Asianet Suvarna News Asianet Suvarna News

ಗಲಭೆ ಉದ್ದೇಶಕ್ಕೆ ರಾಮನವಮಿ, ಹನುಮಾನ್‌ ಜಯಂತಿ ಆಯೋಜನೆ, ಎನ್‌ಸಿಪಿ ನಾಯಕನ ವಿವಾದಿತ ಹೇಳಿಕೆ!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದ ದಿನವೇ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕ ಹಿಂದುಗಳ ಭಾವನೆಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾರೆ. 

NCP Leader Jitendra Awhad  Sparks Row Ram Navami Hanuman Jayanti Are For Riots Only san
Author
First Published Apr 22, 2023, 5:26 PM IST

ನವದೆಹಲಿ (ಏ.22): ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿ ಅಭ್ಯರ್ಥಿಗಳ ಪಟ್ಟಿಯನ್ನೂ ಕೂಡ ಶುಕ್ರವಾರ ಬಿಡುಗಡೆ ಮಾಡಿದೆ. ಆದರೆ, ಅದೇ ದಿನ ಎನ್‌ಸಿಪಿ ನಾಯಕ ಹಿಂದುಗಳ ಭಾವನಗೆ ಧಕ್ಕೆ ತರುವಂಥ ಹೇಳಿಕೆಯ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದಾರೆ. ರಾಮನವಮಿ ಸಂಭ್ರಮದ ವೇಳೆ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಇದೆಲ್ಲ ನಡೆದ ಒಂದು ತಿಂಗಳ ಬಳಿಕ ಮತ್ತೆ ಇದೇ ವಿಚಾರದ ಬಗ್ಗೆ ಮಾತನಾಡಿರುವ ಎನ್‌ಸಿಬಿ ನಾಯಕ ಜೀತೇಂದ್ರ ಅವದ್, ಹಿಂಸಾಚಾರ, ಗಲಭೆ ನಡೆಸುವ ಉದ್ದೇಶದಿಂದಲೇ ರಾಮನವಮಿ ಹಾಗೂ ಹನುಮಾನ್‌ ಜಯಂತಿಯನ್ನು ಆಯೋಜಿಸುತ್ತಾರೆ ಎಂದು ಹೇಳಿದ್ದಾರೆ. ರಾಮನವಮಿ ಹಾಗೂ ಹನುಮ ಜಯಂತಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳದ ಹೌರಾ, ಮಧ್ಯಪ್ರದೇಶ ಹಾಗೂ ಬಿಹಾರದ ಪಾಟ್ನಾ ಶರೀಫ್‌ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಬೇಕಾಬಿಟ್ಟಿಯಾಗಿ ಮಾತನಾಡಿರುವ ಜೀತೇಂದ್ರ ಅವದ್, ಮುಂಬರುವ ದಿನಗಳಲ್ಲಿ ಇಂಥ ಗಲಭೆಗಳು ಇನ್ನಷ್ಟು ಹೆಚ್ಚಾಗುತ್ತವೆ ನೋಡ್ತಾ ಇರಿ ಎಂದು ಎಚ್ಚರಿಸಿದ್ದಾರೆ.

"ರಾಮ ನವಮಿ ಮತ್ತು ಹನುಮ ಜಯಂತಿಗಳ ಹಬ್ಬಗಳು ಗಲಭೆಗಾಗಿ ಮಾತ್ರ ಎಂದು ತೋರುತ್ತದೆ. ಗಲಭೆಗಳಿಂದ ನಗರಗಳಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮುಂಬರುವ ವರ್ಷಗಳಲ್ಲಿ ನಾವು ಇಂತಹ ಗಲಭೆಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಎನ್‌ಸಿಪಿ ಸಾರ್ವಜನಿಕ ಸಮಾವೇಶದ ವೇಳೆ ಅವರು ಹೇಳಿದ್ದಾರೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ವೇದಿಕೆಯಲ್ಲಿ ಇದ್ದ ಸಮಯದಲ್ಲಿಯೇ ಜೀತೇಂದ್ರ ಅವದ್ ಈ ಮಾತುಗಳನ್ನು ಹೇಳಿದ್ದಾರೆ.

