ಬಾಂಬ್ ಸ್ಫೋಟಕಗಳನ್ನು ಪತ್ತೆ ಹಚ್ಚಿ ಹಲವು ವಿಧ್ವಂಸಕ ಕೃತ್ಯಗಳನ್ನು ತಡೆದಿದ್ದು ಮಾತ್ರವಲ್ಲ, ಹಲವರ ಜೀವ ಉಳಿಸಿದ ಸ್ನೈಫರ್ ಡಾಗ್ ತಾರಾ ನಿವೃತ್ತಿಯಾಗಿದೆ. ನಿವೃತ್ತಿ ದಿನ ಪೊಲೀಸರು ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಪೊಲೀಸರು ಭಾವುಕರಾಗಿದ್ದಾರೆ.  

ಹೈದರಾಬಾದ್(ಜೂ. 22) ಹೆಸರು ತಾರಾ. ಆಕೆ ಹಲವರ ಜೀವ ಉಳಿಸಿದ ಹೋರಾಟಗಾರ್ತಿ. ಸ್ಫೋಟಕಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸುತ್ತಿದ್ದ ಈಕೆ ತೆಲಂಗಾಣದ ಆದಿಲ್‌ಬಾದ್ ಪೊಲೀಸ್ ಠಾಣೆಯ ಮುದ್ದಿನ ನಾಯಿ. ಆದಿಲ್‌ಬಾದ್ ಡಾಗ್ ಸ್ಕ್ವಾಡ್ ತಂಡದ ಸದಸ್ಯೆ ತಾರ ಕಳೆದ 11 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾಳೆ. ಸೇವೆಯ ಕೊನೆಯ ದಿನ ಆದಿಲ್‌ಬಾದ್ ಪೊಲೀಸರು ತಾರಾಗೆ ಹಾರ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. 

ಆದಿಲ್‌ಬಾದ್ ಡಾಗ್ ಸ್ಕ್ವಾಡ್ ಹಾಗೂ ಆದಿಲ್‌ಬಾದ್ ಪೊಲೀಸರು ತಾರಾಗೆ ಗೌರವ ಸನ್ಮಾನದ ಮೂಲಕ ಬೀಳ್ಕೊಟ್ಟಿದ್ದಾರೆ. ಪ್ರತಿ ಪೊಲೀಸರು ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ನೆರೆದಿದ್ದ ಪೊಲೀಸರು ಇತರ ಬಾಂಬ್ ಸ್ಕ್ವಾಡ್ ಸದಸ್ಯರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. ಬಳಿಕ ಪೊಲೀಸರು ತಾರಾ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

ಸೇನೆಯಿಂದ ನಿವೃತ್ತಿಯಾದ ಮೇರು ನಾಯಿಗೆ ಭಾವುಕ ಬೀಳ್ಕೊಡುಗೆ, ಎಸಿ ಕೋಚ್‌ನಲ್ಲಿ ತವರಿಗೆ ಪ್ರಯಾಣ!

ತಾರಾ ಇದೀಗ ಸೇವೆಯಿಂದ ನಿವೃತ್ತಿಯಾಗಿದೆ. ಆದಿಲ್‌ಬಾದ್ ಡಾಗ್ ಸ್ಕ್ವಾಡ್ ತಂಡದ ಪ್ರಮುಖ ಸದಸ್ಯೆಯಾಗಿದ್ದ ತಾರ, ಕಳೆದ 11 ವರ್ಷ ಸೇವೆ ಸಲ್ಲಿಸಿದ್ದಾಳೆ. ಪ್ರಖುವಾಗಿ ಸ್ಫೋಟಕಗಳನ್ನು ಪತ್ತೆ ಹಚ್ಚುವಲ್ಲಿ ತಾರಾ ಎತ್ತಿದ ಕೈ. ಬ್ಯಾಗ್‌ನಲ್ಲಿಟ್ಟ ಸ್ಫೋಟಕ, ಅವಿತಿಟ್ಟ ಸ್ಫೋಟಕಗಳನ್ನು ಪತ್ತೆ ಹಚ್ಚಿ ಹಲವು ದುರಂತಗಳನ್ನು ತಾರಾ ತಪ್ಪಿಸಿದ್ದಾಳೆ. ಪೊಲೀಸರ ನೆಚ್ಚಿನ ಹಾಗೂ ಮುದ್ದಿನ ನಾಯಿಯಾಗಿದ್ದ ತಾರಾಗೆ ಇದೀಗ ಪೊಲೀಸರು ಗೌರವಯುತ ವಿದಾಯ ಹೇಳಿದ್ದಾರೆ. 

Scroll to load tweet…