ನವದೆಹಲಿ(ಮಾ. 13)   ದೇಶದಲ್ಲಿ ಕರೋನಾಕ್ಕೆ ಎರಡನೇ ಬಲಿಯಾಗಿದೆ. ಮೊದಲನೇ ಸಾವು ಕರ್ನಾಟಕದಿಂದ ವರದಿಯಾಗಿದ್ದರೆ ಈಗ ಎರಡನೇ ಸಾವು ರಾಷ್ಟ್ರ ರಾಜಧಾನಿ ನವದೆಹಲಿಯಿಂದ ವರದಿಯಾಗಿದೆ.

ದೆಹಲಿಯಲ್ಲಿ  ಕರೋನಾ ಸೋಂಕಿಗೆ 2ನೇ ಬಲಿಯಾಗಿದೆ. ದೆಹಲಿಯಲ್ಲಿ 69 ವರ್ಷದ ವೃದ್ಧೆ ಸಾವನ್ನಪ್ಪಿರುವುದನ್ನು  ದೆಹಲಿ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.  ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ವೃದ್ಧೆ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಕರೋನಾಗೆ ಮೊದಲ ಬಲಿ; ಕಲಬುರಗಿ ವ್ಯಕ್ತಿ ಸಾವು

ಪುತ್ರನಿಂದ ತಾಯಿಗೆ ಕರೋನಾ ಸೋಕು ಹರಡಿತ್ತು. ವಿದೇಶ ಪ್ರವಾಸ ಮುಗಿಸಿ ಪುತ್ರ ವಾಪಾಸಾಗಿದ್ದ ಎಂದು ದೆಹಲಿ ಆರೋಗ್ಯ ಇಲಾಖೆ ಹೆಚ್ಚಿನ ಮಾಹಿತಿ ನೀಡಿದೆ. ವಿದೇಶದ ಯಾತ್ರೆ ಮುಗಿಸಿ ಬಂದಿದ್ದ ಕರ್ನಾಟಕದ 76 ವರ್ಷದ ವೃದ್ಧರೊಬ್ಬರಿಗೆ ಕರೋನಾ ಸೋಂಕು ತಗುಲಿತ್ತು. ಹೈದರಾಬಾಸ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು ಮಂಗಳವಾರ ಸಾವನ್ನಪ್ಪಿದ್ದರು.

ಕರೋನಾ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿದೆ. ಒಂದು ವಾರ ಕಾಲ್ ಪಬ್, ಬಾರ್ ಗಳನ್ನು ಬಂದ್ ಮಾಡಲು ಆದೇಶ ನೀಡಲಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳು ಮತ್ತಷ್ಟು ಆತಂಕಕಾರಿಯಾಗಿರುವುದು ಸತ್ಯ.