ನವದೆಹಲಿ(ಏ.07): ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಜೆನೆಕಾ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಯ 2 ಡೋಸ್‌ಗಳ ನಡುವಿನ ಅಂತರ 2-3 ತಿಂಗಳಷ್ಟಿದ್ದರೆ, ಲಸಿಕೆ ಶೇ.90ರಷ್ಟು ಪರಿಣಾಮಕಾರಿಯಾಗಿರುತ್ತದೆ.

ಇದು ವಿವಿಧ ದೇಶಗಳಲ್ಲಿ ಕೈಗೊಂಡ ಅಧ್ಯಯನದಿಂದ ಸಾಬೀತಾಗಿದೆ ಎಂದು ಭಾರತದಲ್ಲಿ ಕೋವಿಶೀಲ್ಡ್‌ ಹೆಸರಿನಲ್ಲಿ ಅದೇ ಲಸಿಕೆ ಅಭಿವೃದ್ಧಿಪಡಿಸಿರುವ ಸೀರಂ ಇನ್‌ಸ್ಟಿಟ್ಯೂಟ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಸಿಇಒ ಅದಾರ್‌ ಪೂನಾವಾಲಾ, 2 ಡೋಸ್‌ ನಡುವಿನ ಅಂತರ 1 ತಿಂಗಳಾಗಿದ್ದರೆ ಲಸಿಕೆ ಶೇ.70ರಷ್ಟುಪರಿಣಾಮಕಾರಿಯಾಗಿರುತ್ತದೆ. ಅದೇ ಅಂತರ 2-3 ತಿಂಗಳಿಗೆ ವಿಸ್ತರಣೆಯಾದರೆ ಲಸಿಕೆಯು ಶೇ.90ರಷ್ಟುಪರಿಣಾಮಕಾರಿಯಾಗಿರುತ್ತದೆ.

ಇದು ಕೊರೋನಾ ಲಸಿಕೆ ವಿಯಷದಲ್ಲಿ ಮಾತ್ರವಲ್ಲ, ಇತರೆ ಲಸಿಕೆಗಳ ವಿಷಯದಲ್ಲೂ ಇದೇ ರೀತಿಯಲ್ಲಿ ಲಸಿಕೆ ಸಾಮರ್ಥ್ಯದಲ್ಲಿ ಬದಲಾವಣೆ ಕಾಣಬಹುದು ಎಂದು ಹೇಳಿದ್ದಾರೆ