Asianet Suvarna News Asianet Suvarna News

ವಾಯುಮಾಲಿನ್ಯದ ಮಧ್ಯೆ ಆತಂಕ, ಶಾಕಿಂಗ್ ನ್ಯೂಸ್ ಕೊಟ್ಟ AIIMS ನಿರ್ದೇಶಕ!

* ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೇ ಏರುತ್ತಿದೆ ವಾಯುಮಾಲಿನ್ಯ

* ಗ್ಯಾಸ್‌ ಚೇಂಬರ್‌ನಂತಾದ ದೆಹಲಿ

* ಏರುತ್ತಿರುವ ವಾಯುಮಾಲಿನ್ಯದ ನಡುವೆ ಶಾಕಿಂಗ್ ಸುದ್ದಿ ಕೊಟ್ಟ ಡಾ. ಗುಲೇರಿಯಾ

Pollution can lead to more severe cases of Covid AIIMS director Dr Randeep Guleria pod
Author
Bangalore, First Published Nov 6, 2021, 8:19 AM IST

ನವದೆಹಲಿ(ನ.06): ದೀಪಾವಳಿ (Diwali 2021) ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಇದರಿಂದಾಗಿ ಜನರ ಆರೋಗ್ಯದ ಕಾಳಜಿಯೂ ಹೆಚ್ಚಾಗಿದೆ. ಈಗಾಗಲೇ ಉಸಿರಾಟದ ಕಾಯಿಲೆ ಇರುವವರು ಹೆಚ್ಚು ಜಾಗರೂಕತೆಯಿಂದ ಇರುವಂತೆ ತಜ್ಞರು ಎಚ್ಚರಿಸಿದ್ದಾರೆ. ಈ ನಡುವೆ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ (9AIIMS Director Dr Randeep Guleria) ಕೂಡ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ (Coronavirus) ಮಾಲಿನ್ಯದಲ್ಲಿ ಹೆಚ್ಚು ಕಾಲ ಬದುಕುವ ಕ್ಷಮತೆ ಹೊಂದಿದೆ ಎಂದು ಗುಲೇರಿಯಾ ಶುಕ್ರವಾರ ಹೇಳಿದ್ದಾರೆ.

ಕೆಲವು ಅಂಕಿ ಅಂಶಗಳ ಪ್ರಕಾರ, ಕೊರೋನಾ ವೈರಸ್ ದೀರ್ಘಕಾಲದವರೆಗೆ ಮಾಲಿನ್ಯದಲ್ಲಿ (Air Pollution) ಬದುಕುತ್ತದೆ ಎಂದು ಗುಲೇರಿಯಾ ಹೇಳಿದ್ದಾರೆ. ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಬಹುದು ಎಂದೂ ವಾರ್ನ್ ಮಾಡಿದ್ದಾರೆ. ದೆಹಲಿ ವಾಯು ಮಾಲಿನ್ಯವು ಉಸಿರಾಟದ ಕಾಯಿಲೆಗಳು ವಿಶೇಷವಾಗಿ ಶ್ವಾಸಕೋಶದ ಕಾಯಿಲೆಗಳು, ಅಸ್ತಮಾದಿಂದ ಬಳಲುತ್ತಿರುವ ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದೂ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಮಾಲಿನ್ಯದಿಂದಾಗಿ ಕೊರೋನಾ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡು, ವಿಷಮ ಸ್ಥಿತಿಗೆ ಕಾರಣವಾಗಬಹುದು ಎಂದು ಏಮ್ಸ್ (AIIMS) ಮುಖ್ಯಸ್ಥರು ಹೇಳಿದ್ದಾರೆ. ಇದಕ್ಕಾಗಿ ಜನರು ತಪ್ಪದೇ ಮಾಸ್ಕ್ ಧರಿಸುವುದು ಅವಶ್ಯಕ. ಮಾಸ್ಕ್‌ಗಳು ಕೊರೋನಾ ಮತ್ತು ಮಾಲಿನ್ಯ ಎರಡರಿಂದಲೂ ರಕ್ಷಿಸಲು ಸಹಾಯ ಮಾಡುತ್ತದೆ ಎಂದೂ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಹೆಚ್ಚುತ್ತಿರುವ ಮಾಲಿನ್ಯವು ವಯಸ್ಸಾದವರಿಗೆ ಮತ್ತು ಶ್ವಾಸಕೋಶ-ಹೃದಯ ಸಮಸ್ಯೆಗಳಿರುವ ಜನರಿಗೆ ವಿಶೇಷವಾಗಿ ಅಪಾಯಕಾರಿ ಎಂದು ಇತರ ವೈದ್ಯರು ಉಲ್ಲೇಖಿಸಿದ್ದಾರೆ.

ದೀಪಾವಳಿಯ ಮರುದಿನ ದೆಹಲಿಯು (Delhi) ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳ ಸರಾಸರಿ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) 462 ಕ್ಕೆ ದಾಖಲಾಗಿದೆ. ಪಟಾಕಿಗಳನ್ನು ಸಿಡಿಸುವುದು ಮತ್ತು ಕೋಲು ಸುಡುವಿಕೆಯಿಂದಾಗಿ ಕಳೆದ ಐದು ವರ್ಷಗಳಲ್ಲಿಯೇ ಅತಿ ಹೆಚ್ಚು ಮಾಲಿನ್ಯ ದಾಖಲಾಗಿದೆ.

