Asianet Suvarna News Asianet Suvarna News

ಹೊಸ ತಲೆಮಾರಿನ ‘ಅಗ್ನಿ ಪ್ರೈಮ್’ ರಾತ್ರಿ ಉಡಾವಣೆ ಪ್ರಾಯೋಗಿಕ ಪರೀಕ್ಷೆ ಯಶಸ್ವಿ!

ಭಾರತವು ಸೇನಾ ವಲಯದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಬುಧವಾರ ಸಂಜೆ 7 ಗಂಟೆ ಹೊತ್ತಿಗೆ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯ ‘ಅಗ್ನಿ ಪ್ರೈಮ್’ ರಾತ್ರಿ ಉಡಾವಣೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದೆ. 
 

New generation ballistic missile Agni Prime successfully test fired gvd
Author
First Published Apr 5, 2024, 8:29 AM IST

ನವದೆಹಲಿ (ಏ.05): ಭಾರತವು ಸೇನಾ ವಲಯದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಬುಧವಾರ ಸಂಜೆ 7 ಗಂಟೆ ಹೊತ್ತಿಗೆ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯ ‘ಅಗ್ನಿ ಪ್ರೈಮ್’ ರಾತ್ರಿ ಉಡಾವಣೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದೆ. ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಕಾರ್ಯಾಚರಣೆಯನ್ನು ನಡೆಸಿದೆ. ಈ ಕ್ಷಿಪಣಿಯು 1000 ದಿಂದ 2000 ಕಿ.ಮೀ ತನಕ ನಿಖರ ಗುರಿ ಬೇಧಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ ಪ್ರೈಮ್ ಕ್ಷಿಪಣಿಯು ನಿಗದಿತ ಗುರಿ ಸಾಧಿಸಿದ್ದು, ಭಾರತೀಯ ಸೇನೆಗೆ ಮತ್ತೊಂದು ಬಲ ಬಂದಂತಾಗಿದೆ. ಟರ್ಮಿನಲ್ ಪಾಯಿಂಟ್‌ನಲ್ಲಿ ಇರಿಸಲಾದ ಎರಡು ಡೌನ್‌ರೇಂಜ್ ಹಡಗುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ರೇಂಜ್ ಸೆನ್ಸಾರ್ ಗಳಿಂದ ಡೇಟಾ ಕಲೆ ಹಾಕಲಾಗಿದ್ದು, ಕ್ಷಿಪಣಿಯು ಉದ್ದೇಶಿತ ಗುರಿಯನ್ನು ಮುಟ್ಟಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಉಡಾವಣೆಗೆ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಕಾರ್ಯತಂತ್ರದ ಪಡೆಗಳ ಕಮಾಂಡ್ ಮುಖ್ಯಸ್ಥರು ಮತ್ತು DRDO ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು. 

ಕ್ಷಿಪಣಿಯ ಮೂರು ಯಶಸ್ವಿ ಅಭಿವೃದ್ಧಿ ಪ್ರಯೋಗಗಳ ನಂತರ ಕಳೆದ ವರ್ಷ ಜೂನ್ ತಿಂಗಳಲ್ಲಿ ಮೊದಲ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ರಾಡಾರ್, ಟೆಲಿಮಿಟ್ರಿ, ಎಲೆಕ್ಟ್ರೋ ಅಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಗಳನ್ನು ವಿವಿಧ ಕಡೆಗಳಲ್ಲ ನಿಯೋಜಿಸಲಾಗಿತ್ತು. ಎರಡನೇ ಪರೀಕ್ಷೆಯನ್ನು ಡಿಸೆಂಬರ್‌ನಲ್ಲಿ ನಡೆಸಲಾಯಿತು. ಇದು ವ್ಯವಸ್ಥೆಯಲ್ಲಿ ಸಂಯೋಜಿಸಲಾದ ಎಲ್ಲಾ ಸುಧಾರಿತ ತಂತ್ರಜ್ಞಾನಗಳ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಲು ಕಾರಣವಾಯಿತು.

ಚೀನಾ ಭಾರತ ಪ್ರವೇಶಿಸಿದಾಗ ಅಫೀಮು ತಿಂದು ಮೋದಿ ನಿದ್ದೆ: ಮಲ್ಲಿಕಾರ್ಜುನ ಖರ್ಗೆ ಲೇವಡಿ

‘ಅಗ್ನಿ ಪ್ರೈಮ್ ಕ್ಷಿಪಣಿಯು ಎಲ್ಲ ಪ್ರಾಯೋಗಿಕ ಹಂತಗಳನ್ನು ಮುಗಿಸಿದೆ. ವಿವಿಧ ಸ್ಥಳಗಳಿಂದ ನಿಯೋಜಿಸಲಾಗಿದ್ದ ಡೇಟಾಗಳನ್ನು ಧೃಡೀಕರಿಸಿದೆ. ವಿಶ್ವಾಸರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಪ್ರಶ್ನಿಸುವ ಪ್ರಯೋಗದ ಉದ್ದೇಶಗಳನ್ನೂ ಪೂರೈಸಿದೆ’ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಎಸ್ಎಫ್‌ಸಿ ಮತ್ತು ಡಿಆರ್‌ಡಿಓ ಸಂಸ್ಥೆಯು ಹೊಸ ತಲೆಮಾರಿನ ಬ್ಯಾಲಿಸ್ಟಿಕ್‌ ಕ್ಷಿಪಣಿಯ ಪ್ರಾಯೋಗಿಕ ಉಡಾವಣೆಯಲ್ಲಿ ಯಶಸ್ಸು ಸಾಧಿಸಿದಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.

Follow Us:
Download App:
  • android
  • ios