ನವದೆಹಲಿ(ಮೇ.06) ದೇಶದಲ್ಲಿ ಕೊರೋನಾ ವೈರಸ್ ಸ್ಫೋಟಗೊಂಡಿದೆ. ಕರ್ಫ್ಯೂ, ಲಾಕ್‌ಡೌನ್, ಕಠಿಣ ನಿಯಮ ಸೇರಿದಂತೆ ಹಲವು ನಿರ್ಬಂಧಗಳನ್ನು ಜಾರಿ ಮಾಡಿದರೂ ಭಾರತದಲ್ಲಿ ಕೊರೋನಾ ಕೇಸ್ ಕಡಿಮೆಯಾಗುತ್ತಿಲ್ಲ. ಐಸಿಯು, ಐಕ್ಸಿಜನ್ ಸೇರಿದಂತೆ ಲಸಿಕೆ ಕೊರತೆ ದೇಶವನ್ನೇ ಅಪಾಯಕ್ಕೆ ದೂಡುತ್ತಿದೆ.  ಪರಿಸ್ಥಿತಿ ನಿಯಂತ್ರಣಕ್ಕೆ ಪಣತೊಟ್ಟಿರುವ ಪ್ರಧಾನಿ ಮೋದಿ ಇದೀಗ ರಾಜ್ಯ ಹಾಗೂ ಜಿಲ್ಲಾವಾರು ಕೊರೋನಾ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ನೌಕಾಪಡೆ ಕಾರ್ಯಾಚರಣೆ ಪರಿಶೀಲಿಸಿದ ಪ್ರಧಾನಿ ಮೋದಿ!

ಮಹತ್ವದ ಸಭೆಯಲ್ಲಿ, ರಾಜ್ಯ ಹಾಗೂ ಜಿಲ್ಲೆಗಳ ಕೊರೋನಾ ಪ್ರಕರಣ ಏರಿಕೆ, ಸಕ್ರೀಯ ಪ್ರಕರಣಗಳ ಕುರಿತು ಮೋದಿ ವಿವರವಾದ ವರದಿ ಪಡೆದುಕೊಂಡಿದ್ದಾರೆ. . 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ 12 ರಾಜ್ಯಗಳು ಹಾಗೂ ಅತೀ ಹೆಚ್ಚು ಕೊರೋನಾ ಪ್ರಕರಣ ದಾಖಲಾಗುತ್ತಿರುವ ವರದಿಯನ್ನು ಮೋದಿ ಪಡೆದುಕೊಂಡಿದ್ದಾರೆ. 

ಈ ಸಭೆಯಲ್ಲಿ ರಾಜ್ಯ ಹಾಗೂ ಆಯಾ ಜಿಲ್ಲೆಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಹಾಗೂ ಎಲ್ಲಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಲಾಗಿದೆ. ಇದೇ ವೇಳೆ ಮೋದಿ, ಕೆಲ ಮಹತ್ವದ ಸಲಹೆಗಳನ್ನು ಮೋದಿ ನೀಡಿದ್ದಾರೆ.

ನೈಟ್ರೋಜನ್ ಘಟಕ ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ; ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ!

ಶೇಕಡಾ 10ಕ್ಕಿಂತ ಹೆಚ್ಚಿನ ಪಾಸಿಟೀವ್ ಕೇಸ್ ದಾಖಲಾಗಿರುವ ಜಿಲ್ಲೆಗಳನ್ನು ಗುರುತಿಸಿ ಶೀಘ್ರದಲ್ಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ಜಿಲ್ಲೆಗಳ ಪಾಸಿಟೀವ್ ಕೇಸ್ ಶೇಕಡಾ 10ಕ್ಕಿಂತ ಹೆಚ್ಚಾಗಿದ್ದು, ಶೇಕಡಾ 60ಕ್ಕಿಂತಲೂ ಹೆಚ್ಚು ಬೆಡ್ ಹಾಗೂ ಐಸಿಯು ಬೇಡಿಕೆ ಬರುತ್ತಿದೆ. ಈ ಕುರಿತು ಗಮನಹರಿಸುವಂತೆಯೂ ಸೂಚಿಸಲಾಗಿದೆ.

ಇದೇ ವೇಳೆ ಮೋದಿ, ರೆಮ್ಡಿಸಿವಿರ್ ಸೇರಿದಂತೆ ಔಷಧಿಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು. ಲಸಿಕೆ ಉತ್ಪದಾನೆ ವೇಗ ಹೆಚ್ಚಿಸಿ ಆಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಇನ್ನು ಲಸಿಕೆ ವ್ಯರ್ಥ ಕುರಿತು ರಾಜ್ಯವಾರು ವರದಿಯನ್ನೂ ಮೋದಿ ಪರಿಶೀಲನೆ ನಡೆಸಿದ್ದಾರೆ. ಲಾಕ್‌ಡೌನ್ ಸೇರಿದಂತೆ ಯಾವುದೇ ಕರ್ಫ್ಯೂ ಲಸಿಕೆ ಪಡೆಯಲು ತೊಡಕಾಗಬಾರದು, ಲಸಿಕೆ ನೀಡುವಿಕೆ ವೇಗ ಹೆಚ್ಚಿಸಬೇಕು ಎಂದು ಮೋದಿ ಸೂಚಿಸಿದರು.