Asianet Suvarna News Asianet Suvarna News

Lieutenant Governor ದೆಹಲಿ ನೂತನ ಲೆ.ಗವರ್ನರ್ ಆಗಿ ವಿನೈ ಕಮಾರ್ ಸಕ್ಸೇನಾ ನೇಮಕ!

  • ಅನಿಲ್ ಬೈಜಾಲ್ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿ
  • ನೂತನ ಗವರ್ನರ್ ಆಗಿ ವಿನೈ ಕುಮಾರ್ ಸಕ್ಸೇನಾ ನೇಮಕ
  • ಖಾದಿ ಗ್ರಾಮೋದ್ಯೋಗ ಆಯೋಗ ಅಧ್ಯಕ್ಷರಾಗಿರುವ ಸಕ್ಸೇನಾ
     
President Ram Nath Kovind appoint Vinai Kumar Saxena as next lieutenant governor of Delhi ckm
Author
Bengaluru, First Published May 23, 2022, 9:25 PM IST

ನವದೆಹಲಿ(ಮೇ.23): ಅನಿಲ್ ಬೈಜಾಲ್ ರಾಜೀನಾಮೆಯಿಂದ ತೆರವಾಗಿದ್ದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಇದೀಗ ವಿನೈ ಕುಮಾರ್ ಸಕ್ಸೇನಾ ಅವರನ್ನು ನೇಮಕ ಮಾಡಲಾಗಿದೆ. ಅನಿಲ್ ಬೈಜಾಲ್ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿನೈ ಕುಮಾರ್ ಸಕ್ಸೇನಾ ಅವರನ್ನು ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದೆ.

ಮೇ 18 ರಂದು ಅನಿಲ್ ಬೈಜಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವೈಯುಕ್ತಿ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಇದೀಗ ನೂತನವಾಗಿ ನೇಮಕಗೊಂಡಿರುವ ವಿನೈ ಕುಮಾರ್ ಸಕ್ಸೇನ್ ಶೀಘ್ರದಲ್ಲೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ನಿದ್ದೆಗೆಡಿಸಿದ್ದ ದೆಹಲಿ ಲೆ.ಗವರ್ನರ್ ಅನಿಲ್ ರಾಜೀನಾಮೆ!

ಮಾರ್ಚ್ 23, 1958ರಲ್ಲಿ ಹುಟ್ಟಿದ ವಿನೈ ಕುಮಾರ್ ಸಕ್ಸೇನಾ, ಸದ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನ್ಪುರ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿರುವ ವಿನೈ ಕುಮಾರ್ ಸಕ್ಸೇನಾ, ಪೈಲೆಟ್ ಲೆಸೆನ್ಸ್ ಹೊಂದಿದ್ದಾರೆ. ಭಾರತದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಸಮಿತಿಯ ಸದಸ್ಯರಾಗಿದ್ದರು. 

2021ರ ಪದ್ಮ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ವಿನೈ ಕುಮಾರ್ ಸಕ್ಸೇನಾ ಇದೀಗ ಮತ್ತೊಂದು ಮಹತ್ತರ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಕೈಗಾರಿಕಾ ಸಂಶೋಧನಾ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಜೆಕೆ ಗ್ರೂಪ್‌ನಲ್ಲಿ ಸಹಾಯಕ ಅಧಿಕಾರಿಯಾಗಿ ವತ್ತಿ ಜೀವನ ಆರಂಭಿಸಿದ ವಿನೈ ಕುಮಾರ್ ಸಕ್ಸೇನಾ ಸಿಇಓ ಆಗಿ ಬಡ್ತಿ ಪಡೆದು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ದೋಲರ್ ಪೋರ್ಟ್ ಯೋಜನೆಯ ನಿರ್ದೇಶಕರಾಗಿಯೂ ದುಡಿದಿದ್ದಾರೆ. ರಾಷ್ಟ್ರೀಯ ಮಕ್ಕಳ ಸಾಹಿತ್ಯ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios