Asianet Suvarna News Asianet Suvarna News

LOC ಬಳಿ ಅಕ್ರಮವಾಗಿ ಒಳನುಗ್ಗಲು ಯತ್ನಿಸಿದ ಪಾಕ್‌ ಯೋಧನ ಹತ್ಯೆ

ಭಾರತದ ಗಡಿಯೊಳಗೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕಿಸ್ತಾನ ಸೇನೆಯ ಯೋಧನೊಬ್ಬನನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.ಈ ಘಟನೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕ್‌ ಕುಮ್ಮಕ್ಕು ಮುಂದುವರೆದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 

Pakistan Soldier Killed On Line Of Control gvd
Author
Bangalore, First Published Jan 3, 2022, 8:45 AM IST
  • Facebook
  • Twitter
  • Whatsapp

ಶ್ರೀನಗರ (ಜ.03): ಭಾರತದ ಗಡಿಯೊಳಗೆ (Line of Control) ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕಿಸ್ತಾನ ಸೇನೆಯ ಯೋಧನೊಬ್ಬನನ್ನು (Pakistan Soldier) ಭಾರತೀಯ ಸೇನೆ (Indian Army) ಶನಿವಾರ ಹೊಡೆದುರುಳಿಸಿದೆ.ಈ ಘಟನೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕ್‌ ಕುಮ್ಮಕ್ಕು ಮುಂದುವರೆದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜೊತೆಗೆ, ಗಡಿಯಲ್ಲಿ ಕದನ ವಿರಾಮ ಜಾರಿ ಕುರಿತು ಕಳೆದ ಫೆಬ್ರವರಿಯಲ್ಲಿ ಉಭಯ ದೇಶಗಳ ಮಾಡಿಕೊಂಡ ಒಪ್ಪಂದದ ಉಲ್ಲಂಘನೆ ಎಂದು ಭಾರತೀಯ ಸೇನೆ ಹೇಳಿದೆ.

ಈ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿರುವ ಮೇ.ಜ. ಎ.ಎಸ್‌.ಪೆಂಡಾರ್ಕರ್‌ (Major General AS Pendharkar), ‘ಶನಿವಾರ ಕುಪ್ವಾರಾ ಜಿಲ್ಲೆಯ ಕೇರನ್‌ ಸೆಕ್ಟರ್‌ನಲ್ಲಿ ಬರುವ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮ ಒಳನುಸುಳುವಿಕೆ ಯತ್ನವನ್ನು ತಡೆಯಲಾಗಿತ್ತು. ಜೊತೆಗೆ ಪ್ರವೇಶಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹತ್ಯೆಗೈಯಲಾಗಿತ್ತು. ಪರಿಶೀಲನೆ ವೇಳೆ ಮೃತ ವ್ಯಕ್ತಿ, ಪಾಕಿಸ್ತಾನ ಸೇನೆಯ ಬಾರ್ಡರ್‌ ಆ್ಯಕ್ಷನ್‌ ಟೀಂ (ಬಿಎಟಿ)ಗೆ ಸೇರಿದ ಮೊಹಮ್ಮದ್‌ ಶಬೀರ್‌ ಮಲಿಕ್‌ (Mohammad Shabir Malik)’ ಎಂದು ಖಚಿತಪಟ್ಟಿದೆ.

