Asianet Suvarna News Asianet Suvarna News

ಕಲಿಯುಗ ಅಂತ್ಯದ ಸುಳಿವು ನೀಡುತ್ತಿದೆಯಾ ಶಿವನ ವಾಸಸ್ಥಾನ; ಕಾಣೆಯಾಗ್ತಿದೆ ಭಾರತದ 'ಓಂ' ಪರ್ವತ

ಶಿವನ ವಾಸಸ್ಥಾನ ಎಂದು ಹೇಳಲಾಗುವ  ಸ್ಥಳವೇ ಓಂ ಪರ್ವತ. ಇದು ಉತ್ತರಾಖಂಡ ರಾಜ್ಯದಲ್ಲಿದ್ದು, ಆದ್ರೆ ಈ ಬಾರಿ ಓಂ ಪರ್ವತ  ರಚನೆಯಾಗಿಲ್ಲ ಎಂದು ವರದಿಯಾಗಿದೆ.

OM Disappeared in om parvat at Uttarakhand hindus called this in chota kailasha mrq
Author
First Published Aug 25, 2024, 4:37 PM IST | Last Updated Aug 25, 2024, 4:36 PM IST

ನವದೆಹಲಿ: ಹಿಮಾಲಯಕ್ಕೂ ಮತ್ತು ಹಿಂದೂ ಧರ್ಮಕ್ಕೆ ಸನತಾನ ಕಾಲದಿಂದಲೂ ಲಿಂಕ್ ಇದೆ. ಋಷಿಮುನಿಗಳು ಕಠಿಣ ತಪಸ್ಸಿಗಾಗಿ ಹಿಮಾಲಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರಾಮಾಯಾಣ, ಮಹಾ ಭಾರತದಲ್ಲಿಯೂ ಹಿಮಾಲಯಗಳ ಬಗ್ಗೆ ಉಲ್ಲೇಖವಿದೆ. ಹಿಮಾಲಯಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿ ವಿಷಯಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಉದಾಹರಣೆಗೆ ಅಮರನಾಥ ಗುಹೆ ಮತ್ತು ಅಲ್ಲಿ ಉದ್ಭವವಾಗುವ ಹಿಮಲಿಂಗ ಹಿಂದೂಗಳ ಪುಣ್ಯಕ್ಷೇತ್ರವಾಗಿದೆ. ಹಿಮದಲ್ಲಿ ರಚನೆಯಾಗುವ ಶಿವಲಿಂಗ ದರ್ಶನಕ್ಕೆ ದುರ್ಗಮ ಮಾರ್ಗದಲ್ಲಿ ಪ್ರಯಾಣಿಸಿ ಇಲ್ಲಿಗೆ ಅಸಂಖ್ಯಾತ ಭಕ್ತರು ಬರುತ್ತಾರೆ. ಇದೇ ರೀತಿ ಉತ್ತರಾಖಂಡ್ ರಾಜ್ಯದಲ್ಲಿಯ  ಓಂ ಪರ್ವತ ಹಿಂದೂಗಳ ಪುಣ್ಯಕ್ಷೇತ್ರವಾಗಿದೆ. ಆದ್ರೆ ದಿನಗಳು ಕಳೆದಂತೆ ಓಂ ಪರ್ವತ ಕಾಣೆಯಾಗುತ್ತಿರೋದು ಭಕ್ತರ ಕಳವಳಕ್ಕೆ ಕಾರಣವಾಗಿದೆ. ಈ ಓಂ ಪರ್ವತ ಭಾರತ-ಚೀನಾ ಗಡಿಭಾಗದಲ್ಲಿದ್ದು, ಪರ್ವತದ ಮೇಲಿನ ಹಿಮ ಓಂ ಆಕಾರದಲ್ಲಿ ಕಾಣುತ್ತದೆ. 

