Asianet Suvarna News Asianet Suvarna News

Rajasthan HC : ವಿದ್ಯಾವಂತ ಹುಡುಗಿ ಮದುವೆಗೂ ಮುನ್ನ ಸಮ್ಮತಿ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವಲ್ಲ!

ಅತ್ಯಾಚಾರ ಪ್ರಕರಣ ರದ್ದು ಮಾಡಿದ ರಾಜಸ್ಥಾನ ಹೈಕೋರ್ಟ್

ಸಮ್ಮತಿಯೊಂದಿಗೆ ನಡೆದ ಸೆಕ್ಸ್ ಪ್ರಕರಣ ಇದಾಗಿದೆ

ಪ್ರಕರಣ ವರದಿ ಮಾಡುವಲ್ಲಿ ಸಾಕಷ್ಟು ವಿಳಂಬವಾಗಿರುವ ಹಿನ್ನಲೆ
 

No rape if educated girl has sex with consensual before marriage says Rajasthan High Court san
Author
Bengaluru, First Published Feb 26, 2022, 9:16 PM IST | Last Updated Feb 26, 2022, 9:16 PM IST

ನವದೆಹಲಿ (ಫೆ.26): ವಿವಾಹದ ಭರವಸೆಯೊಂದಿಗೆ ಪರಸ್ಪರ ಒಪ್ಪಿಗೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ಯಾವುದೋ ಕಾರಣಕ್ಕೆ ಮದುವೆ ನಡೆಯದಿದ್ದರೆ ಅದನ್ನು ಅತ್ಯಾಚಾರ (Rape) ಎಂದು ಪರಿಗಣಿಸಲಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ (Rajasthan High Court) ತೀರ್ಪು ನೀಡಿದೆ. ಆ ಮೂಲಕ ಯುವಕನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ವಿಚಾರದಲ್ಲಿ ಯುವತಿಯ ಕುರಿತಾಗಿ ರಾಜಸ್ಥಾನ ಹೈಕೋರ್ಟ್ ದೊಡ್ಡ ಟೀಕೆ ಮಾಡಿದೆ.

ಇದು ವಂಚನೆ ಅಥವಾ ಬಲವಂತದ ಸೆಕ್ಸ್ ನ ಪ್ರಚೋದನೆ (cheating or coercive sexual intercourse) ಎಂದು ಅರ್ಥೈಸಲಾಗುವುದಿಲ್ಲ. ಪರಸ್ಪರ ಒಪ್ಪಿಗೆಯಿಂದ ಎಲ್ಲವೂ ನಡೆಯುತ್ತಿದ್ದು, ಕೆಲವು ಕಾರಣಗಳಿಂದ ಭರವಸೆ ಈಡೇರದೇ ಇದ್ದರೆ ಅದನ್ನು ವಂಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದು ದುರದೃಷ್ಟಕರ ಎಂದು ನ್ಯಾಯಾಧೀಶರು ಹೇಳಿದರು, ಆದರೆ ಈಗ ಇಂತಹ ಪ್ರಕರಣಗಳು ಸಾಮಾನ್ಯವಾಗಿದೆ ಎಂದೂ ತಿಳಿಸಿದ್ದಾರೆ. ಪ್ರೇಮ ಪ್ರಕರಣಕ್ಕೆ ಬಿದ್ದು ಯುವತಿಯರು ಮೊದಲು ಶಾರೀರಿಕ ಸಂಬಂಧ ಬೆಳೆಸಿ, ನಂತರ ಮುರಿದು ಬೀಳುತ್ತವೇ. ಆ ನಂತರವೇ ಇಂಥ ಪ್ರಕರಣಗಳು ಮುನ್ನಲೆಗೆ ಬರುತ್ತದೆ ಎಂದು ಹೇಳಿದೆ. ಅತ್ಯಾಚಾರ ಆರೋಪದಡಿ ರಾಧಾಕೃಷ್ಣ ಮೀನಾ ( Radhakrishan Meena) ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ (FIR) ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶ ಫರ್ಜಾಂದ್ ಅಲಿ (Farjand Ali) ಈ ಹೇಳಿಕೆ ನೀಡಿದ್ದಾರೆ.

