ಶ್ರೀನಗರ[ಫೆ.27]: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ಪಾಕ್ ಗೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿ ಮರಳಿತ್ತು. ಇದಾದ ಬಳಿಕ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇವೆಲ್ಲದರ ಬೆನ್ನಲ್ಲೇ ಪಾಕಿಸ್ತಾನದ ಮೂರು ಯುದ್ಧ ವಿಮಾಗಳು ಭಾರತದ ಗಡಿಯನ್ನು ಪ್ರವೇಶಿಸಿದ್ದು, ಭಾರತೀಯ ವಾಯುಸೇನೆಯು ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ.

ಸದ್ಯ ಗಡಿ ಪ್ರದೇಶದಲ್ಲಿ ಯುದ್ಧ ವಾತಾವರಣ ನಿರ್ಮಾಣವಾಗಿದ್ದು, ಶ್ರೀನಗರ, ಜಮ್ಮು, ಲೇಹ್ ಸೇರಿದಂತೆ ಹಲವಾರು ಪ್ರದೆಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಭದ್ರತಾ ದೃಷ್ಟಿಯಿಂದ ಇಲ್ಲಿನ ಎಲ್ಲಾ ವಾಣಿಜ್ಯ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಶ್ರೀನಗರ, ಜಮ್ಮು, ಲೇಹ್ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

ಪಾಕಿಸ್ತಾನದಿಂದ ಬಾಂಬ್ ದಾಳಿ:

ಈ ಎಲ್ಲಾ ಬೆಳವಣಿಗೆಗಳ ನಡುವೆ ತನ್ನ ದುರ್ಬುದ್ಧಿ ಬಿಡದ ಪಾಕಿಸ್ತಾನ, ಗಡಿಯಲ್ಲಿ ಬಾಂಬ್ ದಾಳಿ ನಡೆಸಿವೆ. ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಾರತದ ಉನ್ನತ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ರಜೆಯ ಮೇಲೆ ತೆರಳಿದ್ದ ಸೈನಿಕರನ್ನು ಮರಳಿ ಬರುವಂತೆ ಸೂಚಿಸಲಾಗಿದೆ.