Asianet Suvarna News Asianet Suvarna News

Omicron Panic: ಶಾಲೆಗಳನ್ನು ಮತ್ತೆ ಮುಚ್ಚಲು ಪೋಷಕರ ಒತ್ತಾಯ?

  • ಒಮಿಕ್ರಾನ್‌ ಪ್ರಕರಣ ಹೆಚ್ಚಳದ ಭೀತಿ
  • ಶಾಲೆಗಳನ್ನು ಮುಚ್ಚಲು ಪೋಷಕರ ಒತ್ತಾಯ
  • ದೇಶದಲ್ಲಿ 300 ರ ಗಡಿ ದಾಟಿದ ಒಮಿಕ್ರಾನ್
Parents want schools shut as Omicron surges Nation akb
Author
Bangalore, First Published Dec 24, 2021, 2:31 PM IST

ನವದೆಹಲಿ: ದೆಹಲಿ (Delhi), ಮಹಾರಾಷ್ಟ್ರ(Maharashtra), ತಮಿಳುನಾಡು(Tamil Nadu) ಮತ್ತು ತೆಲಂಗಾಣದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಿದ್ದು, ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ 300 ರ ಗಡಿ ದಾಟಿವೆ. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳ ಸಂರಕ್ಷಣೆ ಬಗ್ಗೆ ಚಿಂತೆಗೀಡಾಗಿರುವ ಪೋಷಕರು ಶಾಲೆಗಳನ್ನು  ಮುಚ್ಚಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಕೋವಿಡ್-19 ಒಮಿಕ್ರಾನ್ ರೂಪಾಂತರಿ ಪ್ರಕರಣಗಳು ಇಂದು ಬೆಳಗ್ಗಿನ ವೇಳೆಗೆ 350 ರ ಗಡಿ ದಾಟಿದೆ. ನೋಡುವುದಕ್ಕೆ ಈ ಸಂಖ್ಯೆಯು ಚಿಕ್ಕದಾಗಿದೆ ಎಂದು ಜನ ಭಾವಿಸಬಹುದು, ಆದರೆ ಪರಿಸ್ಥಿತಿ ಹಾಗಿಲ್ಲ ಈ ರೂಪಾಂತರಿಯೂ ವೇಗವಾಗಿ ಹರಡುವುದರಿಂದ ಇದರ ಸಂಖ್ಯೆ ಶೀಘ್ರದಲ್ಲೇ ಹೆಚ್ಚಳವಾಗುವ ಸಾಧ್ಯತೆ ಇದೆ.  ಹೀಗಾಗಿ ಕೆಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ.  ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಲಸಿಕೆ ಹಾಕದ ಕಾರಣ ಎಲ್ಲರ ಕಣ್ಣುಗಳು ಈಗ ಒಟ್ಟಾರೆ ಪ್ರಕರಣಗಳ ಸಂಖ್ಯೆ ಹಾಗೂ ಶಾಲೆಗಳ ಮೇಲೆ ಇವೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಾಗಿದ್ದು,  ಪೋಷಕರು ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ನಿರೀಕ್ಷೆಯಲ್ಲಿದ್ದಾರೆ.

Omicron Threat: ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ನಾಗೇಶ್‌

ಭಾರತದಾದ್ಯಂತ ಸುಮಾರು 21 ತಿಂಗಳ ಸುದೀರ್ಘ ಅಂತರದ ನಂತರ ಕೆಲವು ಕಡೆಗಳಲ್ಲಿ ಮತ್ತೆ ತೆರೆಯಲು ಪ್ರಾರಂಭಿಸಿದ್ದವು. ಹಂತ ಹಂತವಾಗಿ ಶಾಲೆ ಪುನರಾರಂಭದ ಯೋಜನೆಯನ್ನು ಕೆಲವು ರಾಜ್ಯಗಳು ಅನುಸರಿಸಿದರೆ, ಮತ್ತೆ ಕೆಲವೆಡೆ ಎಲ್ಲಾ ತರಗತಿಗಳಿಗೆ ಒಮ್ಮೆಗೆ ಶಾಲೆಗಳನ್ನು ಮತ್ತೆ ತೆರೆದಿದ್ದವು. ಇದಕ್ಕೂ ಮೊದಲು ಆನ್‌ಲೈನ್‌ ಕ್ಲಾಸ್‌ಗಳಿಂದಾಗಿ ಶಾಲೆಯಲ್ಲಿದ್ದಂತಹ ಕಲಿಕೆಯು ಗುಣಮಟ್ಟ ಕಡಿಮೆ ಆದುದರಿಂದ ಬೇಸತ್ತ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಗಳು ಪುನರಾರಂಭಗೊಂಡಾಗ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು. 

