1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ| ಡಾ. ಬಾಂಬ್ ಖ್ಯಾತಿಯ ಜಲೀಸ್ ಅನ್ಸಾರಿ| ಪೆರೋಲ್ ಮೇಲೆ ಬಿಡುಗಡೆ ಹೊಂದಿ ಪರಾರಿಯಾಗಿದ್ದ ಜಲೀಸ್ ಅನ್ಸಾರಿ| ಉತ್ತರಪ್ರದೇಶದ ಕಾನ್ಪುರದಲ್ಲಿ ಮತ್ತೆ ಬಂಧಿಸಿದ ಪೊಲೀಸರು| ಜಲೀಸ್ ಪರಾರಿಯಾದ ಕುರಿತು ಮಾಹಿತಿ ನೀಡಿದ್ದ ಕುಟುಂಬಸ್ಥರು| 

ಲಕ್ನೋ(ಜ.17): ಪೆರೋಲ್ ಮೇಲೆ ಬಿಡುಗಡೆಯಾಗಿ ಪರಾರಿಯಾಗಿದ್ದ 1993 ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಜಲೀಸ್ ಅನ್ಸಾರಿಯನ್ನು ಉತ್ತರಪ್ರದೇಶದಲ್ಲಿ ಮತ್ತೆ ಬಂಧಿಸಲಾಗಿದೆ. 

ಡಾ.ಬಾಂಬ್ ಎಂದೇ ಕರೆಯಲ್ಪಡುವ ಈ ಕುಖ್ಯಾತ ಉಗ್ರ, ಬಾಂಬ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದ. 1993ರ ಮುಂಬೈ ಸರಣಿ ಸ್ಫೋಟದಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದು, ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ.

ಆದರೆ 21 ದಿನಗಳ ಪೆರೋಲ್ ಪಡೆದು ಬಿಡುಗಡೆ ಹೊಂದಿದ್ದ ಅನ್ಸಾರಿ, ಪರಾರಿಯಾಗಿ ಉತ್ತರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. 

Scroll to load tweet…

ಇನ್ನು ಜಲೀಸ್ ಪರಾರಿಯಾಗಿರುವ ಕುರಿತು ಖುದ್ದು ಆತನ ಕುಟುಂಬಸ್ಥರೇ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಪತ್ತೆ ತಂಡ ರಚಿಸಿದ್ದ ಮುಂಬೈ ಪೊಲೀಸರು, ಉತ್ತರ ಪ್ರದೇಶದ ಕಾನ್ಪುರದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.