ಸಿಂಗಾಪುರ(ಏ.13): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವದ 400 ಕೋಟಿಗೂ ಹೆಚ್ಚು ಜನರನ್ನು ಗೃಹಬಂಧನಕ್ಕೆ ಒಳಪಡಿಸಿದ ಮೇಲೆ ಹಲವು ದೇಶಗಳಲ್ಲಿ ಕಾಂಡೋಮ್‌ಗಳ ಕೊರತೆ ಕಾಣಿಸಿಕೊಂಡಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಈ ಅವಧಿಯಲ್ಲಿ ಜನರು ನೀಲಿ ಚಿತ್ರಗಳ ವೀಕ್ಷಣೆಗೆ ಮುಗಿಬಿದ್ದಿರುವ ಸುದ್ದಿಯೂ ಹೊರಬಂದಿದೆ.

ವಾಟ್ಸಪ್, ಫೇಸ್ ಬುಕ್‌ನಲ್ಲಿ ಗ್ರೂಪ್ ಸೃಷ್ಟಿ ಮಾಡಿ ಅಶ್ಲೀಲ ವಿಡಿಯೋ ಶೇರ್!

ಭಾರತ ಸೇರಿದಂತೆ ಕೊರೋನಾ ಹೆಚ್ಚಾಗಿ ಬಾಧಿಸಿರುವ ಬಹುತೇಕ ಎಲ್ಲಾ ದೇಶಗಳಲ್ಲೂ ಲಾಕ್‌ಡೌನ್‌ ಅವಧಿಯಲ್ಲಿ ನೀಲಿಚಿತ್ರಗಳ ವೀಕ್ಷಣೆ ಭರ್ಜರಿ ಏರಿಕೆ ಕಂಡಿದೆ ಎಂದು ‘ಪೋರ್ನ್‌ಹಬ್‌’ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಅದರಲ್ಲೂ ಭಾರತದಲ್ಲಿ ಈ ಏರಿಕೆ ಪ್ರಮಾಣ ಶೇ.95ರಷ್ಟಿದೆ ಎಂದು ವರದಿ ಹೇಳಿದೆ.

ಉಳಿದಂತೆ ಲಾಕ್‌ಡೌನ್‌ ಅವಧಿಯಲ್ಲಿ ಫ್ರಾನ್ಸ್‌ನಲ್ಲಿ ಶೇ.40, ಜರ್ಮನಿಯಲ್ಲಿ ಶೇ.25, ಇಟಲಿಯಲ್ಲಿ ಶೇ.55, ರಷ್ಯಾದಲ್ಲಿ ಶೇ.56, ಸ್ಪೇನ್‌ನಲ್ಲಿ ಶೇ.60, ಸ್ವಿಜರ್ಲೆಂಡ್‌ನಲ್ಲಿ ಶೇ.25ರಷ್ಟುವೀಕ್ಷಣೆ ಪ್ರಮಾಣ ಏರಿಕೆಯಾಗಿದೆ ಎಂದು ನೀಲಿಚಿತ್ರಗಳ ಸೇವೆ ನೀಡುವ ವಿಶ್ವದ ಅತಿದೊಡ್ಡ ಪೋರ್ಟಲ್‌ ಆಗಿರುವ ಪೋರ್ನ್‌ಹಬ್‌ ತಿಳಿಸಿದೆ.