Asianet Suvarna News Asianet Suvarna News

ಮುಂಬೈ ಟು ಬೆಂಗಳೂರು ಚೇಸ್ ಮಾಡಿ ನಕಲಿ IPS ಅಧಿಕಾರಿ ಅರೆಸ್ಟ್!

ನಕಲಿ ಐಪಿಎಸ್‌ ಅಧಿಕಾರಿ ಸೆರೆಗೆ ಮುಂಬೈ- ಬೆಂಗಳೂರು ಚೇಸ್‌!| ನಕಲಿ ಐಪಿಎಸ್‌ ಅಧಿಕಾರಿ ಕರ್ನಾಟಕದಲ್ಲಿ ಸೆರೆ

Mumbai Crime branch arrests fake IPS officer after 1200km long car chase pod
Author
Bangalore, First Published Oct 11, 2020, 8:21 AM IST
  • Facebook
  • Twitter
  • Whatsapp

ಮುಂಬೈ(ಆ.11): ತಾನೊಬ್ಬ ಐಪಿ​ಎಸ್‌ ಅಧಿ​ಕಾ​ರಿ ಎಂದು ಸುಳ್ಳು ಹೇಳಿ ಮುಂಬೈನ ಉಡು​ಪು ಉದ್ಯ​ಮಿಯೊ​ಬ್ಬ​ರಿಂದ 16 ಲಕ್ಷ ರು. ಹಣ ಸುಲಿಗೆ ಮಾಡಿದ್ದ ರಾಜ​ಸ್ಥಾ​ನದ ಅಜ್ಮೇರ್‌ ಮೂಲದ ವ್ಯಕ್ತಿ​ಯೊ​ಬ್ಬ​ನನ್ನು 1600 ಕಿ.ಮೀ. ದೂರ ಸಿನಿ​ಮೀಯ ಕಾರ್‌ ಚೇಸ್‌ ಬಳಿಕ ಮುಂಬೈ ಪೊಲೀ​ಸರು ಬೆಂಗ​ಳೂ​ರಿ​ನಲ್ಲಿ ಬಂಧಿ​ಸಿ​ದ್ದಾ​ರೆ.

ರಾಜ​ಸ್ಥಾ​ನದ ಅಜ್ಮೇರ್‌ ಜಿಲ್ಲೆ ಬ್ಯಾವಾರ್‌ ಗ್ರಾಮದ ಶಿವ​ಶಂಕರ ಶರ್ಮಾ ಎಂಬಾ​ತನೇ ಬಂಧಿತ. ಸುಲಿ​ಗೆ​ಯನ್ನೇ ಪ್ರಮುಖ ವೃತ್ತಿ​ಯಾ​ಗಿ​ಸಿ​ಕೊಂಡಿದ್ದ ಈತ ಮುಂಬೈನ ಉಡುಪು ಉದ್ಯಮಿ ಮೊಹ​ಮ್ಮದ್‌ ಎಹ್ತೇಶಾಂ ಅಸ್ಲಂ ನವೀ​ವಾಲಾ ಎಂಬು​ವ​ರಿಂದ 16 ಲಕ್ಷ ರು. ಸುಲಿಗೆ ಮಾಡಿದ್ದ.

ಮುಂಬೈನ ಮರೈನ್‌ ಡ್ರೈವ್‌ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ಕೊಂಡು ಶರ್ಮಾಗೆ ಬಲೆ ಬೀಸಿ​ದರು. ಆತನ ಮೊಬೈಲ್‌ ಲೊಕೇ​ಶನ್‌ ಆಧ​ರಿಸಿ ಗುಜ​ರಾ​ತ್‌ಗೆ ಹೋದ​ರು. ಆದರೆ ಕ್ಷಣ ಕ್ಷಣಕ್ಕೂ ಶರ್ಮಾ ತನ್ನ ಸ್ಥಳ ಬದ​ಲಿ​ಸು​ತ್ತ ಪೊಲೀ​ಸ​ರಿಗೆ ಚೆಳ್ಳೆ​ಹಣ್ಣು ತಿನ್ನಿ​ಸು​ತ್ತಿ​ದ್ದ. ಕೊನೆಗೆ ಪೊಲೀ​ಸರು ಲೊಕೇ​ಶನ್‌ ಆಧ​ರಿಸಿ ಶರ್ಮಾ ಕಾರು ಚೇಸ್‌ ಮಾಡಿ​ಕೊಂಡು 1200 ಕಿ.ಮೀ. ದೂರದ ಬೆಂಗ​ಳೂ​ರು​ವ​ರೆಗೂ ಬಂದರು. ಆಗ ಕಳೆದ ಮಂಗ​ಳ​ವಾರ ಬೆಂಗ​ಳೂ​ರಲ್ಲಿ ಆತ ಸಿಕ್ಕಿ​ಬಿ​ದ್ದಿ​ದ್ದಾ​ನೆ.

