Asianet Suvarna News Asianet Suvarna News

Tathagata Roy Tweet: ಬಿಜೆಪಿ ಕಾರ್ಯಕರ್ತರಿಂದ ತೃಣಮೂಲ ಕಾಂಗ್ರೆಸ್‌ ಪರ ಕೆಲಸ: ತಿಂಗಳಿಗೆ 13,000 ಸಂಬಳ!

* ಬಿಜೆಪಿಯಲ್ಲಿದ್ದುಕೊಂಡೇ ಟಿಎಂಸಿ ಪರ ಕೆಲಸ
*ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌ರಿಂದ ನೇಮಕ
*ಪಕ್ಷವನ್ನು ಬೆಚ್ಚಿಬೀಳಿಸಿದ ತಥಾಗತ ರಾಯ್  ಟ್ವೀಟ್!‌

Prashant Kishors team has employed some BJP workers to work for TMC for Rs 13000 per month Said Tathagata Roy mnj
Author
Bengaluru, First Published Dec 1, 2021, 12:28 PM IST

ಕೋಲ್ಕತ್ತಾ(ಡಿ. 01): ಭಾರತೀಯ ಜನತಾ ಪಕ್ಷದ (BJP)  ಹಿರಿಯ ನಾಯಕ ತಥಾಗತ ರಾಯ್  (Tathagata Roy) ಅವರ ಕುತೂಹಲಕಾರಿ ಟ್ವೀಟ್‌ಗಳು (Tweet) ಪಕ್ಷವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ತಮ್ಮ ಟ್ವೀಟ್‌ಗಳಲ್ಲಿ, ರಾಯ್ ಬಿಜೆಪಿ ಬೆಂಬಲಿಗರನ್ನು ಉಲ್ಲೇಖಿಸಿ, ಪಕ್ಷದ ಅನೇಕರು ತೃಣಮೂಲ ಕಾಂಗ್ರೆಸ್‌ಗಾಗಿ (Trinamoola Congress) ಮಾರುವೇಷದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರೆಲ್ಲರೂ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರಿಂದ ಕೆಲಸಕ್ಕೆ ನೇಮಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಟ್ವೀಟ್‌ಗಳನ್ನು ಬಂಗಾಳಿ ಭಾಷೆಯಲ್ಲಿ (Bengali Langauge) ಬರೆಯಲಾಗಿದ್ದು  "ತಮ್ಮ ಪಕ್ಕದ ಹಳ್ಳಿಯ ವಿದ್ಯಾವಂತ ಯುವಕನನ್ನು ಟೀಮ್ ಪ್ರಶಾಂತ್‌ ಕಿಶೋರ್ ಕರೆದು ಬಿಜೆಪಿಗೆ ಸೇರುವಂತೆ ಹೇಳಿದ್ದಾರೆ.  ಆದರೆ ತಿಂಗಳಿಗೆ 13,000 ರೂ.ಗೆ ತೃಣಮೂಲ ಕಾಂಗ್ರೆಸ್‌ಗೆ ಕೆಲಸ ಮಾಡಬೇಕಾಗಿ ತಿಳಿಸಿದ್ದಾರೆ ಎಂದು  ಬಿಜೆಪಿ ಬೆಂಬಲಿಗರೊಬ್ಬರು ಹೇಳಿದರು" ಎಂದು ತ್ರಿಪುರಾ ಮತ್ತು ಮೇಘಾಲಯದ ಮಾಜಿ ಗವರ್ನರ್ ಟ್ವೀಟರ್‌ನಲ್ಲಿ ಬರೆದಿದ್ದಾರೆ.

 

 

ಬಂಗಾಳದಲ್ಲಿ ಬಿಜೆಪಿ ಗೆಲ್ಲುವುದು ಅಸಾಧ್ಯ!

ಮತ್ತೊಂದು ಟ್ವೀಟ್‌ನಲ್ಲಿ ರಾಯ್, "ಬಿಜೆಪಿಯಲ್ಲಿ ಪ್ರಶಾಂತ್‌ ಕಿಶೋರ್‌ ನೇಮಿಸಲ್ಪಟ್ಟ  ಅನೇಕ ತಳಮಟ್ಟದ ಕಾರ್ಯಕರ್ತರಿದ್ದಾರೆ ಎಂದು ನಾನು ನಂಬುತ್ತೇನೆ. ಇಲ್ಲಿಯವರೆಗೆ ಅವರನ್ನು ಗುರುತಿಸಲು ನಮಗೆ ಸಾಧ್ಯವಾಗಲಿಲ್ಲ. ಬಂಗಾಳದಲ್ಲಿ ಬಿಜೆಪಿ ಗೆಲ್ಲುವುದು ಅಸಾಧ್ಯ" ಎಂದು ಹೇಳಿದ್ದಾರೆ. ಕೆಲ ಸಮಯದಿಂದ, ರಾಯ್ ಬಿಜೆಪಿಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ತಮ್ಮ ವೈಯಕ್ತಿಕ ಲಾಭಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Didi Mumbai trip: ಮಹಾರಾಷ್ಟ್ರದಲ್ಲೂ ಟಿಎಂಸಿ ಬೆಳೆಸಲು ಮಮತಾ ಯತ್ನ

