂದ ಗೆದ್ದಿದ್ದ ಸೋನಿಯಾ ನಂತರ 5 ಬಾರಿ ರಾಯ್‌ಬರೇಲಿಯಿಂದ ಲೋಕಸಭೆಗೆ ಆಯ್ಕೆ ಯಾಗಿದ್ದರು. ಆದರೆ ಕಳೆದ ಕೆಲ ಸಮಯ ದಿಂದ ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋನಿಯಾ ಈ ಬಾರಿ ಲೋಕಸಭೆ ಬಿಟ್ಟು ರಾಜ್ಯಸಭೆ ಆಯ್ಕೆ ಮಾಡಿ ಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಆಹ್ವಾನಕ್ಕೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅರ್ಹರಲ್ಲ, ಇಲ್ಲಿದೆ ಕಾರಣ!

ಸೋನಿಯಾಗೆ ತಮ್ಮ ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶ ಮಾಡುವಂತೆ ಈಗಾಗಲೇ ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲಪ್ರದೇಶ ರಾಜ್ಯ ಕಾಂಗ್ರೆಸ್ ಘಟಕಗಳು ಆಹ್ವಾನ ನೀಡಿವೆ. ಈ ಪೈಕಿ ಅವರು ರಾಜಸ್ಥಾನ ಅಥವಾ ಹಿಮಾಚಲವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಪ್ರಿಯಾಂಕಾ ಸ್ಪರ್ಧಾ ಕಣಕ್ಕೆ?: ಇನ್ನು ಪ್ರಿಯಾಂಕಾ ವಾದ್ರಾ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ತಮ್ಮ ತಾಯಿ ಪ್ರತಿನಿಧಿಸುವ ರಾಯ್‌ಬರೇಲಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಿಂದ ಪ್ರಿಯಾಂಕಾ ಕಣಕ್ಕೆ ಇಳಿಯಲಿದ್ದಾರೆ ಎಂದು ವರದಿಯಾಗಿತ್ತಾದರೂ ಹಾಗೆ ಆಗಿರಲಿಲ್ಲ.

ಮೋದಿ ವಿರುದ್ಧ ಸ್ಪರ್ಧಿಸುವ ರಿಸ್ಕ್‌ ಬೇಡ, ಕರ್ನಾಟಕದಿಂದ ಪ್ರಿಯಾಂಕಾ ಸ್ಪರ್ಧೆ: ಕಾಂಗ್ರೆಸ್ಸಲ್ಲಿ ಚಿಂತನೆ

ಕ್ರಿಕೆಟಿಗ ಯುವರಾಜ್ ಗುರುದಾಸ್‌ಪುರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಅಲ್ಲದೇ ಅವರು ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಯುವರಾಜ್ ಇತ್ತೀಚೆಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಇಂಥದ್ದೊಂದು ಸುದ್ದಿ ಹರಡಿದೆ. ಆದರೆ ಈ ಬಗ್ಗೆ ಯುವರಾಜ್ ಯಾವುದೇ ಹೇಳಿಕೆ ನೀಡಿಲ್ಲ. ಹಾಲಿ ಗುರುದಾಸ್‌ಪುರ ಕ್ಷೇತ್ರವನ್ನು ನಟ ಸನ್ನಿ ಡಿಯೋಲ್ ಪ್ರತಿನಿಧಿಸುತ್ತಿದ್ದಾರೆ.

Follow Us:
Download App:
  • android
  • ios