ಮುಂಬೈ(ಜ.20) ಮುಂಬೈ ಪೊಲೀಸರು ಹೊಸ ಬದಲಾವಣೆಯೊಂದಕ್ಕೆ ಸಿದ್ಧವಾಗಬೇಕಿದೆ. ಮುಂಬೈ ಪೊಲೀಸರಿಗೆ ಅಶ್ವದಳ ಒದಗಿಸಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ.

ಟ್ರಾಫಿಕ್ ಕಂಟ್ರೋಲ್ ಮತ್ತು ಜನಜಂಗುಳಿ ನಿಯಂತ್ರಣಕ್ಕೆ ಅಶ್ವದಳ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬರೋಬ್ಬರಿ 88 ವರ್ಷಗಳ ನಂತರ ಅಶ್ವದಳ ಮತ್ತೆ ಮುಂಬೈನಲ್ಲಿ ಕಾರ್ಯನಿರ್ವಹಿಸಲಿದೆ. ಈ ವರ್ಷದ ಗಣರಾಜ್ಯೋತ್ಸವ ದಿನದಿಂದ ಚಾಲನೆ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಗತ್ಯ ಬಿದ್ದರೆ ಪುಣೆ ಮತ್ತು ನಾಗಪುರದಿಂದ ಅಗತ್ಯ ಪರಿಕರಗಳನ್ನು ತರಿಸಿಕೊಳ್ಳಲಾಗುವುದು. 1932 ರಲ್ಲಿಸಾರಿಗೆ ಸಂಪರ್ಕ ಅಭಿವೃದ್ಧಿಗೊಂಡಾಗ ಅಶ್ವದಳವನ್ನು ಕೈ ಬಿಡಲಾಗಿತ್ತು. 

ಮುಂಬೈ ಪೊಲೀಸರು ಅತ್ಯಾಧುನಿಕ ಜೀಪ್ ಮತ್ತು ಬೈಕ್ ಗಳನ್ನು ಹೊಂದಿದ್ದಾರೆ. ಆದರೆ ಹಬ್ಬ ಹರಿದಿನದ ಸಂದರ್ಭ ಕುದುರೆಯಲ್ಲಿ ತೆರಳುವುದೇ ಅನುಕೂಲ. ಒಬ್ಬ ಪೊಲೀಸ್ ಕುದುರೆ ಮೇಲೆ ಇದ್ದರೆ  30 ಜನ ಪೊಲೀಸರು ಗ್ರೌಂಡ್ ನಲ್ಲಿ ಇದ್ದಂತೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಈಗ ಪಾರ್ಟೋಲ್ ಮಾಡುವ ಸ್ಥಿತಿ 7 ರಿಂದ 10  ಕಿಮೀ ಇದೆ. ಈಗಾಗಲೇ ಮೂವತ್ತು ಕುದುರೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಯುನಿಟ್ ಒಂದರಲ್ಲಿ ಒಬ್ಬ ಸಬ್ ಇನ್ಸ್ ಪೆಕ್ಟರ್, ಒಬ್ಬ ಅಸಿಸ್ಟಂಟ್ ಪಿಎಸ್‌ಐ, ನಾಲ್ಕು ಹವಾಲ್ದಾರ್ ಗಳು, ಮೂವತ್ತೆರಡು ಜನ ಪೇದೆ ಇರುತ್ತಾರೆ. ಮುಂದಿನ ಆರು ತಿಂಗಳಿನಲ್ಲಿ ಯುನಿಟ್ ಗೆ ಸ್ಪಷ್ಟ ರೂಪ ಬರಲಿದೆ ಎಂದು ತಿಳಿಸಿದರು.

ವಾಕಿ ಟಾಕಿ ಇಲ್ಲದೆ ಕೆಲಸ ಮಾಡುವುದು, ಟೆಂಟ್ ಜಂಪಿಂಗ್ ತರಬೇತಿಯನ್ನು ನೀಡಲಾಗುವುದು. ಪ್ರತಿಯೊಬ್ಬ ಕುದುರೆ ಸವಾರ ಪೊಲೀಸರು ಬಾಡಿ ಕ್ಯಾಮರಾದೊಂದಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.