ಕೋಲ್ಕತಾ(ಡಿ.22): ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮಾತನಾಡುತ್ತಿದ್ದರೆ, ರಾಜ್ಯದಲ್ಲಿ ಆ ಪಕ್ಷ ಎರಡಂಕಿ ದಾಟಿದರೆ ತಾವು ಟ್ವೀಟರ್‌ನಿಂದ ಹೊರಹೋಗುವುದಾಗಿ 2014ರಲ್ಲಿ ಮೋದಿ ಗೆಲುವಿನ ರಣತಂತ್ರ ರೂಪಿಸಿದ್ದ, ಹಾಲಿ ಮಮತಾ ಗೆಲ್ಲಿಸುವ ಹೊಣೆ ಹೊತ್ತಿರುವ ಪ್ರಶಾಂತ್‌ ಕಿಶೋರ್‌ ಸವಾಲು ಹಾಕಿದ್ದಾರೆ.

ಕೆಲವು ಮಾಧ್ಯಮಗಳು ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸುತ್ತಿವೆ. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ. ಬಿಜೆಪಿ ಒಂದಕಿ ದಾಟಲು ಕೂಡ ಕಷ್ಟಪಡಲಿದೆ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಪ್ರಶಾಂತ್‌ ಕಿಶೋರ್‌ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಕಿಶೋರ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ, ಚುನಾವಣೆಯ ಬಳಿಕ ದೇಶ ಚುನಾವಣಾ ತಂತ್ರಗಾರನೊಬ್ಬನನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.