ಸತತ ಗುಂಡಿನ ದಾಳಿಯಿಂದ ನಲುಗಿಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಿಸಿದ್ದಾರೆ. 7,000 ಮಂದಿ ಮೋದಿ ಜೊತೆ ಯೋಗಾಭ್ಯಾಸ ನಡೆಸಿದ್ದಾರೆ.
ಶ್ರೀನಗರ(ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನೇ ಭಾರತ ಸೇರಿದಂತೆ ವಿಶ್ವಾದ್ಯಂಚ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀನಗರದ ದಾಲ್ ಸರೋವರದ ತಟದಲ್ಲಿ ಮೋದಿ ಯೋಗಾಭ್ಯಾಸ ನಡೆಸಿದ್ದಾರೆ. ಈ ಬಾರಿ ವೈಯಕ್ತಿಕ ಮತ್ತು ಸಮಾಜಕ್ಕಾಗಿ ಯೋಗ ಅನ್ನೋ ಪರಿಕಲ್ಪನೆಯಲ್ಲಿ ಮೋದಿ ಯೋಗದಿನಾಚರಿಸಿದ್ದಾರೆ. ಇತ್ತೀಚೆಗೆ ಉಗ್ರರ ದಾಳಿಯಿಂದ ನಲುಗಿದ್ದ ಕಾಶ್ಮೀರದಲ್ಲಿ ಯೋಗದಿನಾಚರಣೆ ಆಚರಿಸುವ ಮೂಲಕ ಮೋದಿ ಪರಿವರ್ತನೆಯ ಸಂದೇಶ ಸಾರಿದ್ದಾರೆ.
ಪ್ರಧಾನಿ ಮೋದಿ ಜೊತೆ ದಾಲ್ ಸರೋವರದ ತೀರದಲ್ಲಿ ಬರೋಬ್ಬರಿ 7,000 ಮಂದಿ ಯೋಗ ದಿನಾಚರಿಸಿದ್ದಾರೆ. ಯೋಗ ದಿನಾಚರಣೆಗೂ ಮೊದಲು ಮಾತನಾಡಿದ ಮೋದಿ, ನಾನು ಯೋಗದ ಭೂಮಿಗೆ ಆಗಮಿಸಿ ಯೋಗಾಭ್ಯಾಸ ಮಾಡುತ್ತಿರುವುದು ಅತೀವ ಸಂತಸ ತಂದಿದೆ.ಕಾಶ್ಮೀರ ಯೋಗ ಹಾಗೂ ಸಾಧನೆಯ ಪುಣ್ಯ ಭೂಮಿ. ಯೋಗಿಂದ ನಾವು ಶಕ್ತಿಯನ್ನು ಅನುಭವಿಸಲು ಸಾಧ್ಯ. ಕಾಶ್ಮೀರದಿಂದ ನಾನು ಭಾರತ ಹಾಗೂ ವಿಶ್ವದಾದ್ಯಂತ ಯೋಗದಿನಾಚರಿಸುವ ಎಲ್ಲರಿಗೂ ನನ್ನ ಶುಭಾಶಯ ಎಂದು ಮೋದಿ ಹೇಳಿದ್ದಾರೆ.
ಕಾಶ್ಮೀರಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ: ಪ್ರಧಾನಿ ಮೋದಿ
ಪ್ರಧಾನಿ ಮೋದಿ ಜೊತೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹ, ಆಯುಷ್ ಹಾಗೂ ಆರೋಗ್ಯ ರಾಜ್ಯ ಖಾತೆ ಸಚಿವ ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ ಸೇರಿದಂತೆ 7,000 ಮಂದಿ ಯೋಗದಿನಾಚರಿಸಿದ್ದಾರೆ.
ದೇಶ ವಿದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ. ಕರ್ನಾಟಕದ ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಯೋಗ ದಿನಾಚರಿಸಲಾಗಿದೆ. ಚಾಮರಾಜನಗರದಲ್ಲಿ ಯೋಗ ದಿನಾಚರಣೆ ವಿಳಂಬವಾಗಿ ಆರಂಭಗೊಂಡಿತ್ತು. ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಗೈರಾಗಿದ ಕಾರಣ ವಿಳಂಬವಾಗಿ ದಿನಾಚರಣೆ ಆರಂಭಗೊಂಡಿತ್ತು. ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಗೈರಾಗಿದ್ದರು. ಹೀಗಾಗಿ ಎಸ್.ಪಿ ಪದ್ಮಿನಿ ಸಾಹೋ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಮತ್ತು ಸಿಇಓ ಆನಂದ ಪ್ರಕಾಶ್ ಮೀನಾ ರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡದರು.
