ಮುಂಬೈನಲ್ಲಿ ಮತ್ತಷ್ಟು ಇಳಿಕೆ| ಮೊನ್ನೆ 5000+ ಕೇಸ್‌, ನಿನ್ನೆ 3000+ ಕೇಸ್‌| ಬಿಗಿ ಕ್ರಮ ಎಫೆಕ್ಟ್, ಕರ್ನಾಟಕಕ್ಕೂ ಆಶಾಕಿರಣ

ಮುಂಬೈ(ಏ.27): ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸೋಮವಾರ ಕೇವಲ 3792 ಹೊಸ ಕೊರೋನಾ ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಸತತ 2 ದಿನಗಳಿಂದ 6000ಕ್ಕಿಂತ ಕಡಿಮೆ ಕೇಸು ದಾಖಲಾಗಿದ್ದ ಮುಂಬೈನಲ್ಲಿ ಇದೀಗ ಹೊಸ ಪ್ರಕರಣಗಳ ಸಂಖ್ಯೆ 4000ಕ್ಕಿಂತ ಕೆಳಗೆ ಇಳಿದಿರುವುದು, 2ನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬರುತ್ತಿದೆ ಎಂಬುದರ ಸುಳಿವು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದರಿಂದಾಗಿ ಕಠಿಣ ಕ್ರಮ ಕೈಗೊಂಡರೆ ಸೋಂಕು ನಿಯಂತ್ರಿಸಬಹುದು ಎಂಬ ಆಶಾಭಾವನೆ ಕರ್ನಾಟಕಕ್ಕೂ ಮೂಡಿದೆ.

"

ದೇಶದಲ್ಲೇ ಅತಿ ಹೆಚ್ಚು ಸೋಂಕು ದಾಖಲಾಗುತ್ತಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ ಈಗಲೂ ಸೋಂಕು ಏರಿಕೆಯ ಗತಿಯಲ್ಲೇ ಇದೆ. ಆದರೆ ರಾಜಧಾನಿ ಮುಂಬೈನಲ್ಲಿ ಸೋಂಕು ನಿಯಂತ್ರಣಕ್ಕಾಗಿ ‘ಎಟಿಎಂ’ ರಣತಂತ್ರ ರೂಪಿಸಲಾಗಿತ್ತು. ಅಂದರೆ, ಎ-ಅಸೆಸ್‌, ಟಿ-ಟ್ರಯೇಜ್‌ ಆ್ಯಂಡ್‌ ಟ್ರಾನ್ಸ್‌ಫರ್‌ ಮತ್ತು ಎಂ-ಮ್ಯಾನೇಜ್‌ಮೆಂಟ್‌. ಅಂದರೆ ಸೋಂಕಿತರ ಪತ್ತೆ, ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ದಾಖಲು ಹಾಗೂ ನಿರ್ವಹಣೆ. ಇದು ಅತ್ಯಂತ ಯಶಸ್ವಿಯಾಗಿರುವ ಕಾರಣ ಏಪ್ರಿಲ್‌ ಮೊದಲ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಸೋಂಕಿತರ ಸಂಖ್ಯೆ ಕಳೆದೊಂದು ವಾರದಿಂದ ಹಂತಹಂತವಾಗಿ ಇಳಿಕೆ ಕಾಣುತ್ತಿದೆ. ಅದರಲ್ಲೂ ಶನಿವಾರ 5888, ಭಾನುವಾರ 5542 ಪ್ರಕರಣ ದೃಢಪಟ್ಟಿದ್ದು, ಸೋಮವಾರ ಮತ್ತಷ್ಟುಕುಸಿದು, 3792ಕ್ಕೆ ತಲುಪಿದೆ.

ಕೊರೋನಾ ಪಾಸಿಟಿವ್ ಬಂದ ಕೂಡಲೇ ಏನು ಮಾಡಬೇಕು?

ಮೊದಲ ಅಲೆಯ ವೇಳೆ ಮುಂಬೈನಲ್ಲಿ ನಿತ್ಯ 15000-18000 ಜನರಲ್ಲಿ ರೋಗ ಪತ್ತೆ ಪರೀಕ್ಷೆ ನಡೆಸುತ್ತಿದ್ದರೆ, 2ನೇ ಅಲೆಯಲ್ಲಿ ಅದನ್ನು 40000-50000ಕ್ಕೆ ಹೆಚ್ಚಿಸಲಾಗಿತ್ತು. ಇದು ಸೋಂಕು ಪತ್ತೆಯಲ್ಲಿ ಮತ್ತು ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಇತ್ತೀಚಿನ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದ ಖ್ಯಾತ ವೈದ್ಯ ಡಾ.ಶಶಾಂಕ್‌ ಜೋಶಿ ವಿಶ್ಲೇಷಿಸಿದ್ದಾರೆ.

ಎಟಿಎಂ ರಣತಂತ್ರ

ಮುಂಬೈ ಪಾಲಿಕೆ ಕೊರೋನಾ ನಿಯಂತ್ರಣಕ್ಕೆ ‘ಎಟಿಎಂ’ - ಅಸೆಸ್‌, ಟ್ರಯೇಜ್‌ ಆ್ಯಂಡ್‌ ಟ್ರಾನ್ಸ್‌ಫರ್‌ ಮತ್ತು ಮ್ಯಾನೇಜ್‌ಮೆಂಟ್‌ ಎಂಬ ರಣತಂತ್ರ ರೂಪಿಸಿತ್ತು. ಅದರ ಮೂಲಕ ಸೋಂಕಿತರ ಪತ್ತೆ, ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ಸೋಂಕಿತರ ನಿರ್ವಹಣೆ ಮಾಡುತ್ತಿತ್ತು. ಅದು ಯಶಸ್ವಿಯಾಗಿದೆ.

ಬೆಂಗಳೂರಲ್ಲಿ ಕೊರೋನಾ ಕೇರ್