Asianet Suvarna News Asianet Suvarna News

ಎರಡು ತಲೆ ಮೂರು ಕಾಲು, ಒಂದೇ ದೇಹ: ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ!

ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾದ ಒಡಿಶಾದ ಖಾಸಗಿ ಆಸ್ಪತ್ರೆ| ವೈದ್ಯರನ್ನೇ ಅಚ್ಚರಿಗಿಡು ಮಾಡಿದೆ ಅವಳಿ ಮಕ್ಕಳ ಜನನ| ಎರಡು ತಲೆ ಮೂರು ಕಾಲು, ಒಂದೇ ದೇಹ: ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ!

Odisha Woman gives birth to twin girls with 2 heads and 3 hands pod
Author
Bangalore, First Published Apr 12, 2021, 1:41 PM IST

ಭುವನೇಶ್ವರ(ಏ.12): ಒಡಿಶಾದ ಕೇಂದ್ರಪಾಡಾ ಜಿಲ್ಲೆಯಲ್ಲಿ ಭಾನುವಾರದಂದು ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಈ ಮಗುವಿಗೆ ಎರಡು ತಲೆ, ಮೂರು ಕೈಗಳು ಹಾಗೂ ಒಂದೇ ದೇಹವಿದ್ದು, ಈ ಪ್ರಕರಣ ವೈದ್ಯರನ್ನೇ ಅಚ್ಚರಿಗೀಡು ಮಾಡಿದೆ.

ಇದೊಂದು ಬಹಳ ಅಪರೂಪದ ಪ್ರಕರಣವಾಗಿದೆ. ಇನ್ನು ಈ ಅವಳಿ ಮಕ್ಕಳು ಬಡ ಕುಟುಂಬದಲ್ಲಿ ಜನಿಸಿದ್ದು, ಮಹಿಳೆ ಎರಡನೇ ಬಾರಿ ತಾಯಿಯಾಗಿದ್ದಾರೆ. ಇನ್ನು ಈ ಮಕ್ಕಳ ಮೆದುಳು ಸಂಪೂರ್ಣವಾಗಿ ವಿಕಾಸಿತಗೊಂಡಿವೆ ಎಂದೂ ವೈದ್ಯರು ತಿಳಿಸಿದ್ದಾರೆ.

ಇನ್ನು ಸದ್ಯ ಮಕ್ಕಳು ಬಾಯಿಯಿಂದಲೇ ಆಹಾರ ಸೇವಿಸುತ್ತಿದ್ದು, ಯಾವುದೇ ಟ್ಯೂಬ್ ಅಳವಡಿಸಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. ಆದರೆ ದೇಹ ಒಂದೇ ಆಗಿದ್ದು, ಈ ಅವಳಿ ಸಹೋದರಿಯರಿಗೆ ಒಟ್ಟು ಮೂರು ಕೈ, ಎರಡು ಕಾಳುಗಳಿವೆ ಎಂದಿದ್ದಾರೆ.

ಇನ್ನು ಈ ಮಕ್ಕಳ ಜನ್ಮ  ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ನಡೆದಿದೆ. ಇದಾದ ಬಳಿಕ ಮಕ್ಕಳು ಹಾಗೂ ತಾಯಿಯನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
 

Follow Us:
Download App:
  • android
  • ios