Asianet Suvarna News Asianet Suvarna News

'ದಲಿತರು, ಮಹಿಳೆಯರು, ಹಿಂದುಳಿದವರು, ರೈತರ ಮಕ್ಕಳು ಸಚಿವರಾದ್ರೆ ಕೆಲವರಿಗೆ ಹಿಡಿಸಲ್ಲ'

* ಸಂಸತ್ತಿಗೆ ನೂತನ ಸಚಿವರ ಪರಿಚಯಿಸಿದ ಮೋದಿ

* ಸಚಿವರ ಪರಿಚಯದ ಮಧ್ಯೆ ವಿಪಕ್ಷಗಳಿಗೆ ಮೋದಿ ಟಾಂಗ್

* 'ದಲಿತರು, ಮಹಿಳೆಯರು, ಹಿಂದುಳಿದವರು, ರೈತರ ಮಕ್ಕಳು ಸಚಿವರಾದ್ರೆ ಕೆಲವರಿಗೆ ಹಿಡಿಸಲ್ಲ'

Parliament Session PM Modi addresses Lok Sabha introduces new ministers pod
Author
Bangalore, First Published Jul 19, 2021, 12:05 PM IST

ನವದೆಹಲಿ(ಜು.19): ಸಂಸತ್ತಿನ ಮಾನ್ಸೂನ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಆಗಸ್ಟ್ 13 ರವರೆಗೆ ಮುಂದುವರಿಯಲಿದೆ. ನಿರೀಕ್ಷೆಯಂತೆ ಸಂಸತ್ ಕಲಾಪ ಆರಂಣಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಗಲಾಟೆ ಆರಂಭಿಸಿವೆ. ಕೃಷಿ ಕಾನೂನು, ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ, ಹಣದುಬ್ಬರ, ನಿರುದ್ಯೋಗ ಇತ್ಯಾದಿಗಳಿಗೆ ಸಂಬಂಧಿಸಿದೆ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ. ವಿಪಕ್ಷಗಳ ಗದ್ದಲದ ನಡಡುವೆ ಮಧ್ಯೆ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ರವರೆಗೆ ಮುಂದುಡಲಾಗಿದೆ.

ಹೊಸ ಮಂತ್ರಿಗಳ ಪರಿಚಯದ ನಡುವೆ ಮೋದಿ ಮಾತು

ಪ್ರತಿಪಕ್ಷಗಳ ಕೋಲಾಹಲದ ಮಧ್ಯೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ನೂತನ ಮಂತ್ರಿಗಳನ್ನು ಪರಿಚಯಿಸಿದ್ದಾರೆ. ಕಲಾಪವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಸಂಸತ್ತಿನಲ್ಲಿ ಉತ್ಸಾಹ ಇರುತ್ತದೆ ಎಂದು ನಾನು ಭಾವಿಸಿದ್ದೇನೆ ಏಕೆಂದರೆ ಅನೇಕ ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಮಂತ್ರಿಗಳಾಗಿದ್ದಾರೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆ ಹಾಗೂ ಒಬಿಸಿ ಸಮುದಾಯದವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಲಾಗಿದೆ. 

ಬಹುಶಃ ಮಹಿಳೆಯರು, ಒಬಿಸಿ, ರೈತರ ಮಕ್ಕಳು ಮಂತ್ರಿಗಳಾದರೆ ಕೆಲವರಿಗೆ ಇಷ್ಟವಾಗಲಿಕ್ಕಿಲ್ಲ. ಹೀಗಾಗಿಯೇ ತಮ್ಮನ್ನು ಪರಿಚಯಿಸಿಕೊಳ್ಳಲು ಇಚ್ಛಿಸುವುದಿಲ್ಲ. ಇಂದು ಸಂಸತ್ತಿನಲ್ಲಿ ಉತ್ಸಾಹದ ವಾತಾವರಣ ಇರುತ್ತದೆ ಎಂದು ನಾನು ಯೋಚಿಸುತ್ತಿದ್ದೆ ಏಕೆಂದರೆ ನಮ್ಮ ಮಹಿಳಾ ಸಂಸದರು, ದಲಿತ ಸಹೋದರರು, ಬುಡಕಟ್ಟು ಜನಾಂಗದವರು, ರೈತ ಕುಟುಂಬಗಳ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಪರಿಚಯಿಸಲು ಸಂತೋಷವಾಯಿತು ಎಂದಿದ್ದಾರೆ.

ಕೊರೋನಾ ಬಗೆಗಿನ ಚರ್ಚೆಗೆ ಸಿದ್ಧ

ಇದೇ ವೇಳೆ ಪಿಎಂ ಮೋದಿ ಸದನದಲ್ಲಿದ್ದ ಎಲ್ಲಾ ನಾಯಕರ ಬಳಿ ಮನವಿ ಮಾಡುತ್ತಾ ನಾಳೆ, ಮಂಗಳವಾರ ಸಂಜೆ ಬಿಡುವು ಮಾಡಿಕೊಂಡರೆ ಕೊರೋನಾ ಬಗ್ಗೆ ಚರ್ಚೆ ಮಾಡಲು ಸಿದ್ಧ ಎಂದಿದ್ದಾರೆ. 

Follow Us:
Download App:
  • android
  • ios