ವಾಪಾಸ್ ನೀಡುವ ಭರವಸೆಯೊಂದಿಗೆ ಅತ್ತೆ-ಮಾವನ ಬಳಿ ಹಣ ಪಡೆಯುವುದು ವರದಕ್ಷಿಣೆಯಲ್ಲ!
ಉದ್ಯೋಗವನ್ನು ಸುರಕ್ಷಿತಗೊಳಿಸಲು ಮರುಪಾವತಿ ಮಾಡುವ ಭರವಸೆಯೊಂದಿಗೆ ಅತ್ತೆ-ಮಾವನ ಬಳಿ ಹಣವನ್ನು ಕೇಳುವುದು ವರದಕ್ಷಿಣೆಯಲ್ಲ ಎಂದು ಒರಿಸ್ಸಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಭುವನೇಶ್ವರ (ನ.16): ತನ್ನ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು, ಮರುಪಾವತಿ ಮಾಡುವ ಭರವಸೆಯೊಂದಿಗೆ ಅತ್ತೆ-ಮಾವನ ಬಳಿಯಿಂದ ಹಣಕಾಸು ಬೆಂಬಲ ಪಡೆಯುವುದು ವರದಕ್ಷಿಣೆ ಎನಿಸಿಕೊಳ್ಳುವುದಿಲ್ಲ ಎಂದು ಒರಿಸ್ಸಾ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಬಿ (ವರದಕ್ಷಿಣೆ ಸಾವು) ಅಡಿಯಲ್ಲಿ ಪತಿಯ ಶಿಕ್ಷೆಯನ್ನು ಬದಿಗಿರಿಸಿದ, ನ್ಯಾಯಮೂರ್ತಿ ಎಸ್‌ಕೆ ಸಾಹೂ ಅವರ ಪೀಠವು ಮೃತ ಮಹಿಳೆಯ ಸಾವನ್ನು ವರದಕ್ಷಿಣೆ ಬೇಡಿಕೆಗಳೊಂದಿಗೆ ಜೋಡಿಸುವ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿದೆ. ಆದರೆ, ನ್ಯಾಯಾಲಯವು IPC ಯ ಸೆಕ್ಷನ್ 498-A ಅಡಿಯಲ್ಲಿ ಪತಿಗೆ ನೀಡಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ (ಗಂಡ ಅಥವಾ ಗಂಡನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು ಅಪರಾಧಕ್ಕಾಗಿ ಅವನಿಗೆ ನೀಡಲಾದ ಶಿಕ್ಷೆಯನ್ನು ದೃಢಪಡಿಸಿತು.
ಪಕ್ರರಣದ ವಿವರಣೆ ನೀಡುವುದಾದರೆ, ದೂರುದಾರನ ವ್ಯಕ್ತಿಯ ಪುತ್ರಿ, ಆರೋಪಿಯನ್ನು ಮದುವೆಯಾಗಿದ್ದರು. ದಿನದಿಂದ ದಿನಕ್ಕೆ ಮನೆಯಲ್ಲಿ ಆಗುತ್ತಿದ್ದ ಜಗಳದ ಕಾರಣ, ಮಹಿಳೆ ಹಾಗೂ ಆರೋಪಿ ಕಳೆದ ವರ್ಷದ ಹಿಂದೆ ನಾಲ್ಕು ತಿಂಗಳ ಕಾಲ ಬೇರೆ ಬೇರೆ ವಾಸ ಮಾಡಿದ್ದರು. ಅದಾದ ಬಳಿಕ ಒಂದಾಗಿದ್ದರು. ಹೀಗಿರುವಾಗ ಒಮ್ಮೆ ದೂರುದಾರರಿಗೆ ಮಗಳ ಸಾವಿನ ಸುದ್ದಿ ಬಂದು ತಲುಪಿದೆ. ಮಗಳು ಸಾವು ಕಂಡ ಸ್ಥಳಕ್ಕೆ ಹೋದಾಗ, ಅಳಿಯ ಮಗಳ ನಿರ್ಜೀವ ದೇಹದ ಬಳಿ ಕುಳಿತಿದ್ದ. ಈ ವೇಳೇ ಆತ, ನಿಮ್ಮ ಪುತ್ರಿ ವಿಷ ಕುಡಿದ್ದಾಳೆ ಎಂದು ತಿಳಿಸಿದ್ದ. ಆದರೆ, ದೂರುದಾರರು ಮಾತ್ರ, ವರದಕ್ಷಿಣೆಗಾಗಿ ಮಗಳಿಗೆ ಪೀಡಿಸುತ್ತಿದ್ದ ಕಾರಣಕ್ಕೆ ತನ್ನ ಮಗಳು ಸಾವು ಕಂಡಿದ್ದಾಳೆ ಎಂದು ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು ಐಪಿಸಿಯ 498-A ಮತ್ತು 304-B ಸೆಕ್ಷನ್‌ಗಳ ಅಡಿಯಲ್ಲಿ ಮೇಲ್ಮನವಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿದರೆ, ಸೆಕ್ಷನ್ 302 ರ ಅಡಿಯಲ್ಲಿ ಅವರನ್ನು ಖುಲಾಸೆಗೊಳಿಸಿತು.
