ಪೋರ್ಶೆ ಕಾರಿಗೆ 28 ಲಕ್ಷ ದಂಡ : ದೇಶದಲ್ಲೇ ಅತೀ ಹೆಚ್ಚು

ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸುವ ದಂಡದ ಮೊತ್ತ ಹಲವು ಪಟ್ಟು ಹೆಚ್ಚಳವಾಗಿದ್ದು,  ಉದ್ಯಮಿಯ ದುಬಾರಿ ಪೋರ್ಶೆ ಕಾರಿಗೆ ಭಾರೀ ದಂಡ ವಿಧಿಸಲಾಗಿದೆ. 

Porsche car owner pays 28 lakh penalty

ಅಹ್ಮದಾಬಾದ್‌ [ಜ.10]: ಹೊಸ ಮೋಟಾರು ಕಾಯ್ದೆ ಬಳಿಕ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸುವ ದಂಡದ ಮೊತ್ತ ಹಲವು ಪಟ್ಟು ಹೆಚ್ಚಳವಾಗಿದ್ದು, ಇಲ್ಲಿನ ಉದ್ಯಮಿಯ ದುಬಾರಿ ಪೋರ್ಶೆ ಕಾರಿಗೆ ಬರೋಬ್ಬರಿ 27.68 ಲಕ್ಷ ದಂಡ ವಿಧಿಸಲಾಗಿದೆ. 

ಆ ಮೂಲಕ ಹೊಸ ನಿಯಮದ ಬಳಿಕದ ವಿಧಿಸಲಾದ ದೇಶದಲ್ಲೇ ಅತೀ ಹೆಚ್ಚು ದಂಡದ ಪ್ರಮಾಣ ಇದಾಗಿದೆ. ಉದ್ಯಮಿ ಎಂ.ಬಿ ವಿರ್ಜಾ ಎಂಬುವವರಿಗೆ ಸೇರಿದ್ದ 2 ಕೋಟಿ ಮೌಲ್ಯದ ಪೋರ್ಶೆ 911 ಸ್ಪೋಟ್ಸ್‌ರ್‍ ಕಾರನ್ನು, ನೋಂದಣಿ ಮಾಡದ್ದಕ್ಕೆ ಕಳೆದ ನವೆಂಬರ್‌ನಲ್ಲಿ ಪೊಲೀಸರು ತಪಾಸಣೆ ವೇಳೆ ವಶಕ್ಕೆ ಪಡೆದಿದ್ದರು. 

ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; 350KM ಮೈಲೇಜ್!...

2017ರಿಂದ ನೋಂದಣಿ ಮಾಡದೇ ಕಾರು ಬಳಸಲಾಗುತ್ತಿದ್ದು, 16 ಲಕ್ಷ ಮೋಟಾರ್‌ ವಾಹನ ತೆರಿಗೆ, 7.68 ಲಕ್ಷ ಬಡ್ಡಿ ಹಾಗೂ ಹಳೇ 4 ಲಕ್ಷ ದಂಡ ಸೇರಿ ಒಟ್ಟು 27.68 ಲಕ್ಷ ರು. ಪಾವತಿ ಮಾಡಿದ್ದಾರೆ. ಈ ದಂಡದ ರಸೀದಿಯನ್ನು ಪೊಲೀಸರು ಟ್ವಿಟರ್‌ನಲ್ಲಿ ಹಂಚಿದ್ದಾರೆ.

Latest Videos
Follow Us:
Download App:
  • android
  • ios