ಜಗತ್ತಿನ ಮೊದಲ ಲಸಿಕೆ ಎಂಬ ಹಿರಿಮೆ ಹೊಂದಿರುವ ಫೈಝರ್ ಲಸಿಕೆ, ಸೋಂಕಿನ ಲಕ್ಷಣ ಹೊಂದಿದ್ದವರಲ್ಲಿ ಶೇ.97ರಷ್ಟು ಪರಿಣಾಮಕಾರಿ ಎಂಉ ವರದಿಯೊಂದು ಹೇಳಿದೆ.
ಲಂಡನ್ (ಮಾ.12): ಕೋವಿಡ್‌ಗೆ ಸಿದ್ಧವಾದ ಜಗತ್ತಿನ ಮೊದಲ ಲಸಿಕೆ ಎಂಬ ಹಿರಿಮೆ ಹೊಂದಿರುವ ಫೈಝರ್ ಲಸಿಕೆ, ಸೋಂಕಿನ ಲಕ್ಷಣ ಹೊಂದಿದ್ದವರಲ್ಲಿ ಶೇ.97ರಷ್ಟು ಪರಿಣಾಮಕಾರಿ ಎಂದು ಹೊಸ ವರದಿಯೊಂದು ತಿಳಿಸಿದೆ.
ಈ ಹಿಂದಿನ ವರದಿ ಅನ್ವಯ ಲಸಿಕೆ ಶೇ.94ರಷ್ಟುಪರಿಣಾಮಕಾರಿ ಎಂದು ಕಂಡುಬಂದಿತ್ತು.
ಕರ್ನಾಟಕ ಸೇರಿ 6 ರಾಜ್ಯಗಳಿಂದ ಭಾರತದಲ್ಲಿ 86% ಕೊರೋನಾ ಎಂದ ಇಲಾಖೆ; ಲಾಕ್‌ಡೌನ್ ಆತಂಕ! ..
ಆದರೆ ಇಸ್ರೇಲ್‌ನಲ್ಲಿ ಜ.17ರಿಂದ ಮಾ.6ರವರೆಗೆ ನಡೆದ ರಾಷ್ಟ್ರೀಯ ಲಸಿಕಾ ಅಭಿಯಾನದ ವರದಿಗಳ ಅನ್ವಯ ಲಸಿಕೆ ಶೇ.97ರವರೆಗೂ ಪರಿಣಾಮಕಾರಿ ಎಂದು ಖಚಿತಪಟ್ಟಿದೆ ಎಂದು ಲಸಿಕೆ ಉತ್ಪಾದಿಸಿರುವ ಫೈಝರ್/ ಎನ್‌ಬಯೋಟೆಕ್ ಕಂಪನಿಗಳು ಹೇಳಿವೆ.