ಆದರೆ 304-ಬಿ ಕಲಂ ಅಡಿಯಲ್ಲಿ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಪತಿಯ ವಿರುದ್ಧ ಆರೋಪಿಸಿದಂತೆ ಉದ್ಯೋಗಕ್ಕಾಗಿ ಹಣದ ಬೇಡಿಕೆಯು ವರದಕ್ಷಿಣೆ ನಿಷೇಧ ಕಾಯಿದೆಯ ಪ್ರಕಾರ 'ವರದಕ್ಷಿಣೆ' ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.
'ಈ ಪ್ರಕರಣದಲ್ಲಿ, ಉದ್ಯೋಗವನ್ನು ಪಡೆಯಲು ಹಣದ ವ್ಯವಸ್ಥೆ ಮಾಡುವ ವಿನಂತಿಯು ಮದುವೆಯ ಸಮಯದಲ್ಲಿ ಇರಲಿಲ್ಲ. ಅಂತಹ ಮೊತ್ತವನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಲು ಮೇಲ್ಮನವಿದಾರರಿಂದ ಭರವಸೆ ನೀಡಲಾಗಿತ್ತು. ಹಾಗಾಗಿ ಮರುಪಾವತಿ ನೀಡುವ ಭರವಸೆಯೊಂದಿಗೆ ಅತ್ತೆ ಮಾವನ ಬಳಿ ಹಣವನ್ನು ಪಡೆದುಕೊಳ್ಳುವುದು ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 2 ರ ಪ್ರಕಾರ 'ವರದಕ್ಷಿಣೆ' ವ್ಯಾಖ್ಯಾನದೊಳಗೆ ಬರಲು ಸಾಧ್ಯವಿಲ್ಲ," ಎಂದು ಏಕಸದಸ್ಯ ಪೀಠ ಹೇಳಿದೆ.
ಅಲುವಾದಲ್ಲಿ 5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ ಕೇಸ್: ಅಪರಾಧಿಗೆ ಗಲ್ಲು ಶಿಕ್ಷೆ ನೀಡಿದ ಕೋರ್ಟ್
ವರದಕ್ಷಿಣೆ ಬೇಡಿಕೆ ಮತ್ತು ಸಾವಿಗೆ ಸಂಬಂಧಿಸಿದಂತೆ ಕ್ರೌರ್ಯದ ಸಂಗತಿಗಳ ನಡುವೆ ಸತ್ಯಾಸತ್ಯತೆಗಳಿರಬೇಕು ಎಂದು ನ್ಯಾಯಾಲಯವು ಒತ್ತಿಹೇಳಿತು. "ಸಮಯ ವಿಳಂಬವು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರಬಹುದು. ಕ್ರೌರ್ಯದ ಆಪಾದಿತ ಘಟನೆಯು ಸಮಯಕ್ಕೆ ದೂರವಾಗಿದ್ದರೆ ಮತ್ತು ಸಂಬಂಧಿತ ಮಹಿಳೆಯ ಮಾನಸಿಕ ಸಮತೋಲನವನ್ನು ತೊಂದರೆಗೊಳಿಸದಿರುವಷ್ಟು ಹಳೆಯದಾಗಿದ್ದರೆ, ಅದು ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ನ್ಯಾಯಾಲಯವು ಗಮನಿಸಿತು.
ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದ..!
ಹಾಗಾಗಿ ಮದುವೆಯ ಸಮಯದಲ್ಲಿ ವರದಕ್ಷಿಣಿಯೆ ಬೇಡಿಕೆ ಇರಿಸಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಮೂಲವಾಗಿ ಕಾಣುತ್ತಿಲ್ಲ. ಮದುವೆಯಾದ ಏಳು ವರ್ಷಗಳೊಳಗೆ ಮೃತರು ಸಾವನ್ನಪ್ಪಿದ್ದರೂ, ಸೆಕ್ಷನ್ 304-ಬಿ ಅಡಿಯಲ್ಲಿ ಅಪರಾಧದ ಎಲ್ಲಾ ಅಂಶಗಳು ವರದಕ್ಷಿಣೆ ಕೇಸ್ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.