ಅರ್ಜಿದಾರರ ಪ್ರಕಾರ, 2018 ರಲ್ಲಿ, ಹುಡುಗಿಗೆ ಸಂಬಂಧಿಕರ ಮೂಲಕ ಹುಡುಗನ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ನಡುವೆ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆ ಬೇರೆ ಸ್ಥಳಗಳಲ್ಲಿ ಇಬ್ಬರ ನಡುವೆ ದೈಹಿಕ ಸಂಬಂಧವೂ ಏರ್ಪಟ್ಟಿತ್ತು. ಆದರೆ ನಂತರ ಯಾವುದೋ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬ್ರೇಕಪ್ ಆಗಿದೆ. ಇದಾದ ಬಳಿಕ ಯುವತಿಯು, ಯುವಕನ ವಿರುದ್ಧ ದೈಹಿಕ ಸಂಬಂಧವನ್ನು ಬೆಳೆಸಿ ವಂಚನೆ ಮಾಡಿ ನಂತರ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದಾಳೆ. ಪ್ರಕರಣದಲ್ಲಿ ಪೊಲೀಸರು ಎರಡು ಬಾರಿ ಎಫ್‌ಆರ್‌ ಹಾಕಿದ್ದರೂ ಬಾಲಕಿಯ ಒತ್ತಡಕ್ಕೆ ಮಣಿದು ತನಿಖೆ ಮುಂದುವರಿಸಿದ್ದಾರೆ.

ಜಾತಿ- ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಉತ್ತರ ಪ್ರದೇಶ, ಕೋಮು ಧ್ರುವೀಕರಣ ಲಾಭ ಯಾರಿಗೆ?
ಇದಾದ ಬಳಿಕ ಯುವಕ ಹೈಕೋರ್ಟ್‌ನಲ್ಲಿ ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರ ಮತ್ತು ಅವರ ಕುಟುಂಬ ಸದಸ್ಯರ ಬಂಧನಕ್ಕೆ ತಡೆ ನೀಡಿದೆ. ಯುವಕ ಯಾವಾಗ ಮದುವೆಯಾಗಲು ನಿರಾಕರಿಸಿದ ಎಂಬುದು ಸ್ಪಷ್ಟವಾಗಿಲ್ಲ, ಇದು 2018 ರಲ್ಲಿ ನಡೆದಿರಬಹುದು ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಆದರೆ, ಯುವತಿ ಇಷ್ಟು ದಿನ ಮೌನವಾಗಿದ್ದು, ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದಾದ ನಂತರವೂ ಅರ್ಜಿದಾರರ ಜೊತೆ ಹುಡುಗಿ ಬಹಳ ಕಾಲ ಸಂಬಂಧ ಇಟ್ಟುಕೊಂಡಿದ್ದಳು. ಹುಡುಗಿಯ ಕಡೆಯಿಂದ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಥವಾ ಯಾವುದೇ ವೀಡಿಯೊವನ್ನು ಪ್ರಸ್ತುತಪಡಿಸದಿರುವುದು ಅನುಮಾನವನ್ನು ಉಂಟುಮಾಡುತ್ತದೆ. ಹುಡುಗಿಯ ಮನೆಯವರೂ ಅರ್ಜಿದಾರರನ್ನು ಮದುವೆಯಾಗಲು ಸಿದ್ಧರಿರಲಿಲ್ಲ.

Russia Ukraine war ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ, ಮತ್ತೆ ಭಾರತದ ನೆರವು ಕೇಳಿದ ಝೆಲೆನ್ಸ್ಕಿ!
ಈ ಪ್ರಕರಣದಲ್ಲಿ ಇಬ್ಬರ ನಡುವೆ ಪ್ರೇಮ ಪ್ರಕರಣವಿತ್ತು ಎಂದು ಕೋರ್ಟ್ ಹೇಳಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಹಲವು ಬಾರಿ ದೈಹಿಕ ಸಂಬಂಧವನ್ನೂ ಮಾಡಿಕೊಂಡಿದ್ದರು. ಆದರೆ ಸಮಯ ಕಳೆದಂತೆ ಇಬ್ಬರಿಗೂ ಹೊಂದಾಣಿಕೆ ಆಗದೇ ಸಂಬಂಧ ಹಳಸಿತು. ಅತ್ಯಾಚಾರ ಪ್ರಕರಣದಲ್ಲಿ ಬಲಪ್ರಯೋಗವಾಗಿರುವುದು ಸಾಬೀತಾಗಬೇಕು, ಆದರೆ, ಈ ಪ್ರಕರಣದಲ್ಲಿ ಹಾಗಾಗಿಲ್ಲ. ಅಥವಾ ಅರ್ಜಿದಾರರು ಸುಳ್ಳು ಹೇಳುವ ಮೂಲಕ ಸಂಬಂಧವನ್ನು ಸೃಷ್ಟಿಸಿಲ್ಲ. ದೂರುದಾರ ಯುವತಿ ವಿದ್ಯಾಭ್ಯಾಸ ಮಾಡಿದ್ದು,, ಜೈಲು ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನಕ್ಷರಸ್ಥ ಮಹಿಳೆಯೊಬ್ಬರು ವಿವಾಹದ ಭರವಸೆಯೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದರೆ, ಅದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು. ಆದರೆ, ಈ ಪ್ರಕರಣದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

Latest Videos
Follow Us:
Download App:
  • android
  • ios