Asianet Suvarna News Asianet Suvarna News

ಬಸ್‌ ಓಡಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತ, ಪ್ರಯಾಣಿಕರು ಪಾರು!

ಬಸ್‌ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ| ಪವಾಡಸದೃಶ ರೀತಿಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರು| ಫಿಕ್‌ ಸಿಗ್ನಲ್‌ ಪೋಸ್ಟ್‌ಗೆ ಡಿಕ್ಕಿ 

Mumbai bus driver suffers heart attack at wheels rams into vegetable shop pod
Author
Bangalore, First Published Oct 21, 2020, 9:08 AM IST

ಮುಂಬೈ(ಅ.21): ಬಸ್‌ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಉಂಟಾಗಿ, ಅದರಲ್ಲಿದ್ದ 9 ಜನ ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ.

ಮಂಗಳವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಬೃಹನ್ಮುಂಬೈ ಎಲೆಕ್ಟ್ರಿಕ್‌ ಸಪ್ಲೈ ಆ್ಯಂಡ್‌ ಟ್ರಾನ್ಸ್‌ಪೋರ್ಟ್‌ (ಬಿಇಎಸ್‌ಟಿ) ಸಂಸ್ಥೆಯ ಬಸ್‌ ಮುಂಬೈನ ಚೆಂಬೂರಿನಿಂದ ಟಾಟಾ ಪವರ್‌ ಹೌಸ್‌ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕ ಹೃದಯಾಘಾತಕ್ಕೆ ತುತ್ತಾಗಿದ್ದರಿಂದ ಬಸ್‌ ನಿಯಂತ್ರಣ ತಪ್ಪಿ ಟ್ರಾಫಿಕ್‌ ಸಿಗ್ನಲ್‌ ಪೋಸ್ಟ್‌ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬಸ್‌ನಲ್ಲಿ ಪೊಲೀಸ್‌ ಸಿಬ್ಬಂದಿ ಸೇರಿದಂತೆ 9 ಜನ ಪ್ರಯಾಣಿಕರಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಚಾಲಕನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

Follow Us:
Download App:
  • android
  • ios