'ಔರಂಗಾಬಾದ್‌ನಲ್ಲಿ ಇತ್ತೀಚೆಗೆ ಒಂದು ಗಲಭೆ ಆಯಿತು. ಇದು ರಾಮನವಮಿ ಮತ್ತು ಮಾರುತಿಯನ್ನು ಪೂಜಿಸುವ ಹಬ್ಬ ಯಾವುದಪ್ಪ? ಹಾಂ... ಹನುಮಾನ್‌ ಜಯಂತಿ. ಈ ಎರಡೂ ಹಬ್ಬಗಳನ್ನು ಆಚರಿಸುವುದು ಗಲಭೆ ಮಾಡುವ ಉದ್ದೇಶಕ್ಕಾಗಿಯೇ? ಈ ಎರಡು ಉತ್ಸವಗಳ ಸಮಯದಲ್ಲಿಯೇ ನಗರದ ವಾತಾವರಣ ಸಂಪೂರ್ಣವಾಗಿ ಹಿಂದೆಂದಿಗಿಂತೂ ಹದಗೆಟ್ಟಿದೆ. ಮುಂಬೈ ನಗರ ಮತ್ತು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಜನರ ನನ್ನ ತಿಳುವಳಿಕೆ ಪ್ರಕಾರ, ಮುಂಬೈ ಮತ್ತು ಸುತ್ತಮುತ್ತಲಿನ ಜನರಿಗೆ ಇದರ ಹಿಂದೆ ಯಾವುದೋ ಯೋಜನೆ ಇದೆ ಎಂದು ತಿಳಿದಿತ್ತು. ಇಲ್ಲದಿದ್ದರೆ ನಾನು ಸಾಹೇಬರ (ಶರದ್ ಪವಾರ್) ಮುಂದೆ ಏನನ್ನೂ ಹೇಳಲು ಧೈರ್ಯ ಮಾಡುವುದಿಲ್ಲ. ಆದರೆ ಮುಂಬರುವ ವರ್ಷ ಕೋಮುಗಲಭೆಗಳ ವರ್ಷ ಎಂಬುದು ನನ್ನ ದೃಢವಾದ ಅಭಿಪ್ರಾಯವಾಗಿದೆ' ಎಂದು ಹೇಳಿದ್ದಾರೆ.

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಬಳಿ ಹೋಟೆಲ್‌ ನಿರ್ಮಿಸುತ್ತೆ ಟಾಟಾ ಗ್ರೂಪ್‌!

ಜಿತೇಂದ್ರ ಅವದ್ ಅವರು ಹಿಂದೂ ಸಂಪ್ರದಾಯಗಳು ಮತ್ತು ಹಿಂದು ದೇವರನ್ನು ಪ್ರಗತಿಪರ ಚಿಂತನೆಗಳ ಹೆಸರಿನಲ್ಲಿ ಟೀಕಿಸಲು ಹೆಸರುವಾಸಿಯಾಗಿದ್ದಾರೆ. ಮುಂಬೈಗೆ ಸಮೀಪದ ಥಾಣೆ ಜಿಲ್ಲೆಯ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ ಕಲ್ವಾ-ಮುಂಬ್ರಾದ ಶಾಸಕರಾಗಿದ್ದಾರೆ. ಇದೇ ಕಾರಣಕ್ಕಾಗಿ  ಅವರು ತಮ್ಮ ಭಾಷಣದಲ್ಲಿ ನಗರದ ಹೆಸರನ್ನು ಛತ್ರಪತಿ ಸಂಭಾಜಿನಗರ ಎನ್ನುವ ಬದಲಿಗೆ ಉದ್ದೇಶಪೂರ್ವಕವಾಗಿ ಔರಂಗಾಬಾದ್‌ ಎಂದೇ ಹೇಳಿದ್ದರು ಎನ್ನುವುದು ಕೂಡ ಸ್ಪಷ್ಟವಾಗಿದೆ. ಮಹಾ ವಿಕಾಸ್‌ ಅಘಾಡಿ ಸರ್ಕಾರದಲ್ಲಿ ಇವರು ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.  ಈ ವರ್ಷ ರಾಮ ನವಮಿ ಮತ್ತು ಹನುಮ ಜಯಂತಿಯಂದು ದೇಶದ ವಿವಿಧ ಭಾಗಗಳಲ್ಲಿ  ಹಿಂದೂಗಳು ನಡೆಸುತ್ತಿದ್ದ ಮೆರವಣಿಗೆಗಳ ಮೇಲೆ ಇಸ್ಲಾಂ ಮೂಲಭೂತವಾದಿಗಳು ಕಲ್ಲು ತೂರಾಟ ನಡೆಸಿದ್ದರಿಂದ ವ್ಯಾಪಕ ಗಲಭೆಗಳು ನಡೆದಿದ್ದವು.

ದೇಶದ ವಂದೇ ಭಾರತ್‌ ರೈಲಿನ ಮೇಲೆ ಇರಲಿದೆ ಇನ್ನು ಟಾಟಾ ಹೆಸರು!

2023ರ ಮಾರ್ಚ್‌ 30 ರಂದು ದೇಶಾದ್ಯಂತ ನಡೆದ ರಾಮನವಮಿ ಮೆರವಣಿಗೆಯಲ್ಲಿ ಕಲ್ಲುತೂರಾಟ ನಡೆದಿದ್ದವು. ಕಲ್ಲು ತೂರಾಟ ಹಾಗೂ ಹಿಂಸಾಚಾರದ ಘಟನೆಗಳೂ ನಡೆದಿದ್ದವು. ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಗಳು ಮೃತಪಟ್ಟಿದ್ದರು. ಇದಲ್ಲದೆ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ರಾಮ ನವಮಿಯ ಶೋಭಾ ಯಾತ್ರೆಯ ಮೇಲೆ ಕಲ್ಲು ತೂರಾಟದ ವರದಿಗಳೂ ಬಂದಿದ್ದವು.

Follow Us:
Download App:
  • android
  • ios