ಬೆಂಗಳೂರು-ದಿಲ್ಲಿ ವಿಮಾನದಲ್ಲಿ ಬೆತ್ತಲಾದ ಪಾನಮತ್ತ ಪ್ರಯಾಣಿಕ!| ಕುಡಿದ ಮತ್ತಿನಲ್ಲೇ ಹುಸಿ ಬಾಂಬ್‌ ಬೆದರಿಕೆ

ನವದೆಹಲಿ(ಏ.10): ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಏರ್‌ ಏಷ್ಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಕುಡಿದ ಅಮಲಿನಲ್ಲಿ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿ ಬೆತ್ತಲಾದ ಘಟನೆ ನಡೆದಿದೆ. ಅಲ್ಲದೆ, ಧರಿಸಿದ್ದ ಲೈಫ್‌ ಜಾಕೆಟ್‌ನೊಳಗೆ ಬಾಂಬ್‌ ಇಟ್ಟುಕೊಂಡಿದ್ದೇನೆ ಎಂದು ವಿಮಾನದ ಸಿಬ್ಬಂದಿ ಬೆದರಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ರೀತಿ ಬ್ಲ್ಯಾಕ್‌ಮೇಲ್‌ ಮಾಡಿದ್ದ ಆತ, ಕೊನೆಗೆ ತನ್ನ ಮೈಮೇಲಿನ ಬಟ್ಟೆಗಳನ್ನು ತಾನೇ ಬಿಚ್ಚಿಕೊಳ್ಳಲು ಯತ್ನಿಸಿದ್ದ. ಆದರೆ ಪ್ರಯಾಣಿಕನ ಈ ದುರ್ವರ್ತನೆಗೆ ಸಿಬ್ಬಂದಿ ಬ್ರೇಕ್‌ ಹಾಕಿದರು ಎಂದು ವರದಿಯಾಗಿದೆ.

‘ಪ್ರಯಾಣಿಕ ಈ ದುರ್ವತನೆಯನ್ನು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಏರ್‌ ಏಷ್ಯಾ ವಿಮಾನ ಸಂಸ್ಥೆ ತಿಳಿಸಿದೆ