ಗಗನ ಸಖಿಯರಂತೆಯೇ ಬಸ್‌ ಸಖಿಯರನ್ನೂ ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದೆ. ಇದು ಎಲ್ಲಿ? ಎತ್ತ?  

ವಿಮಾನದಲ್ಲಿ ಗಗನಸಖಿ ಇರುವಂತೆ ಬಸ್‌ನಲ್ಲಿಯೂ ಇದ್ದರೆ ಎಷ್ಟು ಚೆನ್ನಾಗಿತ್ತು. ಕುಳಿತಲ್ಲಿಯೇ ಸುಂದರಿಯರು ಸೇವೆ ಸಲ್ಲಿಸಿದರೆ ಆಹಾ ಎಷ್ಟು ಸೊಗಸು ಎಂದೆಲ್ಲಾ ಕನಸು ಕಾಣುತ್ತಿದ್ದ ಪ್ರಯಾಣಿಕರು ಫುಲ್‌ ಖುಷ್‌ ಆಗುವ ಸುದ್ದಿಯೊಂದು ಇದೀಗ ಬಂದಿದೆ. ಹೌದು. ಬಸ್ಸಿನಲ್ಲಿಯೂ ಬಸ್‌ ಸಖಿ ಭಾಗ್ಯವನ್ನು ಸರ್ಕಾರ ಕಲ್ಪಿಸಿದ್ದು, ಇನ್ನು ಮುಂದೆ ಗಗನ ಸಖಿಯಂತೆ ಇವರೂ ಪ್ರಯಾಣಿಕರ ಸೇವೆಯಲ್ಲಿ ತೊಡಗಲಿದ್ದಾರೆ. ಈ ಬಸ್‌ ಸಖಿಯರ ಹೆಸರು ಶಿವನೇರಿ ಸುಂದರಿ!

ಅಂದಹಾಗೆ, ಇದು ನಮ್ಮ ಕರ್ನಾಟಕದಲ್ಲಿ ಅಲ್ಲ ಬಿಡಿ. ಶಿವನೇರಿ ಸುಂದರಿಯರನ್ನು ನೋಡಬೇಕು ಎಂದರೆ ನೀವು ಮಹಾರಾಷ್ಟ್ರಕ್ಕೆ ಹೋಗಬೇಕು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಮುಂಬೈ ಮತ್ತು ಪುಣೆ ನಡುವೆ ಕಾರ್ಯನಿರ್ವಹಿಸುವ ಇ-ಶಿವನೇರಿ ಬಸ್‌ಗಳಲ್ಲಿ ಬಸ್ ಸಖಿಯರ ಸೇವೆಯನ್ನು ಆರಂಭಿಸುತ್ತಿದೆ. ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡಲು, ವಿಮಾನದಲ್ಲಿ ಹಾರಾಡುತ್ತಿರುವಂತೆಯೇ ಅನ್ನಿಸಬೇಕು ಎನ್ನುವ ಕಾರಣಕ್ಕೆ ಶಿವನೇರಿ ಸುಂದರಿ ಎಂಬ ಯೋಜನೆಯನ್ನು ಸಂಸ್ಥೆ ಪರಿಚಯಿಸುತ್ತಿದೆ. ಈ ಯೋಜನೆ ಅಡಿಯಲ್ಲಿ, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಪ್ರತಿ ಬಸ್‌ನಲ್ಲಿ ತರಬೇತಿ ಪಡೆದ ಸಖಿಯರು ಇರುತ್ತಾರೆ.

ಪೋಸ್ಟ್​ ಮಾರ್ಟಮ್​ನಲ್ಲಿ ದೇಹ ಇನ್ನೇನು ಕೊಯ್ಯಬೇಕು ಎನ್ನುವಷ್ಟರಲ್ಲಿಯೇ ಎದ್ದು ಕುಳಿತ ಕುಡುಕ!

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, "ಮುಂಬೈ-ಪುಣೆ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವನೇರಿ ಬಸ್‌ಗಳು ಈಗ 'ಶಿವನೇರಿ ಸುಂದರಿ' ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಮೂಲಕ ಪ್ರಯಾಣಿಕರಿಗೆ ಹೆಚ್ಚುವರಿ ಆತಿಥ್ಯ ಸೇವೆಗಳನ್ನು ಒದಗಿಸಲಾಗುತ್ತದೆ. ಇದು ವಿಮಾನದೊಳಗಿನ ಸೇವೆಗಳ ಮಾದರಿಯೇ ಇರುತ್ತದೆ. ಪ್ರಯಾಣಿಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉತ್ತಮ ಗುಣಮಟ್ಟದ ಸಹಾಯವನ್ನು ಈ ಸಖಿಯರಿಂದ ಪಡೆಯಬಹುದು. MSRTC ಸಹ ನವೀನತೆಯನ್ನು ಪರಿಚಯಿಸಲು ಈ ಹೊಸ ಯೋಜನೆ ರೂಪಿಸಿದೆ. ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಭವಿಷ್ಯದಲ್ಲಿ ಮತ್ತಷ್ಟು ಇಂಥ ಯೋಜನೆ ರೂಪಿಸಲಾಗುವುದು ಎಂದಿದೆ.

ಇದೇನಾದ್ರೂ ಸಕ್ಸಸ್‌ ಆದರೆ ಬೇರೆ ರಾಜ್ಯಗಳಲ್ಲಿಯೂ ಬಸ್‌ ಸಖಿಯರು ಬರುವ ದಿನ ದೂರವಿಲ್ಲ. ವಿಮಾನಗಳಲ್ಲಿ ಹೋಗಲು ಸಾಧ್ಯವಾಗದವರು, ಗಗನಸಖಿಯರ ಕನಸು ಕಾಣುತ್ತಿರುವವರು ಬಸ್‌ನಲ್ಲಿಯೇ ಅದೇ ಮಾದರಿಯಲ್ಲಿ ಸೌಲಭ್ಯ ಪಡೆಯಲು ಸಹಾಯವಾಗುವ ದಿನ ಹತ್ತಿರವಿದೆ ಎಂದೇ ಆಶಿಸಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ರೀತಿಯ ಇನ್ನೂ ಹಲವು ಯೋಜನೆಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಆರೋಗ್ಯ ಕೇಂದ್ರಗಳ ಸ್ಥಾಪನೆ ಮತ್ತು ಸ್ಥಳೀಯ ಮಹಿಳಾ ಗುಂಪುಗಳಿಗೆ ಬೆಂಬಲ ನೀಡುವ ಯೋಜನೆಗಳನ್ನು ಸಂಸ್ಥೆಯ ವತಿಯಿಂದಲೇ ಆರಂಭಿಸಲು ಚಿಂತನೆ ನಡೆಸಲಾಗಿದೆ. ಆದರೆ ಶಿವನೇರಿ ಸುಂದರಿ ಯೋಜನೆಗೆ ಇದಾಗಲೇ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಇದು ವಿಕೃತ ಯೋಜನೆ ಎಂದು ಹೇಳಲಾಗುತ್ತಿದೆ. 

ದರ್ಶನ್​ ನನಗಾಗಿ ಡೇಟ್​ ಅಡ್ಜೆಸ್ಟ್​ ಮಾಡ್ಕೋತಿದ್ರು: ಅಂಥ ನಟನನ್ನು ನೋಡೇ ಇಲ್ಲ ಎಂದು ಹೊಗಳಿದ ಆ್ಯಂಕರ್​ ಶ್ವೇತಾ