ತಥಾಗತ ರಾಯ್ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್ (Joy Prakash Majumdar), "ಅವರು ಒಂದು ಕಳೆದುಹೋದ ಶಕ್ತಿ ಮತ್ತು ಅವರ ಮಾತುಗಳಿಗೆ ಇನ್ನು ಮುಂದೆ ಯಾವುದೇ ಮಹತ್ವವಿಲ್ಲ. ಅವರು ನಿಯಮಿತವಾಗಿ ಟ್ವೀಟ್‌ ಮಾಡುವ ಕಲೆಯನ್ನು ಮಾತ್ರ ಕರಗತ ಮಾಡಿಕೊಂಡಿದ್ದಾರೆ. ಅವರ ಮಾತಿಗೆ ಪಕ್ಷ ಗಮನ ಕೊಡುವುದಿಲ್ಲ. ಅವರ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ. ಈ ಹೇಳಿಕೆಯು ಬಿಜೆಪಿಯ ಕೆಳಹಂತದ ಕಾರ್ಯಕರ್ತರ ಹೋರಾಟ ಮತ್ತು ತ್ಯಾಗಕ್ಕೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ" ಎಂದು ಹೇಳಿದ್ದಾರೆ.

ಬಿಜೆಪಿ ತನ್ನ ನಡವಳಿಕೆಯನ್ನು  ಸುಧಾರಿಸಿಕೊಳ್ಳಬೇಕು!

ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ರಾಯ್, "ನಾನು ಯಾರಿಂದಲೂ ಪ್ರಶಂಸೆ ಪಡೆಯಲು ಈ ಎಲ್ಲ ವಿಷಯಗಳನ್ನು ಬರೆದಿಲ್ಲ. ಕೆಲವು ಉನ್ನತ ನಾಯಕರು ಮಹಿಳೆಯರು ಮತ್ತು ಸಂಪತ್ತಿನ ವಿಷಯದಲ್ಲಿ ತುಂಬಾ ತೊಡಗಿಸಿಕೊಂಡಿದ್ದಾರೆ, ಅದರ ಬಗ್ಗೆ ಪಕ್ಷವನ್ನು ಎಚ್ಚರಿಸಲು ನಾನು ಬಯಸುತ್ತೇನೆ. ಮರವು ಅದರ ಹಣ್ಣಿನಿಂದ ಗುರುತಿಸಲ್ಪಡುತ್ತದೆ. ನಾನು  ಚುನಾವಣೆಯ ಫಲಿತಾಂಶಗಳಿಗಾಗಿ ಕಾಯುತ್ತೇನೆ. ಸದ್ಯಕ್ಕೆ, ಪಶ್ಚಿಮ ಬಂಗಾಳ ಬಿಜೆಪಿಗೆ ವಿದಾಯ". ಎಂದು ಬರೆದಿದ್ದಾರೆ.

Mamata In Delhi: ಯುಪಿಯಲ್ಲಿ ಬಿಜೆಪಿ ಸೋಲಬೇಕು, ಅಖಿಲೇಶ್ ಸಹಾಯಕ್ಕೆ ಸಿದ್ಧ: ಮೋದಿ ಭೇಟಿ ಬಳಿಕ ದೀದಿ ಮಾತು

"ಹಣ ಮತ್ತು ಮಹಿಳೆಯರ ಬಗೆಗಿನ ನನ್ನ ದೂರನ್ನು ಪಕ್ಷದೊಳಗೆ ಆಂತರಿಕವಾಗಿ ಚರ್ಚಿಸಬೇಕು, ಸಾರ್ವಜನಿಕವಾಗಿ ಮಾಡಬಾರದು ಎಂದು ಬಿಜೆಪಿಯ ಹಿತೈಷಿಗಳು ಹೇಳುತ್ತಾರೆ. ನಾನು ವಿನಮ್ರವಾಗಿ ಹೇಳುತ್ತೇನೆ, ಸಮಯ ಕಳೆದಿದೆ, ಬಿಜೆಪಿ ಏನು ಬೇಕಾದರೂ ಮಾಡಬಹುದು, ಆದರೆ ಅವರು ತಮ್ಮ ನಡವಳಿಕೆಯನ್ನು ಆಮೂಲಾಗ್ರವಾಗಿ ಸುಧಾರಿಸಿಕೊಳ್ಳದಿದ್ದರೆ, ನಂತರ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಅಳಿವು ಅನಿವಾರ್ಯವಾಗಿದೆ" ಎಂದು ಹೇಳಿದ್ದಾರೆ

ರಾಯ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು, "ತಥಾಗತ ರಾಯ್ ಅವರು ಹಿರಿಯ ನಾಯಕರು, ಅವರು ಏನು ಹೇಳುತ್ತಾರೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಸಾರ್ವಜನಿಕ ವೇದಿಕೆಯಲ್ಲಿ ಮಾಡಿದ ಕಾಮೆಂಟ್‌ಗಳಿಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವರು ಏನಾದರೂ ಹೇಳಲು ಇದ್ದರೆ  ಅದು ಬಿಜೆಪಿ ಹಿರಿಯ ನಾಯಕರಿಗೆ  ತಿಳಿಸಬೇಕು ಎಂದು ಹೇಳಿದ್ದಾರೆ.

Follow Us:
Download App:
  • android
  • ios