ದೀಪಾವಳಿಯ ಮರುದಿನ ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು ತೀವ್ರದಿಂದ ಅಪಾಯಕಾರಿ ಮಟ್ಟಕ್ಕೆ ಏರಿದೆ. ಏರ್ ಕ್ವಾಲಿಟಿ ಇಂಡೆಕ್ಸ್ (AQI) ಅಂಕಿಅಂಶವು ದೆಹಲಿಯಲ್ಲಿ 500 ಮತ್ತು ನೋಯ್ಡಾದಲ್ಲಿ 600 ದಾಟಿದೆ. AQI 500 ಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. AQI ಅಂಕಿಅಂಶವು ದೀಪಾವಳಿಯ ದಿನದ ಮಧ್ಯರಾತ್ರಿ ಅಪಾಯಕಾರಿ ಮಟ್ಟ ತಲುಪಿತ್ತು.

ಗ್ಯಾಸ್ ಚೇಂಬರ್ ಆದ ದೆಹಲಿಯ ಅನೇಕ ಪ್ರದೇಶಗಳು

ಕೇಂದ್ರದ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಪ್ರಕಾರ, ಶನಿವಾರ ಬೆಳಿಗ್ಗೆ ಆಕಾಶದಲ್ಲಿ ದಟ್ಟವಾದ ಹೊಗೆಯ ಪದರ ಕಂಡುಬಂದಿದೆ. ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. AQI ಮತ್ತಷ್ಟು ಹೆಚ್ಚಾದರೆ, ಆತಂಕ ಕೂಡ ಹೆಚ್ಚಾಗುತ್ತವೆ. ಜನರು ಉಸಿರಾಡಲು ಕಷ್ಟಪಡುತ್ತಾರೆ. ಕಣ್ಣುಗಳಲ್ಲಿ ಉರಿ ಹೆಚ್ಚಾಗುವುದು ಮತ್ತು ಗಂಟಲು ನೋವು ಇತ್ಯಾದಿ ಸಮಸ್ಯೆ ಉದ್ಭವಿಸುವುದು. ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಪರಿಶೀಲಿಸಲು, 20 ಆಂಟಿಸ್ಮಾಗ್ ಗನ್‌ಗಳನ್ನು ಅಳವಡಿಸಲು ಸರ್ಕಾರ ಸೂಚನೆಗ ನೀಡಿದೆ. ಇದು ITO ದಿಂದ ಪ್ರಾರಂಭವಾಗಿದೆ.

ಪಟಾಕಿಗೆ ನಿಷೇಧವಿದ್ದರೂ ತಲೆ ಕೆಡಿಸಿಕೊಳ್ಳದ ಮಂದಿ

ನಿಷೇಧವಿದ್ದರೂ ನಡುವೆಯೂ ದೀಪಾವಳಿಯ ರಾತ್ರಿ ದೆಹಲಿಗರು ಸಾಕಷ್ಟು ಪಟಾಕಿಗಳನ್ನು ಸಿಡಿಸಿದ್ದಾರೆ. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಪಟಾಕಿ ಸುಡದಂತೆ ಜನತೆಗೆ ಮನವಿ ಮಾಡಿದ್ದರು. ಈ ಬಾರಿ ದೆಹಲಿ ಸರ್ಕಾರ ‘ಪಟಾಕಿ ಸಿಡಿಸಬೇಡಿ, ದೀಪ ಬೆಳಗಿಸಿ’ ಎಂಬ ಅಭಿಯಾನವನ್ನು ಆರಂಭಿಸಿತ್ತು, ಆದರೆ ಅನೇಕರು ಇದನ್ನು ಪಾಲಿಸಿಲ್ಲ. ದೆಹಲಿಯಲ್ಲಿ ಚಳಿಗಾಲದ ಆರಂಭದೊಂದಿಗೆ, ಗಾಳಿಯ ಗುಣಮಟ್ಟವು ತುಂಬಾ ಕಳಪೆ ಸ್ಥಿತಿಯನ್ನು ತಲುಪುತ್ತಿದೆ. ಸದ್ಯ ಇದೀಗ ಗೋಪಾಲ್ ರೈ ಇದಕ್ಕೆ ಬಿಜೆಪಿಯನ್ನು ದೂರುತ್ತಿದ್ದಾರೆ. ಬಿಜೆಪಿಯವರು ಪಟಾಕಿ ಸುಡುವಂತೆ ಜನರನ್ನು ಪ್ರಚೋದಿಸಿದರು ಎಂದು ಅವರು ಆರೋಪಿಸಿದ್ದಾರೆ. 

ದೆಹಲಿ ಸರ್ಕಾರ ಜನವರಿ 1, 2022 ರವರೆಗೆ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಆದರೆ ದಕ್ಷಿಣ ದೆಹಲಿಯ ಲಜಪತ್ ನಗರ, ಉತ್ತರ ದೆಹಲಿಯ ಬುರಾರಿ, ಪಶ್ಚಿಮ ದೆಹಲಿಯ ಪಶ್ಚಿಮ ವಿಹಾರ್ ಮತ್ತು ಪೂರ್ವ ದೆಹಲಿಯ ಶಾಹದಾರದಲ್ಲಿ ದೀಪಾವಳಿಯಂದು ಪಟಾಕಿಗಳನ್ನು ಸಿಡಿಸಲಾಯಿತು. ಹರಿಯಾಣ ಸರ್ಕಾರವು ದೆಹಲಿಯ ಪಕ್ಕದ ಪ್ರದೇಶಗಳು ಸೇರಿದಂತೆ 14 ಜಿಲ್ಲೆಗಳಲ್ಲಿ ಪಟಾಕಿಗಳನ್ನು ನಿಷೇಧಿಸಿದೆ, ಆದರೆ ಜನರು ನಿಯಮಗಳನ್ನು ಉಲ್ಲಂಘಿಸಿದ್ದಾರೆ.

Follow Us:
Download App:
  • android
  • ios