ಆಗಿ​ದ್ದೇ​ನು?:

ನವೀ​ವಾಲಾ ಅವರು ಗಾರ್ಮೆಂಟ್‌ ರಫ್ತು ಉದ್ಯ​ಮಿ​ಯಾ​ಗಿದ್ದು, ಇವರ ಮೇಲೆ ಈ ಹಿಂದೆ ಕಂದಾಯ ವಂಚ​ನೆಯ ಕೆಲವು ಪ್ರಕ​ರ​ಣ​ಗ​ಳಿ​ದ್ದವು. ಇದನ್ನು ತನ್ನ ಆಪ್ತರ ಮೂಲಕ ಶರ್ಮಾ ತಿಳಿ​ದು​ಕೊಂಡಿದ್ದ. ಇದನ್ನೇ ‘ಬಂಡ​ವಾಳ’ ಆಗಿ​ಸಿ​ಕೊಂಡ ಶರ್ಮಾ, ನವೀ​ವಾಲಾ ಅವ​ರಿಗೆ ಫೋನ್‌ ಮಾಡಿ, ‘ನಾನು ಐಪಿ​ಎಸ್‌ ಅಧಿ​ಕಾರಿ. ನಿಮ್ಮ ಮೇಲೆ ಸುಂಕ ಹಾಗೂ ಕಂದಾಯ ವಂಚನೆ ದೂರು ಬಂದಿ​ದೆ. ಈ ಬಗ್ಗೆ ‘ಡೀ​ಲ್‌’ ಮಾಡಿ​ಕೊ​ಳ್ಳಲು ಮುಂಬೈನ ಸ್ಟಾರ್‌ ಹೋಟೆ​ಲ್‌ಗೆ ಬನ್ನಿ’ ಎಂದ.

ನವೀ​ವಾಲಾ ಆ ಸ್ಟಾರ್‌ ಹೋಟೆ​ಲ್‌ಗೆ ಬಂದಾ​ಗ ಮಾತು​ಕತೆ ವೇಳೆ ಜಗಳ ನಡಯಿತು. ಆಗ ಶರ್ಮಾ ಹಾಗೂ ಆತನ ಸಹ​ಚ​ರರು ನವೀ​ವಾಲಾ ಮೇಲೆ ಹಲ್ಲೆ ನಡೆ​ಸಿ​ದರು. ಬಂದೂ​ಕಿ​ನಿಂದ ಬೆದ​ರಿಸಿ ಗುಜ​ರಾ​ತ್‌ಗೆ ಕರೆ​ದೊ​ಯ್ದ​ರು. ಅಲ್ಲಿ 16 ಲಕ್ಷ ರು. ಸುಲಿಗೆ ಹಣ ಪಡೆದು ನವೀ​ವಾ​ಲಾ​ನನ್ನು ಬಿಟ್ಟು ಕಳಿ​ಸಿ​ದ​ರು. ಬಳಿಕ ಆಘಾ​ತ​ಗೊಂಡ ನವೀ​ವಾಲಾ ಮುಂಬೈ ಹಾಗೂ ಗುಜ​ರಾತ್‌ ಪೊಲೀ​ಸ​ರಿಗೆ ದೂರು ನೀಡಿ​ದರು.

