ಕೊರೋನಾದಿಂದ ಉದ್ಯಮ ಕೈಹಿಡಿಯಲ್ಲ ಎಂದು ಕೈಕಟ್ಟಿ ಕುಳಿತವರಿಗೆ ಸ್ಲಂ ನಿವಾಸಿ ಪ್ಯಾರೆ ಖಾನ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಿತ್ತಳೆ ಮಾರುತ್ತಿದ್ದ ಸ್ಲಂ ನಿವಾಸಿ ಇದೀಗ 400 ಕೋಟಿ ರೂಪಾಯಿ ಕಂಪನಿ ಮಾಲೀಕರಾಗಿ, ಸಮಾಜ ಸೇವೆಯಲ್ಲೂ ತೊಡಗಿದ್ದಾರೆ.
ನಾಗ್ಪುರ(ಏ.26) ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹಲವು ಉದ್ಯಮಗಳು ನೆಲಕಚ್ಚಿದೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಕೆಲವರು ಇದೇ ಕೊರೋನಾ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಂಡು ಕೋಟ್ಯಾಧಿಪತಿಯಾದ ಕೆಲ ಉದಾಹರಣೆಗಳಿವೆ. ಇದೀಗ ಸ್ಲಂ ನಿವಾಸಿಯೊಬ್ಬ ಕೋಟಿ ರೂಪಾಯಿ ಕಂಪನಿ ಒಡೆಯನಾಗಿದ್ದು ಮಾತ್ರವಲ್ಲ, ಕೊರೋನಾ ಕಾರಣ ಸುಮಾರು 85 ಲಕ್ಷ ರೂಪಾಯಿ ಮೊತ್ತದ ಸಲಕರಣೆಯನ್ನು ಸರ್ಕಾರಕ್ಕೆ ಉಚಿತವಾಗಿ ನೀಡಿದ್ದಾರೆ.
ಜೀವ ಉಳಿಸುವ ಸಂಜೀವಿನಿಗಾಗಿ ಕೇಂದ್ರದ 'ಆಪರೇಷನ್ ಆಕ್ಸಿಜನ್'!.
ನಾಗ್ಪುರದ ತಾಜ್‌ಭಾಗ್ ಸ್ಲಂ ನಿವಾಸಿಯಾಗಿರುವ ಪ್ಯಾರೇ ಖಾನ್ 1995ರಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ನಾಗ್ಪುರ ರೈಲು ನಿಲ್ದಾಣದ ಬಳಿಕ ಹಣ್ಣು ವ್ಯಾಪಾರವೇ ಜೀವನಾಧರಾವಾಗಿತ್ತು. ಜೀವನಕ್ಕೆ ಸಾಧಿಸಬೇಕು ಅನ್ನೋ ಚಲದಲ್ಲಿ ಆಕ್ಸಿಜನ್ ಸಿಲಿಂಡರ್ ಸಾಗಿಸೋ ಟ್ರಾನ್ಸ್‌ಪೋರ್ಟ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ ಪ್ಯಾರೆ ಖಾನೆ ಬಳಿಕ ಹಿಂತಿರುಗಿ ನೋಡಲೇ ಇಲ್ಲ.
ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷಿಸಿದ್ದ ಸರ್ಕಾರ?
ಇದೀಗ ಆಕ್ಸಿಜನ್ ಕೊರತೆ ಎದುರಾದಾಗ ನಾಗ್ಪುರದ ವಿವಿದ ಸರ್ಕಾರಿ ಆಸ್ಪತ್ರೆಗಳಿಗೆ 400 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಡನ್ ನೀಡಿದ್ದಾರೆ. ಇದರ ಒಟ್ಟು ಮೊತ್ತ ಸುಮಾರು 85 ಲಕ್ಷ ರೂಪಾಯಿ. ಇಷ್ಟೇ ಅಲ್ಲ ರಂಜಾನ್ ತಿಂಗಳಲ್ಲಿ ಸಣ್ಣ ಸಹಾಯ ಮಾಡಿದ್ದೇನೆ. ಹೀಗಾಗಿ ಈ ಮೊತ್ತವನ್ನು ನಾನು ಸರ್ಕಾರದಿಂದ ಸ್ವೀಕರಿಸಿಲ್ಲ ಎಂದು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ಏಮ್ಸ್ ಆಸ್ರತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳಿಗೆ ನಿರಂತರ ಆಕ್ಸಿಜನ್ ಸರಬರಾಜು ಮಾಡತ್ತಿರುವ ಪ್ಯಾರೇ ಖಾನ್ ಹಲವು ಜೀವನಗಳನ್ನು ಉಳಿಸಿದ್ದಾರೆ. ಖಾನ್ ಆಕ್ಸಿಜನ್ ಘಟಕ ಇದೀಗ ಕೋಟಿ ಕೋಟಿ ರೂಪಾಯಿ ಬೆಲೆಯ ದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ. ಕೊರೋನಾ ವಕ್ಕರಿಸಿದ ಬಳಿಕ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷದಿಂದ ದೇಶ ಹಾಗೂ ವಿದೇಶಗಳಿಗೆ ಹೆಚ್ಚಿನ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಖಾನ್ ಕಂಪನಿ 400 ಕೋಟಿಗೂ ಹೆಚ್ಚು ಬೆಲೆಬಾಳುತ್ತಿದೆ.
ಖಾನ್ ಬಳಿ 2,000 ಟ್ರಕ್ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಆಕ್ಸಿಜನ್ ಕೊರತೆ ಎದುರಾದ ಬಳಿಕ ವಿದೇಶಗಳಿಗೆ ಪೂರೈಕೆ ನಿಲ್ಲಿಸಲಾಗಿದೆ. ಬಾಂಗ್ಲಾದೇಶ, ಭೂತಾನ್ ಹಾಗೂ ನೇಪಾಳಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮನವಿಗೆ ಸ್ಪಂದಿಸಿದ ಪ್ಯಾರೇ ಖಾನ್ 360 ಆಕ್ಸಿಜನ್ ಸಿಲಿಂಡರ್ ನೀಡಿದ್ದಾರೆ.
