ನೀಟ್ ಯುಜಿ ಮರುಪರೀಕ್ಷೆಯಲ್ಲಿ 11,000 ವಿದ್ಯಾರ್ಥಿಗಳಿಗೆ ಶೂನ್ಯ, ಒಬ್ಬನಿಗೆ -180 ಅಂಕ
ಒಬ್ಬ ವಿದ್ಯಾರ್ಥಿಗೆ ಮೈನಸ್ 180 ಅಂಕ ಬಂದಿದೆ. 720ಕ್ಕೆ 720 ಅಂಕ ಗಳಿಸಿದ್ದ 6 ವಿದ್ಯಾರ್ಥಿಗಲ್ಲಿ ಮಾರ್ಕ್ಸ್ ಸಹ ಕುಸಿತ ಕಂಡಿದೆ. ಸಂಪೂರ್ಣ ಅಂಕ ಪಡೆದಿದ್ದ ಆರು ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದವರಾಗಿದ್ದಾರೆ.
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಬಿಡುಗಡೆಯಾದ ಕೇಂದ್ರ ಹಾಗೂ ನಗರವಾರು ಫಲಿತಾಂಶ ಪಟ್ಟಿಯಲ್ಲಿ 11,000ಕ್ಕೂ ಅಧಿಕ ವಿದ್ಯಾರ್ಥಿಗಳು ಶೂನ್ಯ ಹಾಗೂ ನೆಗೆಟಿವ್ ಅಂಕ ಪಡೆದಿರುವ ವಿಷಯ ಪತ್ತೆಯಾಗಿದೆ. 2250 ಅಭ್ಯರ್ಥಿಗಳು ಶೂನ್ಯ ಅಂಕ ಸಂಪಾದನೆ ಮಾಡಿದ್ದರೆ, ಅದಕ್ಕಿಂತ ಹೆಚ್ಚು 9400 ವಿದ್ಯಾರ್ಥಿಗಳು ನೆಗೆಟಿವ್ ಅಂಕ ಪಡೆದಿದ್ದಾರೆ. ವಿಶೇಷವೆಂದರೆ ನೀಟ್ ಅಕ್ರಮ ನಡೆದಿದೆ ಎನ್ನಲಾದ ಜಾರ್ಖಂಡ್‌ನ ಹಜಾರಿಬಾಗ್ ಕೇಂದ್ರದಲ್ಲಿಯೇ ಅತಿ ಹೆಚ್ಚು ಜನರು ಈ ಸಾಧನೆ ಮಾಡಿದ್ದಾರೆ. ನೀಟ್‌ನಲ್ಲಿ ಪ್ರತಿ ತಪ್ಪು ಉತ್ತರಕ್ಕೂ ನಿರ್ದಿಷ್ಟ ಅಂಕ ಕಳೆಯಲಾಗುತ್ತದೆ. ಈ ಪೈಕಿ ಒಬ್ಬ ವಿದ್ಯಾರ್ಥಿಗೆ ಮೈನಸ್ 180 ಅಂಕ ಬಂದಿದೆ. 720ಕ್ಕೆ 720 ಅಂಕ ಗಳಿಸಿದ್ದ 6 ವಿದ್ಯಾರ್ಥಿಗಲ್ಲಿ ಮಾರ್ಕ್ಸ್ ಸಹ ಕುಸಿತ ಕಂಡಿದೆ. ಸಂಪೂರ್ಣ ಅಂಕ ಪಡೆದಿದ್ದ ಆರು ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದವರಾಗಿದ್ದಾರೆ.
ಇಂದು ಅರ್ಜಿಯ ವಿಚಾರಣೆ
ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ಪರೀಕ್ಷೆ ‘ನೀಟ್’ನಲ್ಲಿ ವ್ಯಾಪಕ ಅಕ್ರಮಗಳಾಗಿವೆ ಎಂಬ ಆರೋಪ ಸಂಬಂಧ ಸಲ್ಲಿಕೆಯಾಗಿರುವ ಹತ್ತಾರು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಾಧೀಶರಾದ ಜೆ.ಬಿ. ಪರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರ ಪೀಠ ಶನಿವಾರ 40ಕ್ಕೂ ಹೆಚ್ಚು ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ದಾಖಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೇ ವರ್ಗಾಯಿಸಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲ್ಲಿಸಿರುವ ಅರ್ಜಿಯೂ ಇದರಲ್ಲಿ ಸೇರಿದೆ.
720ಕ್ಕೆ 720 ಅಂಕ ಗಳಿಸಿದ್ದ 6 ವಿದ್ಯಾರ್ಥಿಗಳಲ್ಲಿ ಒಬ್ಬರಿಗೂ ಇಲ್ಲ ಫುಲ್ ಮಾರ್ಕ್ಸ್… ಪರೀಕ್ಷಾ ಕೇಂದ್ರದ ಬಣ್ಣ ಬಯಲು
ಶನಿವಾರ ಫಲಿತಾಂಶ
ದೇಶಾದ್ಯಂತ ನೀಟ್-ಯುಜಿ ಪರೀಕ್ಷೆ ಮೇ 5ರಂದು ನಡೆದಿತ್ತು. ಈ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಂಕ ಹೆಚ್ಚಳ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಎನ್‌ಟಿಎ ಶನಿವಾರವಷ್ಟೇ ನಗರ ಹಾಗೂ ಪರೀಕ್ಷಾ ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸಿತ್ತು.
ಈ ಫಲಿತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಅಕ್ರಮ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದ್ದ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಕಂಡುಬಂದಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.
ಸುಪ್ರೀಂ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ನೀಟ್ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳ ಗುರುತು ಗೌಪ್ಯವಿಟ್ಟ ಎನ್‌ಟಿಎ