ನವದೆಹಲಿ[ಡಿ.29]: ಕಳೆದ ಕೆಲ ದಿನಗಳಿಂದ ನಿಧಾನವಾಗಿ ಉತ್ತರ ಭಾರತವನ್ನು ಆವರಿಸಿಕೊಳ್ಳುತ್ತಿರುವ ಚಳಿಯ ವಾತಾವರಣ, ಇದೀಗ ಬಹುತೇಕ ಉತ್ತರ ಭಾರತವನ್ನು ಥರಗುಟ್ಟುವಂತೆ ಮಾಡಿದೆ.

ರಾಜಧಾನಿ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ರಾಜಸ್ಥಾನ, ಹಿಮಾಚಲಪ್ರದೇಶ, ಉತ್ತರಪ್ರದೇಶದ ಹಲವು ಭಾಗಗಳು, ಉತ್ತರಾಖಂಡ, ಪಂಜಾಬ್‌, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಶೂನ್ಯದ ಆಸುಪಾಸಿಗೆ ಬಂದಿದ್ದು ಸಾಮಾನ್ಯ ಜನವಜೀವನದ ಮೇಲೆ ವ್ಯತ್ಯಯ ಬೀರಿದೆ. ಚಳಿಯ ಜೊತೆಗೆ ಹಿಮಮಂಜು ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ರೈಲು ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ರೈಲುಗಳ ಸಂಚಾರದಲ್ಲಿ ವಿಳಂಬವಾಗಿದ್ದರೆ, ಹಲವು ವಿಮಾನಗಳನ್ನು ಸಮೀಪದ ನಿಲ್ದಾಣಗಳಿಗೆ ಕಳುಹಿಸಿಕೊಡಲಾಗಿದೆ.

ದೆಹಲಿಯಲ್ಲಿ ಕೆಲ ಭಾಗಗಳಲ್ಲಿ 1.4 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಇದು ಈ ಚಳಿಗಾಲದ ಅವಧಿಯಲ್ಲೇ ಉತ್ತರ ಭಾರತದಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ.

ಉತ್ತರ ಭಾರತದ ಹಿಮಾಚಲ ಪ್ರದೇಶ ಶೂನ್ಯ

ಲೇಹ್‌ - 28.6 ಡಿ.ಸೆ.

ಲಡಾಖ್‌ನ ದ್ರಾಸ್‌ - 19.1ಡಿ.ಸೆ.

ಕೆಲಾಂಗ್‌ (ಹಿ.ಪ್ರದೇಶ) -11.5

ಶ್ರೀನಗರ -5.8

ಫತೇಪುರ್‌ (ರಾಜಸ್ಥಾನ) -4 ಡಿ.ಸೆ

ಮೇರಠ್‌ (ಯು.ಪಿ) 1.7 ಡಿ.ಸೆ