ನಿಗೂಢ ಸ್ಫೋಟಕ್ಕೆ ಪ್ರಾಣ ತ್ಯಾಗ ಮಾಡಿದ ಇಬ್ಬರು ಯೋಧರು

‘ಮೃತ ಯೋಧನ ಬಳಿಯಿಂದ ಪಾಕ್‌ ಸೇನೆಯ ಗುರುತಿನ ಚೀಟಿ, ಸೇನಾ ಸಮವಸ್ತ್ರ, ಕೋವಿಡ್‌ ಲಸಿಕೆ ವಿತರಣೆ ಕುರಿತು ಪಾಕ್‌ ಸರ್ಕಾರ ನೀಡಿದ ಪ್ರಮಾಣ ಪತ್ರ ಸಿಕ್ಕಿದೆ. ಜೊತೆಗೆ ಘಟನಾ ಸ್ಥಳದಿಂದ 1 ಎಕೆ ರೈಫಲ್‌, ಮದ್ದು ಗುಂಡು, 7 ಗ್ರೆನೇಡ್‌ ವಶಪಡಿಸಿಕೊಳ್ಳಲಾಗಿದೆ. ಮೃತನ ಗುರುತು ಖಚಿತಪಟ್ಟ ಬಳಿಕ ಪಾಕ್‌ ಸೇನೆಯೊಂದಿಗೆ ಹಾಟ್‌ಲೈನ್‌ ಸಂಪರ್ಕ ಕಲ್ಪಿಸಿ, ಮೃತನ ದೇಹ ಹಿಂದಕ್ಕೆ ಪಡೆಯುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಉಗ್ರನ ಹತ್ಯೆಗೈದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ!: ಹೊಸ ವರ್ಷ ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಚೀನಾ ಸೇನೆಗೆ ಗಡಿಯಲ್ಲಿ ಸಿಹಿ ಹಂಚಿ ಶುಭಾಶಯ ಕೋರಿತ್ತು. ಆದರೆ ಅದೇ ದಿನ  ಭಾರತ ನುಸುಳಲು ಯತ್ನಿಸಿದ ಪಾಕಿಸ್ತಾನ ಸೇನೆ ಪ್ರಾಯೋಜಕತ್ವದ ಉಗ್ರನನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಬಳಿಕ ಪಾಕಿಸ್ತಾನ ಸೇನೆಗೆ ಕರೆ ಮಾಹಿತಿ ನಿಮ್ಮ ಪ್ರಜೆ, ಉಗ್ರನ ಹತ್ಯೆ ಮಾಡಿದ್ದೇವೆ, ಶವ ತೆಗೆದುಕೊಂಡು ಹೋಗಿ ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಹೊಸ ವರ್ಷದಲ್ಲಿ ನಮ್ಮ ತಂಟೆಗೆ ಬಂದರೆ ಪ್ರತ್ಯುತ್ತರ ನೀಡುವ ಶೈಲಿಯೇ ಬೇರೆ ಎಂದು ಭಾರತೀಯ ಸೇನೆ ಉತ್ತರ ನೀಡಿದೆ.

ಹೊಸ ವರ್ಷಕ್ಕೆ ಪಾಕಿಸ್ತಾನ, ಚೀನಾ ಸೇನೆಗೆ ಸಿಹಿ ಹಂಚಿ ಮಹತ್ವದ ಸಂದೇಶ ಸಾರಿದ ಭಾರತೀಯ ಸೇನೆ!

ಹೊಸ ವರ್ಷದಲ್ಲಿ ಪಾಕಿಸ್ತಾನ ಸೇನೆ ಗಡಿ ನಿಯಮ ಉಲ್ಲಂಘಿಸಿದೆ. ಪಾಕಿಸ್ತಾನ ಸೇನೆ ಪ್ರಾಯೋಜಕತ್ವದ ಪಾಕ್ ಉಗ್ರ ಕುಪ್ವಾರದ ಕೆರಾನ್ ಸೆಕ್ಟರ್‌ ಬಳಿ ಭಾರತದೊಳಗೆ ನುಸುಳಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತಗೊಂಡ ಬಾರ್ಡರ್ ಆ್ಯಕ್ಷನ್ ಟೀಮ್ ಉಗ್ರನ ಹತ್ಯೆಗೈದಿದೆ. ಹತ್ಯೆಯಾದ ಪಾಕ್ ಉಗ್ರ ಮೊಹಮ್ಮದ್ ಶಬ್ಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಈತನ ಪಾಕಿಸ್ತಾನಿ ಪ್ರಜೆ. ವಿಚಾರಣೆಯಿಂದ ಹತನಾದ ಉಗ್ರ ಪಾಕಿಸ್ತಾನಿ ಪ್ರಜೆ ಎಂದು ಸಾಬೀತಾಗಿದೆ. ಮರುಕ್ಷಣದಲ್ಲೇ ಪಾಕಿಸ್ತಾನ ಸೇನೆಗೆ ಹಾಟ್‌ಲೈನ್ ಕಮ್ಯೂನಿಕೇಶನ್ ಮೂಲಕ ಭಾರತೀಯ ಸೇನೆಗೆ ಮಾಹಿತಿ ನೀಡಿದೆ. ನಿಮ್ಮ ಉಗ್ರನನ್ನು ಹತ್ಯೆ ಮಾಡಲಾಗಿದೆ. ಬಂದು ಶವ ತೆಗೆದುಕೊಂಡು ಹೋಗಿ ಎಂದು ಖಡಕ್ ವಾರ್ನಿಂಗ್ ನೀಡಿದೆ. ಇಷ್ಟೇ ಅಲ್ಲ ಗಡಿಯಲ್ಲಿ ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಭಾರತ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದೆ.

Follow Us:
Download App:
  • android
  • ios