ಪ್ರಧಾನಿ ಮೋದಿ ಮುಂದೆ ಬಂದು ದ್ವೇಷದ ವಿಷವನ್ನು ತಡೆಯುವ ಅಗತ್ಯವಿದೆ: ನಾಸಿರುದ್ದೀನ್ ಶಾ

* ದೇಶವನ್ನೇ ಬೆಚ್ಚಿ ಬೀಳಿಸಿದ ಕಾನ್ಪುರ ಹಿಂಸಾಚಾರ

* ತೀವ್ರ ಆಕ್ರೋಶದ ಬಳಿಕ ನೂಪುರ್ ಶರ್ಮಾ ಅಮಾನತ್ತುಗೊಳಿಸಿದ ಬಿಜೆಪಿ

* ಪ್ರಧಾನಿ ಮೋದಿ ಮುಂದೆ ಬಂದು ದ್ವೇಷದ ವಿಷವನ್ನು ತಡೆಯುವ ಅಗತ್ಯವಿದೆ ಎಂದ ನಾಸಿರುದ್ದೀನ್ ಶಾ

PM Should Step In And Stop The Poison Naseeruddin Shah On Prophet Row pod

ಮುಂಬೈ(ಮೇ.09): ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ನಾಯಕರು ಮಾಡಿದ ಟೀಕೆ ದಿನೇ ದಿನೇ ಕಾವು ಪಡೆಯುತ್ತಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕೆಲವು ದೇಶಗಳು ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ್ದವು. ಹಲವಾರು ಗಲ್ಫ್ ರಾಷ್ಟ್ರಗಳಿಂದ ತೀವ್ರ ಪ್ರತಿಕ್ರಿಯೆ ನಂತರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು. ಏತನ್ಮಧ್ಯೆ, ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಲಾಗಿದೆ. ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಇದೀಗ ನಾಸಿರುದ್ದೀನ್ ಶಾ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ನಟ ನಾಸಿರುದ್ದೀನ್ ಶಾ ಈ ವಿವಾದದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಈ ಜನರಿಗೆ ಉತ್ತಮ ತಿಳುವಳಿಕೆ ನೀಡುವಂತೆ ನಾನು ಪ್ರಧಾನಿಯನ್ನು ವಿನಂತಿಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿದರು. ರಿಷಿಕೇಶದಲ್ಲಿ ಧರ್ಮ ಸಂಸತ್ತಿನಲ್ಲಿ ಹೇಳಿದ್ದೇನು. ಅವರು ಅವರ ನಂಬಿದರೆ ಹಾಗೆ ಹೇಳಬೇಕು. ನಂಬಿಕೆ ಇಲ್ಲದಿದ್ದರೂ ಇದನ್ನೇ ಹೇಳಬೇಕು ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಫಾಲೋ ಮಾಡುವ ದ್ವೇಷಿಗಳಿಗೆ ಏನಾದರೂ ಮಾಡಬೇಕು. ವಿಷ ಹರಡುವುದನ್ನು ತಡೆಯಲು ಅವರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೋದಿ ಸರಕಾರ ಕೈಗೊಂಡ ಕ್ರಮ ತೀರಾ ಕಡಿಮೆ ಮತ್ತು ತಡವಾಗಿದೆ ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ. ಇದಲ್ಲದೆ, ಮುಂದೊಂದು ದಿನ ಜನರು ಉತ್ತಮ ತಿಳುವಳಿಕೆಯನ್ನು ಹೊಂದುತ್ತಾರೆ ಮತ್ತು ಮುಸ್ಲಿಮರ ಮೇಲಿನ ದ್ವೇಷವು ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದರು.

ಪಕ್ಷದಿಂದ ಅಮಾನತುಗೊಂಡ ನಂತರ, ನೂಪುರ್ ಶರ್ಮಾ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ, ಆದರೆ ಇದನ್ನು ನಾಸಿರುದ್ದೀನ್ ಶಾ ಬೂಟಾಟಿಕೆ ಎಂದು ಕರೆದಿದ್ದಾರೆ. ಹಿಂದೂ ದೇವತೆಗಳ ಬಗ್ಗೆ ಮುಸ್ಲಿಂ ಬಾಂಧವರು ಹೀಗೆ ವಿವಾದಾತ್ಮಕ ಕಾಮೆಂಟ್ ಮಾಡಿರುವ ಯಾವುದೇ ವಿಚಾರ ನನಗೆ ನೆನಪಿಲ್ಲ ಎಂದು ನಟ ಹೇಳಿದ್ದಾರೆ. ಇದಲ್ಲದೇ ನೂಪುರ್ ಶರ್ಮಾಗೆ ಬಂದಿರುವ ಬೆದರಿಕೆಯನ್ನೂ ಅವರು ಖಂಡಿಸಿದ್ದಾರೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ನಾಸಿರುದ್ದೀನ್ ಶಾ ಇಂದು ಮುಸ್ಲಿಂ ಹಕ್ಕುಗಳ ಬಗ್ಗೆ ಮಾತನಾಡಿದರೆ ಆತನನ್ನು ಗುರಿಯಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಅಷ್ಟಕ್ಕೂ ನಾವು ಎಲ್ಲರನ್ನೂ ಭಾರತೀಯರಾಗಿ ಏಕೆ ನೋಡುವುದಿಲ್ಲ? ಎಂದೂ ಪ್ರಶ್ನಿಸಿದ್ದಾರೆ.

ಶಾಂತಿ, ಒಗ್ಗಟ್ಟಿನ ಬಗ್ಗೆ ಮಾತನಾಡಿದರೆ ಒಂದು ವರ್ಷ ಜೈಲಿಗೆ ಹಾಕುತ್ತಾರೆ ಎನ್ನುತ್ತಾರೆ. ಮತ್ತೊಂದೆಡೆ, ಯಾರಾದರೂ ನರಮೇಧದ ಬಗ್ಗೆ ಮಾತನಾಡಿದರೆ, ಸಣ್ಣ ಶಿಕ್ಷೆಯನ್ನು ನೀಡಲಾಗುತ್ತದೆ. ಇದು ಜಾರ್ಜ್ ಆರ್ವೆಲ್ ಅವರ ಕಾದಂಬರಿ '1984' ನಲ್ಲಿ ತೋರಿಸಿರುವ ಡಬಲ್ ಥಿಂಕಿಂಗ್ ಅನ್ನು ಪ್ರತಿಬಿಂಬಿಸುವ ಡಬಲ್ ಸ್ಟ್ಯಾಂಡರ್ಡ್‌ನಂತಿದೆ ಎಂದಿದ್ದಾರೆ..

Latest Videos
Follow Us:
Download App:
  • android
  • ios