ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ವಿವಾದಿತ ಹಾಗೂ ಪ್ರಚೋದನೆ ನೀಡುವಂತ ಪೋಸ್ಟ್ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಈಗಾಗಲೇ ಈ ರೀತಿ ಪೋಸ್ಟ್‌ಗಳಿನಿಂದ ಹಲವು ಗಲಭೆಗಳು ನಡೆದು ಹೋಗಿದೆ. ಇದೀಗ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅತೀ ದೊಡ್ಡ ಗಲಭೆಯನ್ನು ತಪ್ಪಿಸಲಾಗಿದೆ. ಈ ಘಟನೆ ಕುರಿತ ವಿವರ ಇಲ್ಲಿದೆ.
ಲಕ್ನೋ(ಜ.03): ಸಾಮಾಜಿಕ ಜಾಲತಾಣಗಳಲ್ಲಿನ ವಿವಾದಿತ ಪೋಸ್ಟ್‌ಗಳು ಸೃಷ್ಟಿಸುವ ಅವಾಂತರ ಒಂದೆರಡಲ್ಲ. ಇದಕ್ಕೆ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಗಣಗಳು ಉತ್ತಮ ಉದಾಹರಣೆಯಾಗಿದೆ. ಇದೀಗ ಮತ್ತೊಂದು ಗಲಭೆಯನ್ನು ತಪ್ಪಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹಾಗೂ ಗಲಭೆಗೆ ಪ್ರಚೋದನೆ ನೀಡುವ ಪೋಸ್ಟ್ ಹಾಕಿದ ಉತ್ತರ ಪ್ರದೇಶದ ಸಿತಾಪುರದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೈತರ ನಾಲ್ಕರಲ್ಲಿ 2 ಬೇಡಿಕೆಗೆ ಕೇಂದ್ರ ಸಮ್ಮತಿ; 7ನೇ ಸುತ್ತಿನ ಸಭೆಗೆ ದಿನಾಂಕ ಫಿಕ್ಸ್!...
ಡಿಸೆಂಬರ್ 31 ರಂದು ಅವದೇಶ್ ಚೌಧರಿ ಅನ್ನೋ ವ್ಯಕ್ತಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್ ಮೂಲಕ ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಪೋಸ್ಟ್ ಹಾಕಿದ ಕೆಲ ನಿಮಿಷಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಶ್ವಹಿಂದೂ ಪರಿಷತ್ ಸದಸ್ಯ ರಾಮ್ ಮೋಹನ್ ಹಾಗೂ ಗುಂಪು ಅವದೇಶ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಆದರೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಅವದೇಶ್ ಚೌಧರಿಯನ್ನು ಬಂಧಿಸಿದ್ದಾರೆ.
ಪೊಲೀಸರು ಅವದೇಶ್ ಚೌಧರಿಯನ್ನು ಬಂಧಿಸೋ ಮೂಲಕ ಗಲಭೆಯನ್ನು ತಪ್ಪಿಸಿದ್ದಾರೆ. ವಿವಾದಾತ್ಮಕ ಪೊಸ್ಟ್ ವಿರುದ್ಧ ಕೆಲ ಗುಂಪುಗಳು ಸಿದೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇತ್ತ ಪೊಲೀಸರು ಬಂಧಿತ ಅವದೇಶ್ ಮೇಲೆ ಉದ್ದೇಶಪೂರ್ವಕವಾಗಿ ಗಲಭೆಗೆ ಪ್ರಚೋದನೆ, ಅವಹೇಳನಕಾರಿ ಪೋಸ್ಚ್, ಬೆದರಿಕೆ ಒಡ್ಡಿದ ಪ್ರಕರಣಗಳನ್ನು ದಾಖಲಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 3, 2021, 10:52 PM IST