1200 ಕಿ.ಮೀ. ಸಿನಿ​ಮೀಯ ಚೇಸ್‌:

ಮುಂಬೈನ ಮರೈನ್‌ ಡ್ರೈವ್‌ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ಕೊಂಡು ಶರ್ಮಾಗೆ ಬಲೆ ಬೀಸಿ​ದರು. ಆತನ ಮೊಬೈಲ್‌ ಲೊಕೇ​ಶನ್‌ ಆಧ​ರಿಸಿ ಗುಜ​ರಾ​ತ್‌ಗೆ ಹೋದ​ರು. ಆದರೆ ಕ್ಷಣ ಕ್ಷಣಕ್ಕೂ ಶರ್ಮಾ ತನ್ನ ಸ್ಥಳ ಬದ​ಲಿ​ಸು​ತ್ತ ಪೊಲೀ​ಸ​ರಿಗೆ ಚೆಳ್ಳೆ​ಹಣ್ಣು ತಿನ್ನಿ​ಸು​ತ್ತಿ​ದ್ದ.

ಕೊನೆಗೆ ಪೊಲೀ​ಸರು ಲೊಕೇ​ಶನ್‌ ಆಧ​ರಿಸಿ ಶರ್ಮಾ ಕಾರು ಚೇಸ್‌ ಮಾಡಿ​ಕೊಂಡು 1200 ಕಿ.ಮೀ. ದೂರದ ಬೆಂಗ​ಳೂ​ರು​ವ​ರೆಗೂ ಬಂದರು. ಆಗ ಕಳೆದ ಮಂಗ​ಳ​ವಾರ ಬೆಂಗ​ಳೂ​ರಲ್ಲಿ ಆತ ಸಿಕ್ಕಿ​ಬಿ​ದ್ದಿ​ದ್ದಾ​ನೆ.

ಹವ್ಯಾಸಿ ಕ್ರಿಮಿ​ನ​ಲ್‌:

ಶರ್ಮಾ ಹವ್ಯಾಸಿ ಕ್ರಿಮಿ​ನಲ್‌. ಕಳೆದ ವರ್ಷ ತಾನು ಐಪಿ​ಎಸ್‌ ಅಧಿ​ಕಾರಿ ಎಂದು ಹೇಳಿ ಹೋಟೆಲ್‌ ಉದ್ಯ​ಮಿ​ಗೆ ಲಕ್ಷಾಂತರ ರು. ವಂಚಿ​ಸಿ​ದ್ದ​ಕ್ಕಾಗಿ ಮಧ್ಯ​ಪ್ರ​ದೇ​ಶ​ದಲ್ಲಿ ಬಂಧಿ​ತ​ನಾ​ನಾ​ಗಿದ್ದ. ಗುಜ​ರಾ​ತ್‌ನ ಮಹಿಳಾ ಪೊಲೀಸ್‌ ಅಧಿ​ಕಾ​ರಿ​ಯನ್ನು ಮದು​ವೆ ಮಾಡಿಕೊಳ್ಳುವು​ದಾಗಿ ವಂಚಿ​ಸಿ ಆಕೆಯ ಖಾತೆ​ಯಿಂದ ಹಣ ಲಟಾ​ಯಿಸಿ ಪರಾ​ರಿ​ಯಾ​ಗಿ​ದ್ದ.

ನವೀ​ವಾಲಾ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀ​ಸರು ತನಿಖೆ ಆರಂಭಿಸಿ, ಈಗ ಶರ್ಮಾ​ನನ್ನು ಬಂಧಿ​ಸಿ​ದ್ದಾ​ರೆ.

ನವೀವಾಲಾ ವಿರುದ್ಧ ತೆರಿಗೆ ವಂಚನೆ ಪ್ರಕರಣಗಳು ಇದ್ದವು. ಇದನ್ನು ತಿಳಿದ ಆರೋಪಿ, ತಾನೊಬ್ಬ ಐಪಿಎಸ್‌ ಅಧಿಕಾರಿ ಎಂದು ಹೇಳಿ ಮುಂಬೈನ್‌ ಸ್ಟಾರ್‌ ಹೋಟೆಲ್‌ಗೆ ಡೀಲ್‌ಗೆ ಕರೆದಿದ್ದ. ನವೀವಾಲಾ ಹೋದಾಗ ಜಗಳ ಆಯಿತು. ಬಂದೂಕು ಬಳಸಿ ಬೆದರಿಸಿ ಶರ್ಮಾ, ಸಹಚರರು, 16 ಲಕ್ಷ ರು. ಪಡೆದು ಬಿಟ್ಟು ಕಳುಹಿಸಿದ್ದರು. ನವೀವಾಲಾ ಪೊಲೀಸರಿಗೆ ದೂರು ನೀಡಿದ್ದರು.

Follow Us:
Download App:
  • android
  • ios