ವಾಷಿಂಗ್ಟನ್: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯನ್ನು ಚೀನಾ ಸೇರಿದಂತೆ ಯಾವುದೇ ದೇಶಗಳು ಪಾಕಿಸ್ತಾ ನದ ಪರವಾಗಿ ಹೇಳಿಕೆ ನೀಡಿಲ್ಲ ಎಂದು ಅಮೇರಿಕ ದಲ್ಲಿರುವ ಪಾಕ್‌ನ ಮಾಜಿ ರಾಯಭಾರಿ ಪ್ರತಿಕ್ರಿಯಿಸಿದ್ದಾರೆ.

ಇದು ಭಯೋತ್ಪಾದನೆಯ ಪೋಷಣೆ ಯನ್ನು ಸಹಿಸುವುದಿಲ್ಲ ಮತ್ತು ಶಾಂತಿ ಯತ್ತ ವಿಶ್ವ ಸಾಗುತ್ತಿದೆ ಎಂಬುದನ್ನು ಸಾರಿದಂತಾಗಿದೆ ಎಂದು ತಿಳಿಸಿದ್ದಾರೆ. 

ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿದ್ದ ಬಾಲಾಕೋಟ್  ಭಯೋತ್ಪಾದಕ ಶಿಬಿರವನ್ನು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ನಿರ್ನಾಮಗೊಳಿಸಿದ ಬಳಿಕ ಪ್ರತೀಕಾರದ ಮಾತುಗಳನ್ನು ಆಡಿದ್ದ ಪಾಕಿಸ್ತಾನ ಇದೀಗ ಮೆತ್ತಗಾಗಿದೆ. ಜಗತ್ತಿನ ಎಲ್ಲ ಯುದ್ಧಗಳೂ ತಪ್ಪು ಲೆಕ್ಕಾಚಾರದಿಂದ ಕೂಡಿದ್ದವು. ಅವು ಎಲ್ಲಿಗೆ ಕೊಂಡೊಯ್ಯುತ್ತವೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. 

ಹೀಗಾಗಿ ಪರಿಸ್ಥಿತಿ ಕೈಮೀರುವ ಮೊದಲು ಮಾತುಕತೆಗೆ ಬನ್ನಿ. ಭಯೋತ್ಪಾದನೆ ಕುರಿತು ಚರ್ಚೆ ನಡೆಯಬೇಕು ಎಂದರೆ ನಾವು ಅದಕ್ಕೂ ಸಿದ್ಧರಿದ್ದೇವೆ ಎಂದು ನೆರೆ ದೇಶ ಅಂಗಲಾಚುವ ಧ್ವನಿಯಲ್ಲಿ ಹೇಳಿದೆ.