* ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ರಣಕಹಳೆ* ಚುನಾವಣೆಗೂ ಮುನ್ನ ಏಳು ಪ್ರತಿಜ್ಞೆ* ಕಾಂಗ್ರೆಸ್ ನಾಯಕಿಯ ಸರಳತೆ, ಹೊಲದಲ್ಲಿ ಮಹಿಳೆಯರೊಂದಿಗೆ ಕುಳಿತ ಪ್ರಿಯಾಂಕಾ
ಲಕ್ನೋ(ಅ.23): ಪ್ರಿಯಾಂಕಾ ಗಾಂಧಿ(Priyanka Gandhi) ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ(Uttar Pradesh Assembly Elections) ಗೆಲ್ಲಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದ್ದಾರೆ. ಯುಪಿ ಗೆಲುವಿಗಾಗಿ ಪ್ರಿಯಾಂಕಾ ಮಹಿಳೆಯರ ಮತ ಸೆಳೆಯಲು ಗಮನ ಹರಿಸಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಅವರು ಹೊಸ ಘೋಷಣೆಗಳನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ, ಅವರು ಬಾರಾಬಂಕಿಯಲ್ಲಿ ಪ್ರತಿಜ್ಞಾ ಯಾತ್ರೆಯನ್ನು(Pratigya Yatras) ಆರಂಭಿಸಿದ್ದಾರೆ. ಈ ಮಧ್ಯೆ, ಪ್ರಿಯಾಂಕಾ ಇದ್ದಕ್ಕಿದ್ದಂತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಜೊತೆ ಕುಳಿತು ಮಾತನಾಡಿದ್ದಾರೆ. ಜೊತೆಗೆ ಅಲ್ಲೇ ಅವರೊಂದಿಗೆ ಕುಳಿತು ಊಟ ಮಾಡಿದ್ದಾರೆ.
ಯುಪಿ ಚುನಾವಣೆಗೆ ಕಾಂಗ್ರೆಸ್ ನಿಂದ ಪ್ರತಿಜ್ಞಾ ಯಾತ್ರೆ: ಬಿಜೆಪಿಗೆ ಮುಳುವಾಗುತ್ತಾ ಕೈ ತಂತ್ರ?
ಹೊಲದಲ್ಲೇ ಆಹಾರ ಸೇವಿಸಲು ಮುಂದಾದ ಪ್ರಿಯಾಂಕಾ
ವಾಸ್ತವವಾಗಿ, ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಾರಾಬಂಕಿಯಲ್ಲಿ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುವುದನ್ನು ನೋಡಿದಾಗ, ಪ್ರಿಯಾಂಕಾ ತನ್ನ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದಾರೆ. ಅವರು ನೇರವಾಗಿ ಅವನ ಬಳಿ ತೆರಳಿ, ಮಹಿಳೆಯರನ್ನು ಭೇಟಿಯಾದರು ಮತ್ತು ಅವರ ಹೆಸರು ಕೇಳಿದ್ದಾರೆ. ಇದಲ್ಲದೇ, ಆವರೊಂದಿಗೆ ನೆಲದ ಮೇಲೆ ಕುಳಿತು ಊಟ ಕೂಡ ಮಾಡಿದ್ದಾರೆ. ಸ್ತ್ರೀಯರ ಮಧ್ಯದಲ್ಲಿ ಕುಳಿತು ಆಲೂಗೆಡ್ಡೆ ಪರಾಠ, ಬೆಲ್ಲ, ಸಲಾಡ್ ತಿಂದಿದ್ದಾರೆ.
ಮಹಿಳೆಯರ ಸಮಸ್ಯೆ ಆಲಿಸಿ ತಮ್ಮ ಕತೆಯನ್ನೂ ತೆರೆದಿಟ್ಟ ಪ್ರಿಯಾಂಕಾ
ಮಹಿಳೆಯರೊಂದಿಗೆ ಊಟ ಮಾಡಿದ ಪ್ರಿಯಾಂಕಾ ಕಾಂಗ್ರೆಸ್ ತಮ್ಮ ಯೋಜನೆಗಳ ಬಗ್ಗೆ ಹೇಳಿದರು ಹಾಗೂ ಕಾಂಗ್ರೆಸ್ ಬೆಂಬಲಿಸುವಂತೆ ಕೇಳಿದರು. ಅಲ್ಲದೇ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ. ಇದೇ ವೇಳೆ ಮಹಿಳೆಯರ ಸಮಸ್ಯೆಗಳ ಬಗ್ಗೆಯೂ ಕೇಳಲಾಯಿತು. ಯುಪಿ ಚುನಾವಣೆಯಲ್ಲಿ 40 ಪ್ರತಿಶತ ಮಹಿಳೆಯರಿಗೆ ಟಿಕೆಟ್ ನೀಡುವುದರ ಜೊತೆಗೆ, ಈಗ ಕಾಂಗ್ರೆಸ್ ನಿಮ್ಮ ಹೆಣ್ಣು ಮಕ್ಕಳಿಗೆ ಸ್ಮಾರ್ಟ್ ಫೋನ್ ಮತ್ತು ಸ್ಕೂಟಿಯನ್ನೂ ನೀಡುತ್ತದೆ ಎಂದು ಹೇಳಿದರು.
7 ಪ್ರತಿಜ್ಞೆಗಳ ಘೋಷಣೆ
ಬಾರಾಬಂಕಿಯಲ್ಲಿ ಕಾಂಗ್ರೆಸ್‌ನ ಪ್ರತಿಜ್ಞೆ ಮೆರವಣಿಗೆಗೆ ಚಾಲನೆ ನೀಡಿದ ನಂತರ ಪ್ರಿಯಾಂಕಾ ಗಾಂಧಿ 7 ದೊಡ್ಡ ಘೋಷಣೆಗಳನ್ನು ಮಾಡಿದರು.
ಉ. ಪ್ರದೇಶ ಪಡೆಯಲು ಕಾಂಗ್ರೆಸ್‌ನ ಸಪ್ತ ಪ್ರತಿಜ್ಞೆ: ಇದು ಪ್ರಿಯಾಂಕಾ ಮಾಸ್ಟರ್ ಪ್ಲಾನ್!
1. ಟಿಕೆಟ್‌ಗಳಲ್ಲಿ ಶೇ.40ರಷ್ಟು ಮಹಿಳೆಯರ ಪಾಲು
2. ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ಮತ್ತು ಸ್ಕೂಟಿ
3. ರೈತರ ಸಂಪೂರ್ಣ ಸಾಲ ಮನ್ನಾ
4. 2500 ರೂಪಾಯಿಗೆ ಗೋಧಿ ಭತ್ತ, ಕಬ್ಬು ರೈತರಿಗೆ 400 ಸಿಗುತ್ತದೆ
5. ವಿದ್ಯುತ್ ಬಿಲ್ ಅರ್ಧದಷ್ಟು, ಕೊರೋನಾ ಅವಧಿಯ ಬಾಕಿ ತೆರವು
6. ಕೊರೋನಾದ ಆರ್ಥಿಕ ಹೊಡೆತಕ್ಕೆ ಮದ್ದು, ಕುಟುಂಬಕ್ಕೆ 25 ಸಾವಿರ ನೀಡುತ್ತದೆ
7. ಸರ್ಕಾರಿ ಉದ್ಯೋಗ 20 ಲಕ್ಷಕ್ಕೆ
