Asianet Suvarna News Asianet Suvarna News

ಮಾಜಿ ಸಿಎಂ ಆರೋಗ್ಯ ವಿಚಾರಿಸಲು ಪ್ರಫುಲ್ಲಾ ಮಹಾಂತ ಕುಟುಂಬ ಭೇಟಿಯಾದ ಮೋದಿ!

ಅಸ್ಸಾಂ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮಹಾಂತ ಅನಾರೋಗ್ಯ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಿಲಿಸಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮಹಾಂತ ಪತ್ನಿ ಹಾಗೂ ಪುತ್ರನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

PM Modi met Joyasree Goswami Mahanta enquired about Prafulla Mahanta health ckm
Author
Bengaluru, First Published Feb 19, 2021, 6:47 PM IST

ನವದೆಹಲಿ(ಫೆ.18): ಕಳೆದ ಕೆಲ ದಿನಗಳಲ್ಲಿ ತೀವ್ರ ಆನಾರೋಗ್ಯದಿಂದ ಅಸ್ಸಾಂ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮಹಾಂತ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ  ಪ್ರುಫುಲ್ಲಾ ಕುಮಾರ್ ಮಹಾಂತ ಪತ್ನಿ, ರಾಜ್ಯಸಭಾ ಸದಸ್ಯೆ ಜೊಯಶ್ರಿ ಗೋಸ್ವಾಮಿ ಮಹಾಂತ ಭೇಟಿಯಾಗಿದ್ದಾರೆ.

ಪಾಕ್ ಸೇರಿ 9 ದೇಶದ ಜೊತೆ ಭಾರತ ಹೆಲ್ತ್ ವಿಸಾ, ಏರ್ ಆಂಬುಲೆನ್ಸ್ ಒಪ್ಪಂದ

ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗ್‌ನಲ್ಲಿ ಪ್ರಫುಲ್ಲಾ ಪತ್ನಿ ಜೊಯಶ್ರಿ ಹಾಗೂ ಪುತ್ರನ್ನು ಮೋದಿ ಭೇಟಿಯಾಗಿ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಿದ್ದಾರೆ. ಇಷ್ಟೇ ಅಲ್ಲ ಶೀಘ್ರ ಚೇತರಿಕೆ ಹಾರೈಸಿದ್ದಾರೆ.

ಗುವ್ಹಾಟಿಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಫುಲ್ಲಾ ಕುಮಾರ್ ಮಹಾಂತ ಆರೋಗ್ಯ ಕಳೆದೆರಡು ದಿನದಿಂದ ತೀವ್ರ ಹದೆಗೆಟ್ಟಿತು. ಉಸಿರಾಟದ ಸಮಸ್ಯೆ, ಬಿಪಿ ಸೇರಿದಂತೆ ಇತರ ಕೆಲ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಗುವ್ಹಾಟಿಯಿಂದ್ ಏರ್‌ಲಿಫ್ಟ್ ಮಾಡಿ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ.

Follow Us:
Download App:
  • android
  • ios