ಪ್ರತಿಬಾರಿಯೂ ಓಂ ಕಾಣಿಸುತ್ತಿತ್ತು. ಆದ್ರೆ ಇದೇ ಮೊದಲ ಬಾರಿ ಓಂ ಕಾಣಿಸುತ್ತಿಲ್ಲ ಎಂದು ಇಲ್ಲಿನ ಜನರು ಹೇಳುತ್ತಾರೆ. ಗ್ಲೋಬಲ್ ವಾರ್ಮಿಂಗ್‌ನಿಂದಾಗಿ ಓಂ ಆಕೃತಿ ರಚನೆಯಾಗಿರಲ್ಲ. ವರ್ಷದಿಂದ ವರ್ಷಕ್ಕೆ ಹಮಾಮಾನದಲ್ಲಿ ಹಲವು ಬದಲಾವಣೆಗಳು ಕಂಡು ಬರುತ್ತಿರುತ್ತೇವೆ. ಈ ಕಾರಣದಿಂದ ಓಂ ಆಕೃತಿ ರಚನೆಯಾಗಿಲ್ಲ ಎಂದು  ವಿಜ್ಞಾನಿಗಳು ಹೇಳುತ್ತಾರೆ. ಇದರ ಜೊತೆಗೆ ಧಾರ್ಮಿಕ ಕ್ಷೇತ್ರವೀಗ ಪ್ರವಾಸಿತಾಣವಾಗಿ ಬದಲಾಗಿದೆ. ಓಂ ಪರ್ವತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಭಾಗದಲ್ಲಿ ರಸ್ತೆಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿರೋದರಿಂದ ಹಿಮಾಲಯ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ವಾಣಿಜ್ಯ ಮಳಿಗೆಗಳು ಕಾಣಿಸಿಕೊಳ್ಳುತ್ತಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಓಂ ಪರ್ವತದ ಭಾಗದಲ್ಲಿ ಉಂಟಾಗುತ್ತಿರುವ ಅಭಿವೃದ್ಧಿ ಕೆಲಸಗಳು ಸಹ ಹಿಮ ಕರಗುವಿಕೆಗೆ ಕಾರಣವಾಗುತ್ತಿದೆ. ಇದೆಲ್ಲದರಿಂದ ಹಿಮಾಲಯ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇತ್ತ ಭಕ್ತರು ಓಂ ಮಾಯವಾಗುತ್ತಿರೋದು ವಿನಾಶದ ಸುಳಿವು ನೀಡುತ್ತಿದೆಯಾ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಓಂ ಶಿವೋಂ... ಎರಡೂ ಕಾಲಿಲ್ಲ ಆದರೂ ಅಮರನಾಥಕ್ಕೆ ಇವರದ್ದು 12ನೇ ಯಾತ್ರೆ : ಇವರಿಗಿಂತ ಸ್ಪೂರ್ತಿ ಬೇಕೆ?

ಎಲ್ಲಿದೆ ಈ ಓಂ ಪರ್ವತ? 

ಉತ್ತರಾಖಂಡ ರಾಜ್ಯದ ಪಿಥೋರ್ಗಢ ಜಿಲ್ಲೆಯಿಂದ  170 ಕಿ.ಮೀ. ದೂರದಲ್ಲಿರುವ ನಾಭೀಡಾಂಗ್ ಎಂಬಲ್ಲಿ ಓಂ ಪರ್ವತ ಕಾಣಬಹುದು. ಪ್ರತಿ ವರ್ಷ ಹಿಮದಿಂದ ರಚನೆಯಾಗುವ ಓಂ ಕಣ್ತುಂಬಿಕೊಳ್ಳಲು ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದ್ರೆ ಶಿವನ ಆಶೀರ್ವಾದ ಸಿಗುತ್ತೆ ಎಂಬ ನಂಬಿಕೆ ಇದೆ. ಇದೇ ಪರ್ವತದಲ್ಲಿ ಶಿವ ವಾಸವಾಗಿದ್ದಾನೆ ಎಂದು ನಂಬಲಾಗುತ್ತದೆ. ಶಿವ ಇಲ್ಲಿಯೇ ವಾಸವಾಗಿರುವ ಬಗ್ಗೆ ಅನುಭವಕ್ಕೆ ಬರುತ್ತೆ ಎಂದು ಇಲ್ಲಿಯ ಜನರು ಹೇಳುತ್ತಿರುತ್ತಾರೆ. ರಾಮಾಯಾಣ, ಮಹಾಭಾರತ ಸೇರಿದಂತೆ ಹಲವು ಪುರಾಣಗಳಲ್ಲಿ ಓಂ ಪರ್ವತದ ಉಲ್ಲೇಖವಿದೆ. 

ಸ್ಕಂದ ಪುರಾಣದ ಮಾನಸ ವಿಭಾಗದಲ್ಲಿ ಆದಿ ಕೈಲಾಸ ಮತ್ತು ಓಂ ಪರ್ವತದ ಯಾತ್ರೆಗೆ ಕೈಲಾಸ ಮಾನಸ ಸರೋವರದ ಪ್ರಯಾಣಕ್ಕೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿ ಈ ಕ್ಷೇತ್ರವನ್ನು ಚಿಕ್ಕ ಕೈಲಾಸ ಎಂದು ಕರೆಯಲಾಗುತ್ತದೆ. ಓಂ ಪರ್ವತವನ್ನು ಹಿಮಾಲಯದಲ್ಲಿ ವಿಶೇಷ ಸ್ಥಳವೆಂದು ಪರಿಗಣಿಸಲಾಗಿದೆ. ಈ ಪರ್ವತದ ಎತ್ತರವು 6,191 ಮೀಟರ್‌ಗಳು ಅಂದರೆ ಸಮುದ್ರ ಮಟ್ಟದಿಂದ 20,312 ಅಡಿಗಳಿದೆ. ಸೂರ್ಯನ ಮೊದಲ ಕಿರಣವು ಈ ಪರ್ವತದ ಮೇಲೆ ಬಿದ್ದಾಗ, ಓಂ ಪದವು ವಿಭಿನ್ನವಾಗಿ ಹೊಳೆಯುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ. 

ಅಮರನಾಥ ಗುಹೆಯಲ್ಲಿ ಇಂದಿಗೂ ಕಾಣ ಸಿಗುತ್ತೆ ಶಿವನಿಂದ ಅಮರತ್ವ ಪಡೆದ ಜೋಡಿ ಪಾರಿವಾಳಗಳು!

Latest Videos
Follow Us:
Download App:
  • android
  • ios