ಆದಾಗ್ಯೂ, ಈ  ಹೊಸ ಕೋವಿಡ್‌ ರೂಪಾಂತರಿ ಓಮಿಕ್ರಾನ್ (Omicron) ಹೆಚ್ಚು ಹರಡಲು ಆರಂಭಿಸಿದೆ ಎಂಬುದರ ಕುರಿತು ವರದಿಗಳು ಬರಲಾರಂಭಿಸಿದವು. ರೂಪಾಂತರದ ಈ ಒಂದು  ಪರಿಣಾಮವು ಪೋಷಕರು ಸೇರಿದಂತೆ ಹೆಚ್ಚಿನ ಜನರನ್ನು ಚಿಂತೆಗೀಡು ಮಾಡಿದೆ.  ಅದರ ನಡುವೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ ಇನ್ನೂ ಲಸಿಕೆ ಹಾಕಿಲ್ಲ ಎಂಬ ಅಂಶವೂ ಕೂಡ ಈ ಆತಂಕವನ್ನು ಹೆಚ್ಚಿಸಿದೆ. ಲಸಿಕೆ ಹಾಕದೇ ಇರುವುದು ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯವನ್ನು ಉಂಟು ಮಾಡುತ್ತದೆ, ವಿಶೇಷವಾಗಿ ಓಮಿಕ್ರಾನ್ ಲಕ್ಷಣಗಳು, ಪರಿಣಾಮಗಳ ಬಗ್ಗೆ ಸ್ವಲ್ಪ ತಿಳಿದಿರುವ. ಪಾಲಕರು ಈಗ ತಮ್ಮ ಕಳವಳವನ್ನು ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ ಮತ್ತು ಶಾಲೆಗಳನ್ನು ಮುಚ್ಚಬೇಕು ಎಂದು ಒತ್ತಾಯಿಸುತ್ತಿದ್ದಾರೆ. 

Omicron Threat: ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್

ದೆಹಲಿ, ಮುಂಬೈ, ತೆಲಂಗಾಣ, ತಮಿಳುನಾಡು ಮುಂತಾದ ಸ್ಥಳಗಳಲ್ಲಿ ಶಾಲೆಗಳನ್ನು ಮುಚ್ಚಲು ಹೆಚ್ಚಿನ ಬೇಡಿಕೆಗಳು ಕೇಳಿ ಬರುತ್ತಿವೆ, ಅಲ್ಲಿ ಒಮಿಕ್ರಾನ್ ಪ್ರಕರಣಗಳು ಜಾಸ್ತಿ ಇವೆ.  ಪ್ರತಿದಿನ ಹೊಸ ಸೋಂಕುಗಳು ವರದಿಯಾಗುತ್ತಿವೆ. ಮಾಧ್ಯಮವೊಂದರ ವರದಿಯ ಪ್ರಕಾರ, ಮಹಾರಾಷ್ಟ್ರವು 88 ಒಮಿಕ್ರಾನ್ ಸೋಂಕು ಪ್ರಕರಣಗಳನ್ನು ಹೊಂದಿದ್ದು, ಎಲ್ಲಕ್ಕಿಂತ ಮುಂಚೂಣಿಯಲ್ಲಿದೆ, ದೆಹಲಿಯಲ್ಲಿ 67 ಪ್ರಕರಣಗಳಿವೆ. ಹೀಗಾಗಿ ಭಾರತದಲ್ಲಿರುವ ಒಮಿಕ್ರಾನ್ ಪ್ರಕರಣ ಸಂಖ್ಯೆ 350 ರ ಗಡಿ ದಾಡಿದೆ. ತಮಿಳುನಾಡು  33 ಹೊಸ ಪ್ರಕರಣಗಳನ್ನು ಹೊಂದಿದ್ದರೆ ತೆಲಂಗಾಣ ಸುಮಾರು 14 ಪ್ರಕರಣಗಳನ್ನು ಹೊಂದಿದೆ. 

ದೆಹಲಿಯ ದೆಹಲಿ ಪಬ್ಲಿಕ್‌ ಸ್ಕೂಲ್‌(DPS)ಗೆ ಮಕ್ಕಳನ್ನು ಕಳುಹಿಸುವ ಪೋಷಕರಾದ ಆನಂದ್ ಕುಮಾರ್ (Anand Kumar), ಮಾಧ್ಯಮಗಳೊಂದಿಗೆ ಮಾತನಾಡಿ, ದೇಶವನ್ನು ಮೂರನೇ ಅಲೆ ಅಪ್ಪಳಿಸುವ ವರದಿಗಳಿವೆ, ನಾವು ಅದಕ್ಕೆ ಸಿದ್ಧರಾಗಿಲ್ಲ, ನಾನು ನನ್ನ ಮಗುವನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದೇನೆ, ಇದು ತುಂಬಾ ಅಪಾಯಕಾರಿ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರೇ ಇನ್ನೂ ಅಪಾಯದಲ್ಲಿದ್ದಾರೆ ಹಾಗಿದ್ದಾಗ ನಮ್ಮ ಮಕ್ಕಳನ್ನು ಊಹಿಸಿ ಎಂದ ಅವರು ಸರ್ಕಾರವು ಶಾಲೆಗಳನ್ನು ಶೀಘ್ರವಾಗಿ ಮುಚ್ಚಬೇಕು ಎಂದರು. 

Follow Us:
Download App:
  • android
  • ios