ಯುವ ಗೇಮಿಂಗ್ ಉದ್ಯಮಿಗಳ ಜತೆ ಮೋದಿ ಸಂವಾದ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗೇಮಿಂಗ್ ಉದ್ಯಮದ ಖ್ಯಾತನಾಮ ಯುವ ಉದ್ಯಮಿಗಳ ಜೊತೆ ದೇಶದ ಗೇಮಿಂಗ್ ಉದ್ಯಮದ ಇತ್ತೀಚಿನ ಆಗುಹೋಗುಗಳ ಕುರಿತು ಸಂವಾದ ನಡೆಸಿದರು. ಈ ವೇಳೆ ಆನ್‌ಲೈನ್ ಜೂಜು ಮತ್ತು ಗೇಮಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಿದರು.
ನವದೆಹಲಿ (ಏ.12) ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗೇಮಿಂಗ್ ಉದ್ಯಮದ ಖ್ಯಾತನಾಮ ಯುವ ಉದ್ಯಮಿಗಳ ಜೊತೆ ದೇಶದ ಗೇಮಿಂಗ್ ಉದ್ಯಮದ ಇತ್ತೀಚಿನ ಆಗುಹೋಗುಗಳ ಕುರಿತು ಸಂವಾದ ನಡೆಸಿದರು. ಈ ವೇಳೆ ಆನ್‌ಲೈನ್ ಜೂಜು ಮತ್ತು ಗೇಮಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಿದರು.
ಈ ಕುರಿತು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಗುರುವಾರ ‘ಎಕ್ಸ್’ನಲ್ಲಿ ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ಗೇಮಿಂಗ್ ಉದ್ಯಮದ ಹೊಸ ಬೆಳವಣಿಗೆಗಳ ಕುರಿತು ಪ್ರಧಾನಿ ಮೋದಿ ಅವರು ಗೇಮಿಂಗ್ ಉದ್ಯಮಿಗಳ ಜೊತೆ ಸಂವಾದ ನಡೆಸಿದರು.
ಕಾಂಗ್ರೆಸ್‌ಗೆ ಕುಟುಂಬ ಮೊದಲು, ನನಗೆ ಭಾರತ ಮತ್ತು ನೀವು: ನರೇಂದ್ರ ಮೋದಿ
ಭಾರತದಲ್ಲಿ ಗೇಮಿಂಗ್ ಉದ್ದಿಮೆಯನ್ನು ಪ್ರೋತ್ಸಾಹಿಸಲು ಮೋದಿ ಸರ್ಕಾರ ಸೃಜನಶೀಲತೆಗೆ ಉತ್ತೇಜನ ನೀಡುತ್ತಿದೆ. ಸಂವಾದದಲ್ಲಿ ಗ್ಯಾಂಬ್ಲಿಂಗ್ ಮತ್ತು ಗೇಮಿಂಗ್ ನಡುವಿನ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಈ ವೇಳೆ ಪ್ರಧಾನಿಯವರು ದೇಶದ ಖ್ಯಾತ ಗೇಮರ್‌ಗಳಾದ ತೀರ್ಥ ಮೆಹ್ತಾ, ಪಾಯಲ್ ಧರೆ, ಅನಿಮೇಶ್ ಅಗರವಾಲ್, ಅನ್ಷು ಬಿಷ್ಟ್, ನಮನ್ ಮಾಥುರ್, ಮಿಥಿಲೇಶ್ ಪಠಾಣ್‌ಕರ್, ಗಣೇಶ್ ಗಂಗಾಧರ್ ಮುಂತಾದವರ ಜೊತೆ ಪಿಸಿ ಮತ್ತು ವಿಆರ್ ಗೇಮ್ ಆಡಿದರು’ ಎಂದು ಬರೆದಿದ್ದಾರೆ.