Asianet Suvarna News Asianet Suvarna News

ಕೊರೋನಾ ಆತಂಕ: ಸಂಜೆ 4.30ಕ್ಕೆ ತಜ್ಞ ವೈದ್ಯರ ಜೊತ ಪ್ರಧಾನಿ ಮೋದಿ ಸಭೆ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೋರಾಟ ನಡೆಸುತ್ತಿದೆ. ಆದರೆ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ನಡುವೆ ಪ್ರಧಾನಿ ಮೋದಿ, ಉನ್ನತ ಅಧಿಕಾರಿಗಳ ಜೊತೆ, ಮುಖ್ಯಮಂತ್ರಿಗಳ ಜೊತೆ ಸೇರಿದಂತೆ ಹಲವು ಸಭೆ ನಡೆಸಿದ್ದಾರೆ. ಇದೀಗ ದೇಶದ ವೈದ್ಯರು ಹಾಗೂ ಲಸಿಕೆ ಉತ್ಪಾದಕ ಕಂಪನಿಗಳ ಜೊತೆ ಮೋದಿ ಸಭೆ ನಡೆಸಲಿದ್ದಾರೆ. ಕುರಿತ ಹೆಚ್ಚಿನ ವಿವರ ಇಲ್ಲಿದೆ.

PM Modi to interact with leading doctors and pharma firms over COVID 19 situation ckm
Author
Bengaluru, First Published Apr 19, 2021, 3:46 PM IST

ನವದೆಹಲಿ(ಏ.19): ಕೊರೋನಾ ವೈರಸ್ ಭಾರತದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ದಿನವೊಂದಕ್ಕೆ 2.7 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಸಿಕ್ಕವರಿಗೆ ಆಕ್ಸಿಜನ್ ಇಲ್ಲ, ಲಸಿಕೆ ಇಲ್ಲ ಸೇರಿದಂತೆ ನೊರೊಂದು ಸಮಸ್ಯೆಗಳು ಉದ್ಭವಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಪರಿಸ್ಥಿತಿ ಕುರಿತು ದೇಶದ ವೈದ್ಯರ ಜೊತೆ ಸಭೆ ನಡೆಸಲಿದ್ದಾರೆ.

ಕೊರೋನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ!

ದೇಶದ ಪ್ರಮುಖ ವೈದ್ಯರ ಜೊತೆ ಇಂದು(ಏ.19) ಸಂಜೆ 4.30ಕ್ಕೆ ಮೋದಿ ಸಭೆ ನಡೆಸಲಿದ್ದಾರೆ. ಈ ವೇಳೆ ದೇಶದಲ್ಲಿನ ಕೊರೋನಾ ಪರಿಸ್ಥಿತಿ. ಕೈಗೊಳ್ಳಬೇಕಾದ ಮೆಡಿಕಲ್ ಮುನ್ನಚ್ಚೆರಿಕೆಗಳು, ವೈದ್ಯಕೀಯ ಸಲಕರಣೆ, ಔಷಧಿ, ಲಸಿಕೆ, ಆಕ್ಸಿಜನ್ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಲಿದೆ.

ವೈದ್ಯರ ಜೊತೆ ಕೊರೋನಾ ನಿಯಂತ್ರಕ್ಕೆ ಸಲಹೆಗಳನ್ನು ಮೋದಿ ಪಡೆಯಲಿದ್ದಾರೆ. ದೇಶದಲ್ಲಿ ಕೈಮೀರಿ ಹೋಗುತ್ತಿರುವ ಕೊರೋನಾ ನಿಯಂತ್ರಣ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಸಭೆ ಎನ್ನಲಾಗುತ್ತಿದೆ. ಈ ಸಭೆ ಬಳಿಕ 6 ಗಂಟೆಗೆ ಮೋದಿ, ಲಸಿಕೆ ಉತ್ಪಾದಕ ಕಂಪನಿಗಳ ಜೊತೆ ಸಭೆ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಮನವಿ ಮೇರೆಗೆ ಕುಂಭಮೇಳಕ್ಕೆ ತೆರೆ!

ಫಾರ್ಮ ಕಂಪನಿ ಜೊತೆಗಿನ ವಿಡಿಯೋ ಸಭೆಯಲ್ಲಿ ಮೋದಿ, ಹೆಚ್ಚಿನ ಲಸಿಕೆ ಉತ್ಪಾದನೆ, ಪೂರೈಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.  ಈ ಎರಡೂ ಸಭೆಗಳು ಇದೀಗ ಅತ್ಯಂತ ಮಹತ್ವದ್ದಾಗಿದೆ.

ಮೋದಿ ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳ ಜೊತೆ, ಎಲ್ಲಾ ಮುಖ್ಯಮಂತ್ರಿಗಳ ಜೊತೆ, ರಾಜ್ಯಪಾಲರ ಜೊತೆ ವಿಡಿಯೋ ಸಭೆ ನಡೆಸಿದ್ದಾರೆ. ಎಲ್ಲಾ ಸಭೆಗಳಲ್ಲೂ ಲಾಕ್‌ಡೌನ್ ಹೇರದೆ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Follow Us:
Download App:
  • android
  • ios