ಜೈಪುರ(ಅ.25): ರಾಜಸ್ಥಾನದ ಬಾರ್ಮೇರ್‌ನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಪರ ಗೂಢಚಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಶನಿವಾರ ಬಂಧಿಸಲಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ, ಪಾಕ್‌ ಗುಪ್ತಚರನಾಗಿ ಕಾರ್ಯನಿರ್ವಹಿಸುತ್ತ ಯುದ್ಧವಿಮಾನಗಳ ರಹಸ್ಯ ಮಾಹಿತಿ ಹಸ್ತಾಂತರಿಸುತ್ತಿದ್ದ ಎಚ್‌ಎಎಲ್‌ ಉದ್ಯೋಗಿ ದೀಪಕ್‌ ಶಿರಸಾಟ್‌ ಎಂಬಾತನನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೇ ರೀತಿಯ ಬಂಧನ ಬಾರ್ಮೇರ್‌ನಲ್ಲಿ ಆಗಿದೆ.

ಬಂಧಿತ ವ್ಯಕ್ತಿಯನ್ನು ಜೈಪುರಕ್ಕೆ ಹೆಚ್ಚಿನ ವಿಚಾರಣೆಗೆ ಕರೆತರಲಾಗಿದೆ ಎಂದು ರಾಜಸ್ಥಾನ ಗುಪ್ತದಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಹೇಳಿದ್ದಾರೆ. ಬಾರ್ಮೇರ್‌ ಜಿಲ್ಲೆಯು ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಜಿಲ್ಲೆಯಾಗಿದೆ.